ಪುಟ:ಉಮರನ ಒಸಗೆ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಬಯಸುತ್ತಿರಬೇಕೆಂಬುದೇ ನನ್ನ ಆಶೆ, ಇದಕ್ಕವಕಾಶ ಮಾಡಿ ಕೊಡುವುದೇ ನಿನ್ನಿಂದ ನನಗೆ ಆಗಬೇಕಾದ ಮಹೋಪಕಾರ.” ಉಮರನ ಈ ಕವಿ ಸಹಜವಾದ ಕೋರಿಕೆಯನ್ನು ಕೇಳಿ, ಅಧಿಕಾರ ಬಿರುದುಗಳನ್ನು ಕೊಡಿಸುವೆನೆಂದು ಎಷ್ಟು ಹೇಳಿದರೂ ಆತನು ಅದಕ್ಕೊಡಂಬಡದಿರಲು, ನಿಚಾಮರ್-ಉಲ್-ಮುಲ್ಕನು ಆತನ ಜೀವನಕ್ಕೆ ಸಾಕಾಗುವಷ್ಟು ವರ್ಷಾಶನವನ್ನು ರಾಜ್ಯದ ಬೊಕ್ಕಸದಿಂದ ಕೊಡುವಂತೆ ಏರ್ಪಡಿಸಿದನು. ಇದನ್ನು ಉಮರನು ಅಂಗಿಕರಿಸಿ ತೃಪ್ತನಾಗಿ, ಗ್ರಂಥ ವ್ಯಾಸಂಗಕ್ಕೂ ತಮ್ಮ ವಿಚಾರಕ್ಕೆ ತನ್ನ ಜೀವಿತವನ್ನು ತೆತ್ತನು.

ಆತನು ಮೊದಲು ಜ್ಯೋತಿಶ್ಯಾಸ್ತ್ರದ ಸೂಕ್ಷಾಂಶಗಳನ್ನ ತತ್ಸಂಬಂಧವಾದ ಗಣಿತ ವಿವರಗಳನ್ನೂ ಶೋಧಿಸಲು ಮನಸ್ಸು ಮಾಡಿ, ಅರಬ್ಬಿ ಭಾಷೆಯಲ್ಲಿ ಬೀಜಗಣಿತ (ಆಲ್ಜಿಬ್ರಾ) ಗ್ರಂಥವೊಂದನ್ನು ಬರೆದರು. ಈ ಶಾಸ್ತ್ರದ ಸಮಸ್ಯೆಗಳಿಗೆ, ರೇಖಾಗಣಿತದ (ಜ್ಯಾಮೆಟ್ರಿ) ಶಂಕು ವಿಭಜನೆಯ ಕ್ರಮ (ಕೊನಿಕ್ ಸೆಕ್ಷನ್ಸ್)ಗಳಿಂದ ಸಮಾಧಾನ ಕೊಡುವ ವಿಧಾನವನ್ನು ಕಂಡುಹಿಡಿದುದು ಉಮರನ ವಿಶೇಷ ಕೌಶಲವೆಂದು ತಿಳಿದವರು ಹೇಳುತ್ತಾರೆ. ಹೀಗೆ ಆತನ ಗಣಿತ ಪ್ರಜ್ಞೆಯ ಕೀರ್ತಿಯು ಬೆಳೆಯುತ್ತಿರಲು, ಸುಮಾರು ಕಿಸ್ತ ವರ್ಷ ೧೦೭೪ರಲ್ಲಿ ಆ ದೇಶದ ಸುಲ್ತಾನ್ ಮಲ್ಲಿಕ್ ಷಹನು ಅಲ್ಲಿಯ ಸಂಚಾಂಗ ಪದ್ದತಿಯನ್ನು ಪರಿಷ್ಕಾರಗೊಳಿಸುವ ಕಾರ್ಯವನ್ನು ಈತನಿಗೊಪ್ಪಿಸಿದನು. ಈತನು ಆಗ ನಡೆಯಿಸಿದ ತಿದ್ದು ಪಾಟುಗಳು ತಾರೀಖ್ ಇ ಮಲಿಕ್ ಷಾಹಿ ” ಎಂಬ ಹೆಸರಿನಲ್ಲಿ ಕ್ರಿಸ್ತ ವರ್ಷ ೧೦೭೪ರ ಮಾರ್ಚಿ ೧೫೪ರಿಂದ ರೂಢಿಗೆ ಬಂದವು. ಉಮರನ ಬೀಜಗಣಿತ ಗ್ರಂಥದ ಭಾಗಗಳು ಫ್ರೆಂಚ್ ಜರ್ಮನ್ ಮೊದಲಾದ ಐರೋಪ್ಯ ಭಾಷೆಗಳಲ್ಲಿ ತರ್ಜುಮೆಯಾಗಿವೆ.