ಪುಟ:ಉಲ್ಲಾಸಿನಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. ಬ್ಬನಿಗೆ ರಾ ಪಟ್ಟಾಭಿಷೇಕವನ್ನು ಮಾಡುವ ಪ್ರಯತ್ನದಲ್ಲಿರಲು, ಸತ್ಯ ವ್ರತನು ಉಗ್ರನ ಕೋರಿಕೆಯಂತೆ ಪುರದ್ವೀಪಕ್ಕೆ ಹೋಗಿ ಪ್ರಜೆಗಳಿಗೆ ನಯ ಭಯಗಳಿಂದ ಹಿತವನ್ನು ಹೇಳ ಉದ್ದೇಶಿಸಿದ ಕಾಠ್ಯವನ್ನು ಉಪಸಂ ಹರಿಸುವಂತೆ ಮಾಡಿದನು, ಇನ್ನೊಂದುಸಲ ಉಗ್ರನ ಶತ್ರುಮಂಡಲಿಯಲ್ಲಿ ಸೇರಿದ ಕಾಕಡೀಪದ ಪ್ರಭುವು ರಂಧ್ರಾನ್ಸೆಪಿಯಾಗಿದ್ದು ಉಗ್ರನಮೇಲೆ ದಂಡೆತ್ತಿ ಬಂದನು, ಆಕಸ್ಮಿಕವಾಗಿ ಬಂದ ಈ ಶತ್ರುವನ್ನು ಓಡಿಸಲು ಸಿದ್ಧ ವಾಗಿರಲಿಲ್ಲವೆಂತಲೂ ಪರರಾಜನು ಪ್ರಬಲವಾದುದರಿಂದಲೂ ಉಗ್ರನು ಸಕ್ಕ ವತನನ್ನು ಪುನಃ ಆರಿಸಬೇಕಾಯಿತು, ಉಗ್ರನಾಹ್ವಾನವೆಂಬ ತಾರಾ ಹಾರವನ್ನು ಕಂಠದಲ್ಲಿ ಧರಿಸಿ ಸತ್ಯವ್ರತನು ತಕ್ಷಣ ಒಬ್ಬನೇ ಹೊರಟು ಉಗ್ರನ ಯಥೋಚಿತ ಸೈನ್ಯದೊಡನೆ ಶತ್ರುಬಲದ ಮೇಲೆ ಬಿದ್ದು ಅನ್ನ ನೀರು ಸಹ ಬೇಕನ್ನದೆ ಪ್ರತಿಭಟರಿಂದ ಬಿಡಲ್ಪಟ್ಟ ಬಾಣಗಳು ಶರೀರದಲ್ಲಿ ನಾಟಿ ದಾದ್ರೂ ಲೆಕ್ಕಿಸದೆ ಕಿತ್ತು ಬಿಸುಟು ಆವಿರಳ' ಬಾಣಧಾರೆಯಿಂದ ಅವರನ್ನು ಸೋಲಿಸಿ ಉಗ್ರನಿಗೆ ಜಯವನ್ನು ಸಂಪಾದಿಸಿಕೊಟ್ಟನು. ಸುಶೀಲನು ಮಾತಾಮಹನ ಮನೆಯಲ್ಲಿ ಬಾಲ್ಯವನ್ನು ಕಳೆಯುತ್ತಿರು ನಲ್ಲಿ ಆತನ ಸೋದರಮಾವನಾದ ಉಗ್ರನು ಹುಡುಗಾಟಕ್ಕೆ “ಎಲೋ ಸುಶೀ ಲನೇ ; ನಿನಗೆ ರಾಜೀಭಾರವಾದರೆ ನನಗೆ ಕೊಟ್ಟುಬಿಡುತ್ತಿಯೋ ಇಲ್ಲವೋ ? ಎಂದನು. ಕುಶದೀಪದಲ್ಲಿ ಪ್ರಜೆಗಳೇ ತಮ್ಮ ಪಾಲಕನನ್ನು ಆಯ್ದು ಕೊಳ್ಳುತ್ತಿದ್ದುದರಿಂದ ತಾನೇ ತನ್ನ ತಂದೆಯ ಪದವಿಗೆ ಬರುವ ಸಂಭವವು ಕಾಣದೆ “ ನಾನು ದೊರೆಯಾದರೆ ನನ್ನ ತರುವಾಯ ನಿನಗೆ ಕೊಡುವೆನು ” ಎಂದಿದ್ದನು, ಪ್ರಾಪ್ತವಯಸ್ಯನಾಗಿ ರಾಜ್ಯಭಾರವನ್ನು ವಹಿಸಿದಮೇಲೆ ಈ ಸುಶೀಲನು ಸನ್ಯಾಸಿಯಂತೆ ಸರಸಂಗತ್ಯಾಗದಿಂದ ರಾಜಕೀಯ ಕೆಲಸವ ನ್ನೆಲ್ಲಾ ಮುಖ್ಯ ಮಂತ್ರಿಯ ಪದವಿಗೆ ಸೇರಿದ್ದ ಸತ್ಯವ ತನಿಗೊಪ್ಪಿಸಿ ಹೊಸ ರಿಗೆ ಮಾತ್ರ ಚಕ್ರವರ್ತಿಯಾಗಿ ದೇವಬಾಹ್ಮಣ ಪೂಜಾದಿಗಳಿಂದ ಪರಿ ಇಸಾಧನ ನಿರತನಾದನು,