ಪುಟ:ಉನ್ಮಾದಿನಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಳನೆಯ ಪರಿಚ್ಛೇದ 39 ಹೈಮವತಿ :-ಗೊತ್ತಿಲ್ಲದೆ ಉಂಟೆ ? ಅದನ್ನು ತಿಳಿದವಳಾಗಿಯೇ ಬೇಗಬೇಗನೆ ಮದುವೆ ಮಾಡಿದನು. ಅವಳಿಗೆ ಮೊದಲು ಏನೋ ಒಂದು ವಿಧವಾದ ಮದುವೆ ಯಾಗಿರಬೇಕೆಂದು ಗೊತ್ತಾಯಿತು, ಆದರೆ ಅದೆಂತಹ ಮದುವೆ ? ಮದುವೆಯಾದವ ಳಿಗೆ ವರನಲ್ಲಿ ಪ್ರಣಯ ಹುಟ್ಟಿ ಮದುವೆಯಾಗಬೇಕು. ಪ್ರಣಯವು ಹುಟ್ಟಬೇಕಾ ದರೆ ಪಾತ್ರನಿಗೂ ಪಾತ್ರಿಗೂ ಪರಸ್ಪರ ಕೆಲವು ಕಾಲ ಹೆಚ್ಚು ಆಂತರ್ಯವಾದ ಬಳಕೆ ಬೇಕು, ಅದಾವುದೂ ಇಲ್ಲ. ಅವಳಿಗೆ ಪ್ರಣಯವೆಂಬ ಪದಾರ್ಥವೇ ಗೊತ್ತಿಲ್ಲ, ಪುನಃ ಮತ್ತೊಂದು ಮದುವೆ ಮಾಡಿಬಿಟ್ಟರೆ, ಹಿಂದೆ ಹಿಂದೂಮತದ ಪ್ರಕಾರ ಆಗಿ ದೈಂಬ ಪ್ರಣಯಶೂನ್ಯವಾದ ಮದುವೆಯು ತಾನಾಗಿಯೇ ಮರೆತುಹೋಗುವುದೆಂದು ಬೇಗಬೇಗನೆ ಅವಸರಪಟ್ಟು, ಮದುವೆಯ ಕೆಲಸವನ್ನು ಮಾಡಿದನು. ” ನವೀನಗೆ ಪಾಲ:...ಮಾಡಿದ ಕೆಲಸವು ಸರಿಯಾದ ಕೆಲಸವಾಗಲಿಲ್ಲ.” ಹೈಮವತಿ : ಮಾಡದೆ ಹೋಗಿದ್ದರೆ ನೀನೇ ನೋಡು. ಹಣದ ಆಸೆಗೆ ಮಗಳ ಮೇಲಿನ ಮಮತೆಯನ್ನು ತೊರೆದುಬಿಟ್ಟು, ಅವಳನ್ನು ಇದುವರೆಗೂ ಹಿಂದೂ ಗಳ ಮನೆಯಲ್ಲಿ ಬಿಟ್ಟಿದ್ದೆವು. ಆ ಹಣವೂ ನಮ್ಮ ಕೈಬಿಟ್ಟು ಹೋಗುತ್ತಲಿತ್ತು, ಹುಡುಗಿಯನ್ನು ಒಬ್ಬ ಹಿಂದೂ ಹುಡುಗನು ಮದುವೆಮಾಡಿ ಕೊಂಡು ಕರೆದುಕೊಂಡು ಹೋಗಿದ್ದರೆ, ಆ ರಾಶಿ ಹಣ ನಮ್ಮ ಕೈಸೇರುತ್ತಲಿತ್ತೇ ? ನಾವು ಪುನಃ ಮದುವೆ ಮಾಡದೆ ಹೋಗಿದ್ದರೆ, ಹಣವೂ ಹೋಗಿ, ಬ್ರ ಸಮಾಜದಲ್ಲಿ ನಮಗೆ ತಲೆಯ ತಗ್ಗಿ ಹೋಗುತ್ತಲಿತ್ತು, ಉಯಿಲಿನ ಪ್ರಕಾರ ಹಣವೆಲ್ಲಾ ಹಿಂದೂ ಹುಡುಗನ ಪಾಲಾ ಗುತ್ತಲಿರಲಿಲ್ಲವೆ? ನಮ್ಮ ಮಕ್ಕಳಿಗೆ ಏನೂ ಬರುತ್ತಿರಲಿಲ್ಲ. ಮಾಡದೆ ಹೋಗಿದ್ದರೆ-- ನೀನು ಹೇಳು, ಏನಾಗುತ್ತಲಿತ್ತು ? ” ನವೀನಗೊಪಾಲ - ಹಣಕ್ಕೋಸ್ಕರ ಮಗಳನ್ನು ಹೀಗೆ ಉನ್ಮಾದಿನಿ ಯಾಗಿ ಮಾಡಿದುದು ಒಳ್ಳೆಯ ಕೆಲಸವಾಯಿತೆ ? ನಿನಗೆ ಹಣದಮೇಲೆ ಎಷ್ಟು ಆಸೆ ? ಹಾಳು ಹಣದ ಪಿಶಾಚಿಯಾಗಿ, ಮಕ್ಕಳ ಮೇಲಿನ ಮಮತೆ ಮುಂತಾದುದಲ್ಲಾ ತೊಲಗಿ ಹೋಯಿತು, ಮನಸ್ಸಿನಲ್ಲಿ ದುಃಖವುಂಟಾಗಲಿಲ್ಲವೆ ? ಅನುತಾಪ ಬೇಡವೆ? ೨ ಈ ಪರಿಯಾದ ಪತಿಯ ಮಾತಿನಿಂದ, ಹಿಮದಿಂದ ತೊಯಿದು ಅರಳಿದ ಪದ್ದದ ಹಾಗಿದ್ದ ಹೈಮವತಿಯ ಮುಖವು ಗಂಭೀರಭಾವವನ್ನು ತಾಳಿ, ಅಭಿಮಾನದಿಂದ ತಟಗುಟ್ಟಲಾರಂಭಿಸಿತು. ಹೈಮವತಿಯು ಮುಖವನ್ನು ಬೇರೆ ಕಡೆ ತಿರುಗಿಸಿಕೊಂಡು, ಪಕ್ಕದಲ್ಲಿದ್ದ ಹೆಂಗಸರನ್ನು ನೋಡಿ ಕರುಣಸ್ವರದಿಂದ, “ ನನಗೆ ದುಃಖವಿಲ್ಲವೆ?