ಪುಟ:ಉನ್ಮಾದಿನಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

42 ಉಾದಿನೀ ಸರ್ಕಾಲಂಕಾರ :- ನೀನು ಶಿಷ್ಯ ಮತ್ತು ಶಾಂತನಾದವನೆಂದು ತೋರು ತಿದೆ. ನಿನ್ನಲ್ಲಿಗೆ ಬರುವುದಕ್ಕೆ ಮೊದಲು ನಮಗೆ ಉಂಟಾಗಿದ್ದ ಭಯಕ್ಕೆ ಕಾರಣವಿಲ್ಲ ಎಂದು ಈಗ ಗೊತ್ತಾಯಿತು. ನಾವು ಹಳ್ಳಿಗಾಡಿನಲ್ಲಿರತಕ್ಕೆ ಹಿಂದೂಗಳು, ಬ್ರಹ್ಮಸಮಾಜಕ್ಕೆ ಸೇರಿದವರ ಬಳಿಗೆ ಹೋಗುವುದಕ್ಕೆ ಭಯಪಡುವೆವು. ಅದಲ್ಲದೆ ನವೀನಗೊಪಾಲನು ನಮ್ಮ ವಿಷಯದಲ್ಲಿ ನಡೆಯಿಸಿದ ವ್ಯವಹರಣೆಯನ್ನು ನೋಡಿ, ಹಿಂದೆ ನಡೆದಿರುವ ವೃತ್ತಾಂತವನ್ನೆಲ್ಲಾ ಹೇಳುವುದಕ್ಕೆ ಹೆದರುವೆವು.” ಜ್ಯೋತಿಪ್ರಕಾಶ :-* ನವೀನಗೋಪಾಲನು ನಿಮ್ಮನ್ನು ಕುರಿತು ನಿಷ್ಠುರ ಮಾಡಿದನೇನು ? ತರ್ಕಾಲಂಕಾರ :- ಮೊದಲು ನಿಷ್ಟುರ ಮಾಡಿದರು. ಅನಂತರ ಕಡೆಕಡೆಗೆ ಸಮಾಧಾನಗೊಂಡನು. ನಾನು, ' ನೀವೆ ನಿಮ್ಮ ಮಗಳು ಉನ್ಮಾದಿನಿಯಾಗುವುದಕ್ಕೆ ಕಾರಣರಾದಿರಿ' ಎಂದು ಒತ್ತಿ ಖಂಡಿತವಾಗಿ ಹೇಳಿದ ಮೇಲೆ ಸ್ವಲ್ಪ ಶಾಂತಮೂರ್ತಿ ಯನ್ನು ತಾಳಿದನು. ” ಜ್ಯೋತಿಪ್ರಕಾಶ : ನೀವು ಅವನಿಗೆ ನಿಜವನ್ನು ಹೇಳಿದಿರಿ, ನನಗೆ ಅದೆಲ್ಲಾ ಮೊದಲು ಗೊತ್ತಾಗಿರಲಿಲ್ಲ. ಈಗ ಆ ಉನ್ಮಾದಿನಿಯು ಹೇಳುವ ಮಾತುಗಳೂ ಮಾಡುವ ಕಾರ್ಯಗಳೂ ಎಲ್ಲಾ ಅರ್ಥವಾಗುತ್ತಲಿವೆ. ನಾನು ಈ ವಿವಾಹವನ್ನು ಮಾಡಿಕೊಂಡು ಎಷ್ಟು ಅನಾದವನ್ನು ಮಾಡಿರುವೆನೊ, ಅದನ್ನು ಇಷ್ಟೆಂದು ಹೇಳ ಲಾರೆನು, ಅವಳಿಗೆ ಮನಸ್ಸಿಗೆ ಎಷ್ಟು ಕಷ್ಟವಾಗಿ ಹೀಗೆ ಉನ್ಮಾದಿನಿಯಾಗಿರಬೇಕೋ, ಅದನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ತಾವು ಏನೂ ಹೇಳಿದರೂ ಅದನ್ನು ಮಾಡುವುದಕ್ಕೆ ಸಿದ್ಧನಾಗಿರುವೆನು. ತರ್ಕಲಂಕಾರನು ಸ್ವಲ್ಪ ಹೊತ್ತು ಹಾಗೆಯೇ ಯೋಚಿಸಿದನು. ಅನಂತರ ಒಂದು ತಡವೆ ಖಗೇಂದ್ರನ ಮುಖವನ್ನು ನೋಡಿದನು. ಪುನಃ ಸ್ವಲ್ಪ ಯೋಚಿಸಿದನು. ಪುನಃ ಜೋತಿಪ್ರಕಾಶನನ್ನು ಕುರಿತು, " ನಾನೇನು ಹೇಳಲಿ ? ನನ್ನ ತಲೆ ! ನೀನು ಮದುವೆಮಾಡಿಕೊಂಡು ಹೆಣ್ಣನ್ನು ಮನೆಗೆ ಕರೆದುಕೊಂಡು ಬಂದಿರುವಾಗ, ನಾವು ಅವಳನ್ನು ಮನೆಗೆ ಹೇಗೆ ಕರೆದುಕೊಂಡು ಹೋಗಲಾದೀತು ? ಅದು ಆಗಲಾರದು ” ಎಂದನು. ಜೋತಿಪ್ರಕಾಶ :- ಏತಕ್ಕೆ ಕರೆದುಕೊಂಡು ಹೋಗಕೂಡದು ? ನಮ್ಮ ಸಮಾಜದ ಮಂದಿರದಲ್ಲಿ ನಾವಿಬ್ಬರೂ ಪ್ರತಿಜ್ಞಾಬದ್ದರಾದುದು ಹೊರತು ನಮಗೆ