ಪುಟ:ಉಲ್ಲಾಸಿನಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AV ಕರ್ಣಾಟಕ ಗಂಥಮಾಲೆ. ಹೋಗಿ ವೇಳೇ ಬಂಧನವನ್ನು ಮಾಡಿಕೊ, ನಿನಗೇಕ ಪುರಾಣದ ಚಿಂತೆ ? ನಮಗಂತೂ ತೀರದು ?” ಎಂದಳು, ಅವರಲ್ಲಿ ಕೆಜತಿದ್ದ ಅಲ್ಪಮತಿಯು - ಇದೇನಾ ಹೀಗೆ ಹೇಳುತ್ತೀಯ, ಭಾವಂದಿರ ಕಟ್ಟಳೆ ನಿನಗೆ ತಿಳಿದಿರ ಲಾರದು, ದಿನಕ್ಕೊಮ್ಮೆ ಭಾಗವತದ ಮರಕ್ಷರವಾದರೂ ಕಿವಿಯಲ್ಲಿ ಬಿದ್ದ ಹೊರತು ನಿದ್ರಿಸ ಕೂಡದೆಂದು ಶಾಸ್ತ್ರ ದಲ್ಲಿ ಹ೪ದೆಯಂತೆ ಅದೇ ಕಾರ ರಮಳೆಯು ಒಂದುದಿವಸ ಪರಾಣ ಕೇಳದಿದ್ದರೆ ಬಿಡುವುದಿಲ್ಲ, ಸಂಸಾ ರದಲ್ಲಿ ಏನು ಸುಖವಿದೆ ಎಂದು ಹೇಳಲಿ ಮಕ್ಕಳಾದರೆ ಒಂಬತ್ತು ಚಿಂತೆ, ಮಕ್ಕಳಲ್ಲದಿದ್ದರೆ ಬಂದೇ ಚಿಂತೆ ಮಗುವುಹ.ಟ್ಟಿದಮೇಲೆ ಬಾಲ್ಯದಲ್ಲಿ ಬರು ವ ನೂರಾರು ರೋಗಗಳಿಗೆ ತಾಯಿತಂದೆಗಳು ಸಿದ್ಧ" ಟ್ಟು ಆಹಾರಬಿಟ್ಟು ಪತಿಕಾರವನ್ನು ಮಾಡಬೇಕು, ಆ ಸಾಗುವು ಚೇಳು ಮಾಡಿತೆಂಬ ಪರರ ದೂರನ್ನು ಕೇಳಿ ಸಹಿಸಬೇಕು ಹೆತ್ತವರಿಗೆ ಹಣವನ್ನು ಎಂಬಂತೆ ಆ ಹುಟ್ಟಿದಮಗುವು, ಕುರೂಪಿಯಾದರೂ, ಕುಲಾಂತಕವಾದು ದಾದರೂ ಭಗವಂತನು ಕೊಟ್ಟ ವ್ಯಾಮೋಹದಿಂದ ಮುದ್ದಾಡುವರು. ಹುಟ್ಟಿದಮಗುವು ಗಂಡಾಗಿ ಅಕ್ಷರಸ್ಥನಾದಪಕ್ಷದಲ್ಲಿ ಹೇಗಾದರೂ ಜೀವನ ವನ್ನು ಸಂಪಾದಿಸಿ ಸಂಸಾರವನ್ನು ಕಟ್ಟಿಕೊಳ್ಳವನು, ಇಲ್ಲವೇ ಬ್ರಹ್ಮ ಪದೇಶ ಸೂಚಕವಾದ ಯಜ್ಯೋಪವೀತವನ್ನು ಹಾಕಿಬಿಟ್ಟರೆ ತಂದೆಯ ಕರ್ತವ್ಯವು ತೀರಿತು, ಆಜನ್ಮ ಬ್ರಹ್ಮಚಾರಿಯಾಗಿದ್ದಾದರೂ ಜನ್ಮವನ್ನು ತೀರಿಸಿಕೊಳ್ಳವನು, ಹೆಣ್ಣಾಗಿ ಹುಟ್ಟಬಾರದೆಂದು ಅರಿತಿರುವಿರಷ್ಯಟ' ಹುಡುಗಿಗೆ ಹತ್ತು ಹನ್ನೆರಡು ವರ್ಷಗಳಾಗಿ ಪ್ರಬುದ್ಧಳಾಗುವ ಸಮಯ ಬಂದೊದಗುವುದು. ಸರಿಯಾದ ಅಳಿಯನು ಸಿಕ್ಕಬೇಕೆಂಬ ಚಾನಸದಿಂದ ಎಲ್ಲೆಲ್ಲೋ ಹುಡುಕಿದಾಗ ತಾವು ಒಪ್ಪಿದಕಡೆ ಬ್ರಹ್ಮಾನುಕೂಲವಿಲ್ಲ ದೆಯು ತಮಗೆ ಸಮರ್ಪಕವಾಗಿರದಕಡೆ ಸಕಲಕಟಗಳು ಕೂಡಿಬಂದು ಶಾಸ್ಟ್ರೀತ್ಯಾ ಬಹು ಪ್ರಶಸ್ತವಾಗಿಯೂ ಇರುತ್ತದೆ. ತಂದೆಯು ಒಪ್ಪಿ