ಪುಟ:ಉಲ್ಲಾಸಿನಿ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ ಕರ್ನಾಟಕ ಗಂಥವು. ••••• ಒಂದೇ ಮೃಗವನ್ನುದ್ದೇಶಿಸಿ ಅನೇಕ ವ್ಯಾಧರು ಸ್ಪರ್ಧಿಸಿದರೆ ಯಾರ ಬಾಣ | ದಿಂದ ಕೆಳಕ್ಕೆ ಬೀಳುವುದೆ? ಹೇಳಲಿಕ್ಕಾಗದೆ ದೈವಾನುಕೂಲದಿಂದ ಸನ್ನಾ ಹಕಾರಿಯಾದವನೊಬ್ಬನ ವಶವಾಗುವುದು, ವಿಕ್ಕವರು ವೃರ್ಥೋದ್ಭ ಮರಾಗುವರು. ಅದರಂತೆ ಬಹುಪ್ರಯಾಸದಿಂದ ಉದ್ಯೋಗವು ದೊರೆ ಯಬೇಕು. ಆತ್ಮರೊಳಗೆ ಹೆಂಡತಿಗೂ ತನಗೂ ಅನ್ನ ವಸ್ತ್ರಗಳಿಗನು ಕೂಲಸಾಲದೆ ಅವಳನ್ನ ತನ್ನ ತಾಯಿತಂದೆಗಳ ಮನೆಯಲ್ಲಿ ಬಿಡುವನು ಅಲ್ಲಿ ಆತ್ಮಾವಂದಿರು ಭಾವಮೈದುನರು ಅತ್ತಿಗೆ ನಾದಿನಿಯರು ಮೊದಲಾದ. ವರ ಆಜ್ಞಾನುಸಾರವಾಗಿ ನಡೆ ಕಂಡು ಇದ್ದಾಗ ಹೆಚ್ಚು ಮಾತನಾಡಿದರೆ ಗಯ್ಯಾಳಿಯೆಂತಲೂ, ನನವಾಗಿದ್ದರೆ ಮೃಗುಮುಚ್ಚಿಯೆಂತಲೂ, ಉದರ ಪೂರ್ತಿ ಭೋಜನ ಮಾಡಿದರೆ ದೊಡ್ಡ ಹೊಟ್ಟೆಯವಳೆಂತಲೂ ಸ್ವಲ್ಪವೇ ತಿಂದರೆ ಗರ್ವಿಷ್ಟಳೆಂತಲೂ ನಿಷ್ಕಾರಣವಾಗಿ ದ ಪ್ರಿಸುವರ ಮುಂದೆ ಶವ ದಂತೆ ಬಿದ್ದಿರಬೇಕು, ಅಥವಾ ಅಣ್ಣತಮ್ಮಂದಿರ ಹೆಂಡರುಗಳಧೀನದಲ್ಲಿ ತವರುಮನೆಯಲ್ಲಿ ಕೂಳಿಗೆ ಕೇಡಾಗಿರಬೇಕು, ಹಿಂದೆ ಅತ್ತೆಯ ಮನೆ ಯಿಂದ ಬಂದ ಮಗಳನ್ನು ಕುರಿತು ಒಬ್ಬ ತಾಯಿಯು ಅಮ್ಮಾ ಅತ್ತೆಯು ಮನೆಯು ಸೌಖ್ಯವಾಗಿತ್ತೆ ? ಎಂದು ಕೇಳಿದಾಗ ಮೊಣಕ್ಕೆ ಎಲುಬಿಗೆ ಕಬ್ಬಿ ಇದ ಏಟು ತಗಲಿದಹಾಗಿತ್ತೆಂದಳಂತೆ, ಹೇಗಾದರೂ ಆಗಲಿ ಅರಿಶಿನ ಕುಂ ಕುಮು ಹಚ್ಚಿಕೊಂಡು ಇರೋಣವೆಂದರೆ ದೇವರು ಇರಗೊಡಿಸುವುದಿಲ್ಲ. ಬಾಲಪತಿಯು ನಿದ್ರಾದಿ ದೇಹಪೋಷಣೆಗಳನ್ನು ಗಮನಿಸದೆ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಬೇಕೆಂಬ ಉತ್ಸಾಹದಿಂದ ಅಹೋರಾತ್ರಿಯಲ್ಲಿಯ ವ್ಯಾ ಸಂಗಮಾಡಿದುದರ ಫಲಿತಾಂಶವಾದ ದೃಷ್ಟಿಮಾಂದ್ಯ, ದೇಹ ದೌರ್ಬಲ್ಯ. ಮೊದಲಾದವು ಪ್ರಾಪ್ತವಾಗಿ ಪೂರ್ವವಯಸ್ಸಿನಲ್ಲೇ ಉಪನೇತ್ರವನ್ನು ದ ಯೋಗಿಸಿ ಒದ್ದಾಡುವನು. ಒಬ್ಬ ವಿದ್ಯಾತುರನು ರಾತ್ರಿಯೊಳು ತೂಕ ಡಿಸಿ ಮೈಮರೆತು ನಿದ್ದೆಯು ಬಂದೀತೆಂಬ ಭಯದಿಂದ ಜುಟ್ಟಿನ ಕನೆಗೆ