ಪುಟ:ಉಲ್ಲಾಸಿನಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಗ್ರಂಥಮಾಲೆ.

\r\n/ W ತವು ರಭಸವಾಗಿ ಬೀಸಿತು, ದೂರದಲ್ಲಿ ಕೆಲವು ಬೆಸ್ಕರು ಚಳಿಗೊ ಸ್ಯರ ಬೆಂಕಿಯನ್ನು ಹಾಕಿ ಕಾಸಿಕೊಳ್ಳುತ್ತಿದ್ದ ಉರಿಯನ್ನು ಸಮುದ್ರ ಮಾರ್ಗವನ್ನು ತೋರಿಸುವ ದೀಪವೆಂದು ಭ್ರಮಪಟ್ಟು, ಸರಿಯಾದ ಮಾರ್ಗ ವನ್ನು ಬಿಟ್ಟು ಹೊಗೆಯಹಡಗು ನೀರಲ್ಲಿ ಮುಳುಗಿದ್ದ ದೊಡ್ಡ ಬಂಡೆಗೆ ತಗಲಿ ಕಲ್ಲಿನಮೇಲೆ ಬಿದ್ದ ಗಾಜಿನ ಗೋಳವು ಒಡೆಯುವಂತೆ ನುಚ್ಚುನುರಿ ಯಾಯಿತು. ಸತ್ರವ್ರತನೆ ಇಬ್ಬನು ಅತಿಸಾಹಸಿಯಾದ ಕಾರಣ ಆ ರಾತ್ರಿ ಯಲ್ಲಿ ನೀರಿನಲ್ಲಿ ಬಿದ್ದಾಗ ಭಯಪಡದೆ ಈ ಸುತ್ತ ದಡಕ್ಕೆ ಸೇರಿ, ಎಲ್ಕೆ ರೋಹಿಗಳಿರಾ ! ನಿರಪರಾಧಿಗಳಿಂದ ಮೀನುಗಳನ್ನು ಹಿಡಿದು ತಿಂದು ಜೀವಿ ಸಿ ಮನಃಪೂರ್ವಕ ಏವ ವಾಡುವುದಲ್ಲದೆ ನಿನ್ನ ಸಹೋದರಪ್ರಾಯರಾದ ಮನುಷ್ಯರನ ಕೂಡ ಈ ನಿನ್ನ ಉರಿಯಿಂದ ಮೋಸಮಾಡಿ ಬಲೆಯಲ್ಲಿ ಸಿಕ್ಕಿಸಿಕೊಳ್ಳುವಿರಾ ? ನಿಮ್ಮನ್ನು ಯವನು ಹೀಗೆಯೇ ಸೆಳದೊಯ್ಯಲಿ ಎಂದು ಮೊದಲಾಗಿ ಚನ್ನಾಗಿ ಬೈದನು, ವಿಾನಿಗೆ ಹತ್ತರಷ್ಟು ಬೆಲೆಯುಳ್ಳ ಮನುಸ್ಮನು ಸಿಕ್ಕಿದನೆಂದು ಕುಣಿದಾಡುತ್ತ ಬೆಸ್ತರಲ್ಲೊಬ್ಬನು ಅರುಣೋ ದಯವನ್ನು ನಿರೀಕ್ಷಿಸಿಕೊಂಡಿದ್ದು ಊರೊಳಗೆ ಓಡಿ ಹೋಗಿ ಓಲೆಕಾರ ನನ್ನು ಕರೆತಂದನು. ಅವನು ಬರುತ್ತಲೇ ಸತ್ಯವ್ರತನು ಈ ಕಂಟಕ ದಿಂದ ನನ್ನ ಹಡಗು ಕಡಲಿನಪಾಲಾಯಿತು, ಮೋಸಹೋದೆವು. ನಮ್ಮ ಸೀಮೆಯಲ್ಲಿ ಬೆಲೆಯುಳ್ಳ ಒಡವೆಗಳನ್ನು ಎಲ್ಲಿ ಎಸೆದಿದ್ದರೂ ಅಲ್ಲಿಯೇ ವರ್ಷದಮೇಲಾದರೂ ಸಿಕ್ಕುವುದು. ಓಲೆಕಾರ-( ಸತ್ಯವ್ರತನೆಂತ ಗುರುತು ಹಿಡದು ) ನಿಮ್ಮ ರಾಜ್ಯದಲ್ಲಿ ನೀವೇ ದೊರೆ, ಸ- ಇಂತಹ ದ್ರೋಹಿಗಳು ನಮ್ಮ ಊರಿನಲ್ಲಿ ಕೈಗೆ ಸಿಕ್ಕಿ ದರೆ ಎರಡು ತುಂಡು ಮಾಡಿ ಊರುಮುಂಪಿನ ತೋರಣಕ್ಕೆ ಕಟ್ಟಿಸಿ ಹದ್ದು ಮೊದಲಾದ ಮಂಸಾಹಾರಿಗಳಿಂದ ಕಿ;ಳಸಿ ಇತರರು ಇಂತಹ ಉದ್ಯೋಗಕ್ಕೆ ಕೈಹಾಕದಂತೆ ಮಾಡುತ್ತಿದ್ದೆನು.