೨೪
ದಿನ ರೊಸೆಟ್ಟಿ ಎಂಬ ಕವಿಯ ದೃಷ್ಟಿ ಹೇಗೋ ಅಕಸ್ಮಾತ್ತಾಗಿ ಅದರ ಮೇಲೆ ಬಿತ್ತು. ಆತನು ಅದನ್ನೋದಿ ನೋಡಿ, ತನ್ನ ಸ್ನೇಹಿತನಾದ ಸ್ವಿನ್‌ಬರ್ನ್ ಕವಿಯ ಗಮನಕ್ಕೆ ತಂದನು. ಈತನು ಅದ ರಿಂದ ಮೋಹಿತನಾಗಿ, ಅದರ ಪ್ರತಿಗಳನ್ನು ಕೊಂಡು ತನ್ನ ಮಿತ್ರರಲ್ಲಿ ಹಂಚಿದನು. ಹೀಗೆ ಅದರ ಪ್ರಚಾರವು ಮೊದಲಾಗಿ, ಇದ್ದ ಪ್ರತಿಗಳೆಲ್ಲವೂ ಮಾರಿ, ಕಡೆಗೆ ಅದರ ಬೆಲೆ ಪ್ರತಿಯೊಂದಕ್ಕೆ ೨೧ ಷಿಲಿಂಗಿಗೆ ಏರಿತು. ಲೋಕ ಪ್ರಸಿದ್ದವಾಗತಕ್ಕ ಯೋಗ್ಯತೆಯುಳ್ಳ ಗ್ರಂಥವು ಮೊದಮೊದಲು ತಿರಸ್ಕಾರಕ್ಕೆ ಗುರಿಯಾಗಿ, ಆಮೇಲೆ ಒಂದು ಕೇವಲ ಆಕಸ್ಮಿಕ ಸಂಗತಿಯಿಂದ ಪುರಸ್ಕಾರವನ್ನು ಪಡೆಯಿತೆಂಬ ಈ ಕಥೆಯು, ಕಾವ್ಯ ಪ್ರಪಂಚದಲ್ಲಿ ಕೂಡ "ಪುಣ್ಯೆರ್ಯಶೋ ಲಭ್ಯತೇ” ಎಂಬ ವಚನಕ್ಕೆ ಅವಕಾಶವುಂಟೆಂದು ತೋರಿಸುತ್ತದೆ. ಫಿಟ್ಸ್-ಜೆರನ "ರುಬಾಯ್ಯಾತು” ಒಂಬತ್ತು ವರ್ಷದ ಮೇಲೆ ಎರಡನೆಯ ಸಾರಿ ಮುದ್ರಿತವಾಯಿತು. ಆತನು ಸಾಯುವುದಕ್ಕೆ ಮುಂಚೆ ಅದು ಇನ್ನೆರಡಾವರ್ತಿ ಪ್ರಕಟನೆಯನ್ನು ಪಡೆಯಿತು. ಅಲ್ಲಿಂದೀಚೆಗೆ ಅದು ನೂರಾರು ಆಕಾರಗಳಲ್ಲಿ, ಚಿತ್ರಪಟಗಳೊಡನೆಯ ಅಲಂಕಾರಗಳೊಡನೆಯೂ ದೇಶ ವಿದೇಶಗಳಲ್ಲಿ ಬಗೆಬಗೆಯಾಗಿ ಪ್ರಚುರವಾಗಿ, ಸರಸಿಗಳ ಮನೆಗೆ ಬಂದು ಆಭರಣಪ್ರಾಯವಾಗಿದೆ. ಫಿಟ್ಸ್-ಬೆರಲ್ಡನ ಕೃತಿಯನ್ನನುಕರಿಸಿ ಆತನ ಶೈಲಿಯಲ್ಲಿ, ಆತನ ಧಾಟಿಯಲ್ಲಿ, ಬರೆಯಲು ಪ್ರಯತ್ನಿಸಿದವರೂ ಇದ್ದಾರೆ. ಆತನ ಲಘು ಲಲಿತ ಹಾಸ್ಯಭರಿತವಾದ ವಾಕ್ಯಗಳನ್ನು ಅವಲಂಬಿಸಿ, ಇತರ ವಿಷಯಗಳಿಗೆ ಅವುಗಳನ್ನೇ ಸಾಧ್ಯವಾದ ಮಟ್ಟಿಗೆ ಅನ್ವಯಮಾಡಿ ಬರೆದಿರುವ ವಿಕಟಾನುಕರಣ ('ಪ್ಯಾರಡಿ')ಗಳೂ ಎಷ್ಟೋ ಇವೆ. ಹೀಗೆ ಬಹು ರೀತಿಗಳಲ್ಲಿ ಲೋಕಪ್ರಿಯವಾದ ಕಾವ್ಯ ಫಿಟ್ಸ್-ಜೆರನದು.
ಫಿಟ್ಸ್-ಜೆರಲ್ಡನಿಗೆ ತಾನು ಮಾಡಿದ ಕೆಲಸದಿಂದ ತೃಪ್ತಿ ಪಡೆಯುವುದು ಸುಲಭವಾಗಿರಲಿಲ್ಲ. ನಸನಸೆಯ ಸ್ವಭಾವ ಆತನದು