ಪುಟ:ಉನ್ಮಾದಿನಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಂಟನೆಯ ಪರಿಚ್ಛೇದ 43. annannmann ಗಂಡಹೆಂಡಂದಿರಿಗೆ ಮತ್ತಾವವಿಧವಾರ ಸಂಪರ್ಕವೂ ಆಗಿಲ್ಲ. ನಿಮ್ಮ ದುರ್ಗವ ತಿಯು ಮೊದಲು ಹೇಗೆ ಪವಿತ್ರಳಾಗಿ ಸತಿಯಾಗಿದ್ದಳೋ, ಈಗಲೂ ಹಾಗೆಯೇ ಶುದ್ಧ ೪ಾಗಿರುವಳು . ತರ್ಕಲಂಕಾರ :-47 ಆದರೂ ಈಗ ಆಗಿರುವ ವಿವಾಹದ ಸಮಾಚಾರವು ನಮ್ಮ ಹಿಂದೂಗಳಿಗೆ ತಿಳಿದರೆ, ಬಹಳ ಅನರ್ಥಕ್ಕೆ ಕಾರಣವಾಗುವುದು. ” ಜ್ಯೋತಿಪ್ರಕಾಶ :- ಹಾಗಾದರೆ, ಮತ್ತಾವ ವಿಚಾರದಲ್ಲಿ ನನ್ನೊಡನೆ ಮಾತನಾಡುವದಕ್ಕೆ ಬಂದಿರುವಿರಿ ? ಮತ್ತು ಹೇಳುವುದಕ್ಕೆ ಸಂಕುಚಿತರಾಗಿರುವಿರಿ ?” ತರ್ಕಾಲಂಕಾರ :- ರಾಮಗೋಪಾಲನು ಸಾಯುವ ಕಾಲದಲ್ಲಿ ರೊಕ್ಕ ವಾಗಿ ಅರುವತ್ತು ಸಾವಿರ ರೂಪಾಯಿಯನ್ನೂ, ಸ್ಥಾವರ ಆಸ್ತಿಯಾಗಿ ಎಪ್ಪತ್ತು, ಎಂಭತ್ತು ಸಾವಿರ ರೂಪಾಯಿಯನ್ನೂ ಬಿಟ್ಟು, ಉಯಿಲಿನ ಮೂಕವಾಗಿ ಅದನ್ನೆಲ್ಲಾ ದುರ್ಗಾವತಿಗೆ ಕೊಟ್ಟಿರುವನು, ಅದಕ್ಕೆಲ್ಲಾ ಅವಳ ಈ ಗಂಡನನ್ನು ಅಧಿಕಾರಿಯಾಗಿ ಮಾಡಿರುವನು, ಈಗ ಆ ಆಸ್ತಿಯೆಲ್ಲಾ ಯಾರ ವಶದಲ್ಲಿರುವುದೋ, ಅದನ್ನೂ ಕೇಳು ವುದಕ್ಕೆ ಬಂದೆನು. ಜ್ಯೋತಿಪ್ರಕಾಶ :-1 ನನಗೆ ಆ ವಿಚಾರವಾವುದೂ ಗೊತ್ತಿಲ್ಲ. ಆ ಹುಡು ಗಿಯ ಆಸ್ತಿಯೆಲ್ಲಾ ನವೀನಗೊಪಾ ಎನ ಸ್ವಾಧೀನದಲ್ಲಿರುವುದಾಗಿ ಮಾತ್ರ ಕೇಳಿರುವೆನು, 12 ತರ್ಕಾಲಂಕರನು ಸ್ವಲ್ಪ ಯೋಚಿಸಿ, ಒಂದುವೇಳೆ ಚಿಕಿತ್ಸೆಯಿಂದ ದುರ್ಗಾ ವತಿಯು ಆರೋಗ್ಯ ಲಾಭವನ್ನು ಹೊಂದಿ, ಶಾಸ್ತ್ರ ಪ್ರಕಾರ ಅವಳನ್ನು ನಾವು ಗ್ರಹಣ ಮಾಡುವುದಾದರೆ, ಅವಳ ಆಸ್ತಿಯನ್ನೆಲ್ಲಾ ಅವಳಿಗೆ ಕೊಡಬೇಕಾಗುವುದು ” ಎಂದನು. ಖಗೇಂದ್ರನಾಥನು ಆ ಕೂಡಲೆ, 14 ನನಗೆ ಆ ಆಸ್ತಿ ಮುಂತಾದುದು ಯಾವುದೂ ಬೇಡ, ನನಗೆ ಹೆಂಡತಿಯು ಆರೋಗ್ಯ ಸ್ಥಿತಿಯಲ್ಲಿ ಬಂದರೆ ಸಾಕು” ಎಂದನು. ಜ್ಯೋತಿಪ್ರಕಾಶ :-( ನಾನು ತಿಳಿದಿರುವಮಟ್ಟಿಗೆ ಅವಳು ನಿಮ್ಮನ್ನು ನೋಡಿ ದರೆ ಸಾಕು, ಅದರಿಂದಲೇ ಅವಳು ಆರೋಗ್ಯಲಾಭವನ್ನು ಹೊಂದಿ, ರೋಗವೆಲ್ಲಾ ಹೋಗಿ ಬಿಡುವುದು, ” ತರ್ಕಾಲಂಕಾರ ಮಹಾಶಯರು ಖಗೇಂದ್ರನನ್ನು ನೋಡಿ, 1 ಇನ್ನು ನಾನು ಹೇಳುವುದು ಏನು ಉಳಿದಿರುವುದು ? ” ಎಂದನು. ಖಗೇಂದ್ರನಾಥನು ಅವನ ಮಸ್ತಕನಾಗಿ, “ ನಾನು ಒಂದು ಕಡವೆ ಅವ ಳನ್ನು ನೋಡಲು ಇಷ್ಟವುಳ್ಳವನಾಗಿರುವೆನು ” ಎಂದನು.