ಪುಟ:ಉಲ್ಲಾಸಿನಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ, ಮುಟ್ಟಿನ ಪ್ರಕಾಕ ? ಎಷ್ಟು ದಿವಸ ಗೋಚರವಾದೀತು ? ಎಂದು ಜ್ಯೋತಿಷ್ಯ ರು ದೃಗ್ಗಣಿತ ಶಾಸ್ತ್ರ ರೀತಿಯಲ್ಲಿ ವಾದಿಸುವ ಉಪನ್ಯಾಸಗಳನ್ನು ಓದುವು ದರಲ್ಲಿ ಮಾತ್ರ ಆಸಕ್ತರಾಗಿದ್ದರು. ರಾಷ್ಟ್ರಭಾರಕ್ರಮವು ಎಂದಿನಂತೆ ನಿರ ಟಂಕವಾಗಿ ನಡೆಯುತ್ತಿತ್ತು. ಒಂದು ದಿವಸ ಸತ್ಯವ್ರತನು ಆಸ್ಥಾನದ ಉದ್ಯೋಗವನ್ನು ತೀರಿಸಿ ಸಾಯಂಕಾಲ ಮನೆಗೆ ಬಂದು ಸುಖಭೋಜನಾನಂತರ ನಲುಗುವುದಕ್ಕೆ ಮುಂಚೆ ಅರಮನೆಯ ಪುಸ್ತಕಾಲಯದ ಕಡೆಗೆ ಹೊರಟನು, ಅಲ್ಲಿ ಸುಂದ ರವಾದ ಮತ್ತು ಭದ್ರವಾದ ರಕ್ಷಾಪತ್ರಗಳಂದೊಪ್ಪುವ ಪುಸ್ತಕಗಳನ್ನು ಮುಂಭಾಗದಲ್ಲಿ ಹೆಸರುಗಳನ್ನು ಸ್ಪಷ್ಮವಾಗಿ ಬರೆದು, ಚರಿತ್ರಶಾಸ್ತ್ರ ಪುರಾಣ, ಪ್ರಹಸನ ಮೊದಲಾದ ವಿಷಯ ಕ್ರಮದಿಂದ ಕನ್ನಡಿಯ ಕಡಗ ಳುಳ್ಳ ನಿಲವು ಬೆಟ್ಟಿಗೆಗಳಲ್ಲಿ ಶೇಖರಿಸಿದ್ದರು. ನಂರಾರು ಮೇಣದ ಬತ್ತಿ ಗಳ ಪ್ರಕಾಶದಷ್ಟು ಕಾಂತಿಯುಳ್ಳ ಬೆಳ್ತಂಗಳಂತೆ ತಂಪಾದ ದೀಪಗಳು ಮಿನಗುತ್ತಿದ್ದುವು, ಮನುಪ್ಪರ ಮನೋವ್ಯಾಕುಲವನ್ನು ಒಂದೇ ಬಗೆಯ ಕೆಲಸವನೆಸಗುವುದರಿಂದಾದ ಬೇಸರವನ್ನು ಹೋಗಗೊಳಿಸಿ ಉಲ್ಲಾಸವನ್ನು ಹುಟ್ಟಿಸುವ ಆಟಗಳನ್ನು ವರ್ಣಿಸಿರುವ ( Yastures ) ಪುಸ್ತಕದಮೇಲೆ ದೃಷ್ಟಿಯು ಬಿತ್ತು, ಅದನ್ನು ತೆಗೆದುಕೊಂಡು ಸವ್ರತನು ಹತ್ತಿರದ ಲ್ಲಿದ್ದ ಸುಪ್ಪತ್ತಿಗೆಯ ಮೇಲೆ ಕುಳಿತು ಅಯಿದಾರು ಪಟಗಳನ್ನು ಮಗುಚಿ ಹಾಕಿದನು, ಮೃಗಯಾ ವರ್ಣನವು ಸಿಕ್ಕಿತು, ಅದನೋದಿ ಆನಂದ ವನ್ನು ಹೊಂದಿ ಪುಸ್ತಕವನ್ನು ಯಥಾಸ್ಥಾನದಲ್ಲಿಟ್ಟು ಶಯನಶಾಲೆಗೆ ಬರು ತಿರುವಾಗ, ದೇಶಸಂಚಾರವೂ ಬೇಸರವನ್ನು ಪರಿಹರಿಸುವುದೆಂದು ಕೇಳಿ ದ್ದುದು ಜ್ಞಾಪಕಕ್ಕೆ ಬಂತು, ಬಂದೇಬಾಣ ಪ್ರಯೋಗದಿಂದ ಎರಡು ಹಕ್ಕಿ ಗಳನ್ನು ಹೊಡೆದು ಬೀಳಲು ಯತ್ನಿಸುವಂತೆ ಒಂದುಸಲ ಆಸಾನದ ಅಪ್ಪಣೆ ಪಡೆಯುವುದರಿಂದ ಎರಡು ಬಯಕೆಗಳನ್ನು ತೀರಿಸಿಕೊಳ್ಳಬೇಕೆಂದು ಯೋ