ಪುಟ:ಉಮರನ ಒಸಗೆ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಉಮರನ ಉಪದೇಶ

ಉಮರನ ಕಾವ್ಯದ ವಿಷಯವಾವುದು-ಭಗವದ್ವಿಚಾರವೆ, ಭೋಗ ಪಶಂಸೆಯ, ಅಥವಾ ಬೇರೆ ಯಾವುದಾದರೊಂದು ಜೀವನ ನೀತಿಯೆ ? ಇದು ಚರ್ಚಾಸ್ಪದವಾದ ಪ್ರಶ್ನೆ.

ಸೂಫಿ ಮತದವರು ಕೆಲವರು ಈ ಕವಿಯು ತಮ್ಮ ತಮ್ಮ ಬೋಧಕರಲ್ಲೊಬ್ಬನೆಂದೂ, ಆತನ ನಿಜವಾದ ಉದ್ದೇಶವು ಕಾವ್ಯದ ಮಾತುಗಳಿಂದ ಪ್ರತ್ಯಕ್ಷವಾಗಿ ತೋರಿಬರುವುದಿಲ್ಲವೆಂದೂ, ಒಂದು ಸಂಕೇತ ರೀತಿಯಿಂದ ತಮ್ಮ ಸಿದ್ಧಾಂತವನ್ನು ನಿರೂಪಿಸಿರುವುದೇ ಆ ಕವಿತೆಯ ವಿಶೇಷವೆಂದೂ ಹೇಳುತ್ತಾರೆ. ವಿರಕ್ತಿಯನ್ನಭ್ಯಾಸ ಮಾಡಿ, ಅಂತರ್ಮುಖಿಯಾಗಿ, ಆತ್ಮಾನುಸಂಧಾನದ ಮೂಲಕ ಭಗವದನುಭವವನ್ನು ಸಂಪಾದಿಸಿಕೊಳ್ಳಬಹುದೆಂಬುದು ಸೂಫಿಯ ಮತ. ಮದ್ಯವೆಂದರೆ ಭಗವದುಪಾಸನೆಯ ಆನಂದ ; ಬಟ್ಟಲೆಂದರೆ ಮನುಷ್ಯ ಹೃದಯ ; ಅರವಟಿಗೆಯೆಂದರೆ ಸೂಫಿ ಯೋಗಿಗಳ ಗೋಷ್ಟಿ ; ಪ್ರಿಯೆಯೆಂದರೆ ಬುದ್ಧಿ ಅಥವಾ ಮನಸ್ಸು ; ಗಂಧರ್ವನೆಂದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವವನು- ಈ ರೀತಿ ಸಂಜ್ಞೆಗಳನ್ನರಿತುಕೊಂಡು ಓದಿದರೆ ತೋರಿಬರುವ ಗೂಢಾರ್ಥವೇ ಉಮರನ ಅಂತರಂಗವೆಂದೂ, ಮೇಲೆ ಕಾಣುವ ಸೃಷ್ಟಾರ್ಥವು ಒಂದು ನಟನೆಯೆಂದೂ ಸೂಫಿಗಳು ವಾದಿಸುತ್ತಾರೆ:

ಹೀಗೆ ಲೋಕಕ್ಕೆ ಪ್ರಿಯವಾಗಿರುವ ವಸ್ತುಗಳ ಸ್ಮರಣೆಯ ಮೂಲಕ ಲೋಕಕ್ಕೆ ಹಿತವಾಗುವ ತತ್ತ್ವಗಳನ್ನು ಮಹಾಕವಿಗಳು ತಿಳಿಸುವರೆಂಬ ಅಭಿಪ್ರಾಯವು ನಮ್ಮ ದೇಶದಲ್ಲಿಯೂ ಉಂಟು. ರಾಮಾಯಣ ಭಾರತಗಳಿಗೆ ಆಧ್ಯಾತ್ಮಿಕ ಪ್ರಪಂಚದ ಪರವಾಗಿ ಅರ್ಥ ಕಲ್ಪನೆ ಮಾಡಿ, ವೇದಾಂತ ರಹಸ್ಯಗಳನ್ನು ಪ್ರತಿಪಾದಿಸಲು ಎಷೆ ವ್ಯಾಖ್ಯಾನಗಳು ಪ್ರಯತ್ನಿಸಿವೆ. ಗೋಪಿಯರ