ಪುಟ:ಉಲ್ಲಾಸಿನಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕ್ರಳಿದಾಳೆ. .ಏಳನೆಯ ಅಧ್ಯಾಯ ಸುಶೀಲನ ಹರಿಕ, ಸುಶೀಲನು ಪರಮಸುಕನಾಗಿ ಮಿತಾಹಾರ ವಿಹಾರಗಳಿಂದ ಕಾಲ ಕ್ಷೇಪವನ್ನು ಮಾಡಿಕೊಂಡಿದ್ದಾಗ ಜನ್ಮಾಂತರದ ಚಿಪಶೇಷದಿಂದಲೂ ಅವಸಾನಕಾಲದಲ್ಲಿ ಸಾವಿಗೆ ಕಾರಣವಾಗಿಯ ರೋಗಗ್ರಸ್ತನಾಗಿ ಸ್ವಲ್ಪ ದಿನ ಸದಲ್ಲಿಯೇ ಅವಶಿಷ್ಟ್ಯವಾದ ಐಹಿಕಸುಖವನ್ನೂ ಕೂಡ ತೃಜಿಸುವಹಾಗಿದ್ದು ಆಚಾರಶಿರೋಮಣಿಗಳ ಸಭೆಯಲ್ಲಿ ಕುಳಿತು ಸತ್ಯಥೆಯನ್ನಾಲಿಸುತ್ತಾ ಹಿಂದೆ ಐದನೆ ಅಧ್ಯಾಯದಲ್ಲಿ ವಿವರಿಸಿದ ಅಲ್ಪಮತಿಯು ಬಹಿರಂಗವಾದ ಪ್ರಸಂ ಗದಿಂದಲೂ ಅಂತರಂಗದಲ್ಲಿ ತಿಳಿಸಿದ ಚಾಡಿಯಿಂದಲೂ ರಮಣಿಯನ್ನು ಸತ್ಯ ಪ್ರತನಿಗೆ ಕೊಡದೆ ತಾಪಸಿಯಾಗಿರುವಂತೆ ನಿಶ್ಚಯಿಸಿದ್ದನು. ಇಂತಹ ಸುಶೀ ಲನ ಬಳಿಗೆ ದೀಂವಾಂತರಕ್ಕೆ ಹೋಗಿದ್ದ ಸತ್ಯವ್ರತನು ಬಂದು ನಮಸ್ಕರಿಸಿ ತಾನು ಸನ್ನಿಧಾನವನ್ನು ಬಿಟ್ಟಾರಭ್ರ ಆಕ್ಷಣದವರಿಗೂ ನಡೆದ ಸಮಸ್ತ ಸಂಗ ತಿಗಳನ್ನು ವಿಸ್ತರಿಸಿ • ಉಗ್ರನು ನೀಲನನ್ನು ನನ್ನೊಂದಿಗೆ ಕಳುಹಿಸಲಿಲ್ಲ ಅವನಿಗೆ ಕರೀರದಲ್ಲಿ ಆಲಸ್ಯ ಕೊಂಚ ಗುಣಮುಖವಾದರೆ ಕಳುಹಿಸಿಕ ಡುವುದಾಗಿ ಹೇಳಿದನೆಂತ ತಿಳಿಸಿದನು; ಅನುಡಿಗಳು ಸುಶೀಲನ ಕಿವಿಯಲ್ಲಿ ಬಿದ್ದಾಗ್ಯೂ ಚನ್ನಾಗಿ ಗ್ರಹಿಸಲು ಪ್ರಜ್ಞೆಯಿಲ್ಲದೆ ತನ್ನ ಮನಸ್ಸಿಗೆ ಸುರಿಸಿ ದಂತೆ ನನ್ನ ಕಾಲವಂತೂ ಪೊರಯಿಸಿತು, ಬಹಳ ಹಣವನ್ನು ಮುಟ್ಟಿಸಿ ದೇವಾಯತನವನ್ನು ಕಟ್ಟಸಿ, ಅನೇಕ ಜಾತಿಯ ಫಲವೃಕ್ಷಗಳಿಂದ ತುಂಬಿ ದ ತೋಟವನ್ನು ಬೆಳಸಿ ಅದರ ಫಲವು ನಿತ್ಯವೂ ದೇವರ ನಿವೇದನಕ್ಕೆ ಬದ ಗುವಂತೆ ಮಾಡಿರುವೆನು. (ಪ್ರಮಾಣದವಿಪಯುಮಾತ್ರ ಜ್ಞಾಪಕಕ್ಕೆ ಬಂದು) ಸತ್ಯವತನೇ ನಿನ್ನ ಅಸತ್ಯವಾದಕ್ಕೆ ರ್ಪಯತ್ನವನ್ನು ಮಾಡಿಕೊಂ ಡೆಯಾ ಎನಲು. ಸ-ವಿಧತ್ರಭಾನಾಯಕರಾದ ವಿದ್ಯಾನಿಧಿಗಳಿ೦ದ ನೀತನಾದೆನು.