ಪುಟ:ಉನ್ಮಾದಿನಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಂಟನೆಯ ಪರಿಚ್ಚಳ ನವೀನಗೋಪಾಲನು ಸ್ವಲ್ಪಹೊತ್ತು ಚಿಂತಿಸಿ ನೋಡಿ, ಅನಂತರ, 11 ಅದೇ ಸರಿಯಾದ ಮಾರ್ಗ, ನಾನು ಜ್ಯೋತಿಪ್ರಕಾಶನಿಗೆ ಹೇಗಾದರೂ ತಿಳಿಯಹೇಳಿ, ಆಗ ನಿಗೆ ಆಗಿರುವ ವಿವಾಹದ ಸಂಬಂಧವನ್ನು ಬಿಡುಗಡೆ ಮಾಡುವಹಾಗೆ ಮಾಡುವೆನು, ಅದಲ್ಲದೆ ಅವನು ಆ ಉನ್ಮಾದಿನಿಯನ್ನು ಕಟ್ಟಿಕೊಂಡು ಏನುತಾನೇ ಮಾಡಲಾಹನು ! ದುರ್ಗಾವತಿಯನ್ನು ಮೊದಲು ಮನೆಗೆ ಕರೆದುಕೊಂಡು ಬಾ ! ಆನಂತರ ಸರಪಕ್ಷದ ವರು ನಾವು ಹೇಳಿದಹಾಗೆ ಕೆಲಸ ಮಾಡಲೊಪ್ಪಿಕೊಂಡರೆ, ಆಗವರಿಗೆ ಮಗಳನ್ನು ಬಿಟ್ಟು ಕೊಟ್ಟು ಬಿಡುವ ” ಎಂದು ಹೇಳಿದನು, ಹೈಮವತಿಯು ಮುಖವನ್ನು ಅಲ್ಲಾಡಿಸುತ್ತ, ಈ ಆಹಾ ! ನಿನ್ನ ಬುದ್ಧಿಯು ಎಂತಹ ಯುಕ್ತಿಯುಕ್ತವಾದುದು ! ಮೊದಲು, ನೀನು ಅದನ್ನೆಲ್ಲಾ ವ್ಯವಸ್ಥೆ ಪಡಿಸು, ಅನಂತರ ಜ್ಯೋತಿ ಪ್ರಕಾಶನ ಮದುವೆಯ ಸಂಬಂಧವನ್ನು ಬಿಡಿಸಿ, ಹುಡುಗಿಯನ್ನು ಮನೆಗೆ ಕರೆತರಬೇಕು. ಹಾಗೆ ಮಾಡದಿದ್ದರೆ ಹುಡುಗಿಯ ಹೋಗಿ, ಅವಳೊಡನೆ ಆಸ್ತಿಯ ಕೈಬಿಟ್ಟು ಹೋಗಿಬಿಡುವುದು ” ಎಂದು ಹೇಳಿದಳು. « ಒಳ್ಳೆಯದು, ಹಾಗೆಯೇ ಮಾಡುವೆನು ” ಎಂದು ಹೇಳಿ ನವೀನಗೊಪ ಲನು ಜ್ಯೋತಿಪ್ರಕಾಶನ ಮನೆಯ ಕಡೆಗೆ ಬೇಗಬೇಗನೆ ಕಾಲುಹಾಕುತ್ತ ಹೊರಟು ಹೋದನು. ಎಂಟನೆಯ ಪರಿಚ್ಛೇದ. ಜೋತಿಪ್ರಕಾಶನು ನಿಟ್ಟುಸಿರನ್ನು ಬಿಟ್ಟು, (೧ ತಮ್ಮ ಮಾತುಗಳಲ್ಲಿ ನನಗೆ ನಂಬುಗೆ ಇಲ್ಲ. ಆದರೆ ಅವಸ್ಥೆಯನ್ನು ನೋಡಿದರೆ, ಈಗ ನಂಬುಗೆ ಯುಂಟಾಗುವುದು ” ಎಂದು ಹೇಳಿದನು. ತರ್ಕಲಂಕಾರ ಮಹಾಶಯನು, “ ತಾವು ಇಷ್ಟು ಸಹಜವಾಗಿ ನಂಬವಿರೆಂದು ನಾನು ಯೋಚಿಸಿರಲಿಲ್ಲ .” ಎಂದನು. ಜ್ಯೋತಿಪ್ರಕಾಶ :-( ಹಾಗೆ ನಂಬುವುದಕ್ಕೆ ಕಾರಣವುಂಟು ಮೊದಲಿನಿಂ ದಲೂ ಇಂತಹ ಘಟನೆಯೊಂದು ನಡೆದಿರಬೇಕೆಂದು ಊಹೆಯಿತ್ತು. ಈಗ ಅದು ಖಂಡಿತವ: ಯಿತು, ಈಗ ತಾವು ಹೇಳುವುದೇನು ?!”