ಪುಟ:ಉನ್ಮಾದಿನಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಂಟನೆಯ ಪರಿಚ್ಛೇದ amannammmmmmmmmmmmmmmmmMANMARAAN nanaman memanas « ಈ ದಿನ ಉನ್ಮಾದಿನಿಗೆ ಇಷ್ಟು ಆನಂದವೇಶಕ್ಕೆ?” ಎಂದು ಅಲ್ಲಿದ್ದ ನಾಲ್ಕು ಮಂದಿಯ ಯೋಚಿಸುತ್ತಲಿದ್ದರು. ಆದರೆ ಅವರಿಗೆ ಅದರ ಕಾರಣವನ್ನು ತಿಳಿಯಲಸಾಧ್ಯವಾಗಿತ್ತು, ಕ್ರಮವಾಗಿ ಅವರು ಉನ್ಮಾದಿನಿಯ ಸಮಾಸ , ಹೋಗಲಾರಂಭಿಸಿದರು. ಆದರೂ ಉನ್ಮಾದಿನಿಯು ಅತ್ತ ಕಡೆ ನೋಡಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವರೆಲ್ಲರೂ ಉನ್ಮಾದಿನಿಯ ಇದಿರಿಗೆ ಹೋಗಿ ನಿಂತರು. ಆದರೂ ಉನ್ಮಾದಿನಿಯು ಅವರಕಡೆ ಕಣ್ಣೆತ್ತಿ ನೋಡಲಿಲ್ಲ. ಈ ಸಮಯದಲ್ಲಿ ಜ್ಯೋತಿಪ್ರಕಾಶನು, 1 ಯಾರು ಬಂದಿರು ವರು ? ಇತ್ತ ಕಡೆ ತಿರುಗಿ ನೋಡು ! ” ಎಂದನು. ಉನ್ಮಾದಿನಿಯು ಕಣ್ಣೆತ್ತಿ ನೋಡಿದಳು. ವಿಸ್ಟಾರಿತ ನೇತ್ರಗಳಿಂದ ಸ್ಥಿರದೃಷ್ಟಿ ಯುಳ್ಳವಳಾಗಿ ಖಗೇಂದ್ರನಾಥನ ಮುಖವನ್ನು ನೋಡಿದಳು. ಶಿಲಾಮಯವಾದ ಮೂರ್ತಿಯ ಹಾಗೆ ನಿಶ್ಚಲವಾಗಿ ಸ್ಥಿರಭಾವದಿಂದ ಹಾಗೆಯೇ ಸ್ವಲ್ಪ ಹೊತ್ತು ನಿಂತಿ ದ್ದಳು. ಅವಳು ಈ ಪ್ರಕಾರ ನಿಂತಿರುವುದನ್ನು ನೋಡಿ ನಾಲ್ಕು ಮಂದಿಯ ವಿಸ್ಮಿತ ರಾಗಿ ಸ್ತಂಭಿತರಾದರು. ಆ ಮೂರ್ತಿಯನ್ನು ನೋಡಿ ಯಾರೂ ಕಣ್ಣೆವೆಯನ್ನು ಅಲು ಗಾಡಿಸಲಾರದೆ ನಿಂತಿದ್ದರು, ಯಾರ ಬಾಯಿಯಿಂದಲೂ ಒಂದು ಮಾತು ಇಲ್ಲ. ಅನಂತರ ಉನ್ಮಾದಿನಿಯು ಉನ್ಮಭಾವದಿಂದ ಓಡಿಬಂದು ಖಗೇಂದ್ರನಾಥನನ್ನು ಆಲಿಂಗನೆ ಮಾಡಿಕೊಂಡಳು. ಖಗೇಂದ್ರನಾಥನೂ ಉನ್ನತಭಾವದಿಂದ ಉನ್ಮಾದಿನಿ ಯನ್ನು ಆಲಿಂಗನೆ ಮಾಡಿ ಹಿಡಿದುಕೊಂಡನು. ಉನ್ಮಾದಿನಿಯು ಖಗೇಂದ್ರನಾಥನ ಈ ಪ್ರಕಾರವಾದ ಪ್ರಗಾಢವಾದ ಆಲಿಂಗನೆಯಲ್ಲಿ ಸ್ವಲ್ಪಹೊತ್ತು ಸ್ಥಿರಭಾವದಿಂದ ನಿಶ್ಚಲಳಾಗಿದ್ದಳು. ಆದರೆ ಅದೇನು ? ಕ್ರಮವಾಗಿ ಉನ್ಮಾದಿನಿಯ ಶರೀರವು ಬಿರುಸಾ ಗುತ್ತ ಬಂದುದೇಕೆ ? ಎಲ್ಲರೂ ವಿಸ್ಮಿತರಾಗಿ ನೋಡುತ್ತಿದ್ದ ಹಾಗೆ ಉನ್ಮಾದಿನಿಯ ಪ್ರಾಣವಾಯುವ ಹಾರಿಹೋಗಿತ್ತು. ಖಗೇಂದ್ರನಾಥನು ಮೂರ್ಛಿತನಾಗಿ ಅಲ್ಲಿಯೇ ಬಿದ್ದನು. ನವೀನ ಗೋಪಾಲನು ಆರ್ತನಾದ ಮಾಡಿದನು. ತರ್ಕಾಲಂಕಾರನು ಬುದ್ದಿ ಹೋದವನ ಹಾಗಾಗಿ ಅಲ್ಲಿಯೇ ನಿಂತಿದ್ದನು, ಜ್ಯೋತಿಪ್ರಕಾಶನು ಚೀತ್ಕಾರ ಮಾಡುತ್ತ, ಸತಿಯು ಪಪ್ಪಾಲಂಕೃತಳಾಗಿ ಪ್ರತಿಪಕ್ಷದಲ್ಲಿ ಸ್ವರ್ಗಕ್ಕೆ ಹೋದಳೆಂದು ಕೂಗಿದನು, ನಿ೦ ಪೂಣ೯6.