ಪುಟ:ಉಲ್ಲಾಸಿನಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾಸಿನಿ. ಐದನೆಯ ಅಧ್ಯಾಯ ಅಲ್ಪಮತಿಯ ಜಲ್ಪನ. ಹೀಗಿರುವಲ್ಲಿ ಅರಮನೆಯಲ್ಲಿ ಪೌರಾಣಿಕರು ಭಾಗವತ ಪುರಾಣ ವನ್ನು ಭೇಜನೋತ್ತರ ಹೇಳುತ್ತಿದ್ದರು, ಪೌರಾಣಿಕರ ಸಮ್ಮುಖದಲ್ಲಿ ಗುಂಪುಸೆರುವ ವಿಧವಾ ವ್ಯಕ್ತಿಗಳು ಪುರಾಣವು ಪ್ರಾರಂಭವಾಗುವುದಕ್ಕೆ ಮುಂಚೆ ಗೆಡ್ಡು ಹರಟೆಗಳಿಂದ ಕಾಲಹರಣ ಮಾಡುವುದುಂಟ, ಅದೇ ಪ್ರಕಾರ ಅರಮನೆಗೆ ಸೇರಿದ ಕೆಲವು ವಿತಂತುಗಳು ಬಂದು ಸೇಗಿದರು, ಅವರ ಸಂಭಾಷಣೆಯಲ್ಲಿ ಪರಸ್ಪರ ಜ್ಞಾನೋದಯ ಸಾಧಕವಾದ ಮಾತೆಂದಾದರೂ ಹರಡಲಿಲ್ಲ. ತಂಗಮ್ಮನ ಗಂಡನಿಗೆ ಮುವ್ವತ್ತು ಹಣ ಸಂಬಳವಾದರೂ ಹೆಂಡತಿಗೆ ಮೈತುಂಬಾ ಒಡವೆಮಾಡಿಸಿರುವನು. ಮುಂಗಟ್ಟು ಮುರುವು ಕ್ರಳ ತಾಯಿಯಾದಳು. ಪಾಪ ಎರಡು ಮಕ್ಕಳು ಹೋದುವು, ಈಗ ತಿರಿಗಿ ಬಸುರಿ, ಗಂಗಾ ಬಾಯಿಯ ಶ್ರೀಮಂತರಲ್ಲಿ ಬರೆ: ಪರಮಾನ್ನ ದಮೇಲೆ ಪ್ರಸ್ತವನ್ನು ತೀರಿಸಿದರು, ಎಂಬೀ ತೆರದ ನರರ ದಮಣಪರವಾದ ನಿಸ್ಸಾರ ವಚನವನ್ನು ಒಬ್ಬರು ಮಾತನಾಡಿ ಮುಗಿಸುವುದರೊಳಗೆ ಮತ್ತೊಬ್ಬರು ಮಾತನಾಡಿ ವೃಥಾ ಗಲಭೆಯನ್ನುಂಟುಮಾಡುತ್ತಿದ್ದರು. ಅಷ್ಟು ಹೊತ್ತಿಗೆ ಆದಿನ ಶುಕ್ರವಾರ ವಾದುದರಿಂದ ರಮಣಿಯು ಅಭ್ಯಂ ಗನನ ಮಾಡಿಕೊಂಡವಳು ನೀಳವಾದ ತಲೆಗೂದಲ ಕೊನೆಗೆ ಗಂಟುಹಾಕಿ ಬಿಸಲಲ್ಲಿ ಒದ್ದೆಯನ್ನಾರಿಸಿಕೊಳ್ಳುತ್ತಲಿದ್ದು ಆಚಾರರು ಪುರಾಣಕ್ಕೆ ಆರಂ ಭಿಸಿದೊಡನೆ ಒಳಗೆ ಬಂದು ಹೆಂಗಸರನಡುವೆ ಕುಳಿತಳು, ಅವಕೇತಿಯಲ್ಲಿ ಭಾಮಿನಿ ಎಂಬವಳು ರಮಣಿಯನ್ನು ಕುರಿತು “ ಇದೇನ ಕ.ಕ್ರವಾರ ಸಂ ಜೆಯ ಹೊತ್ತಿನಲ್ಲಿ ತಲೆ ಬಿರಿಹಾಕಿಕೊಂಡು ನನ್ನಂತಹ ಮುಂಡೆಯರ ಗುಂಪಿನಲ್ಲಿ ಬಾಳಿ ಬದುಕಬೇಕಾದ ನಿನ ಎಂದು ಕೂರಬಹುದೆ ? ಬೇಗ – ೧