ಪುಟ:ಉಲ್ಲಾಸಿನಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲು ಸಿ ತೃಸ್ಥಾನಿಗ್ರಹದಿಂದಲೇ ಭಗವಧಾನವು ಲಭಿಸಬೇಕು, ತೀರ್ಥಯಾತ್ರೆ ಗಳಗೆ ಹೋದವರೂ ಕೂಡ ತಾವು ವಿಶೇಷವಾಗಿ ಪ್ರೀತಿಸುವ ಪದಾರ್ಥಗಳಲ್ಲಿ ಒಂದನ್ನು ಹರಿ ಪಿತೃರ್ಥ ಆ ಕ್ಷೇತ್ರದಲ್ಲಿ ಬಿಟ್ಟೆವೆಂದು ಪ್ರತಿಜ್ಞೆ ಮಾಡಿ ಹಿಂತಿರುಗುವುದುಂಟು. ಇದಲ್ಲದೆ ಬಾಲಚುಕ್ಕೆಯು ಬೇರೆ ಕಾಣಿಸಿಕೊ೦ ಡಿದೆ. ಸ-ಇಂತಹ ನಕ್ಷತ್ರಗಳೆಪೆ ಬಂದುಹೋದುವು ಅದಕ್ಕೂ ನಮಗೂ ಸಂಬಂಧವೇನು ? ಆಕಾಶದಲ್ಲಿ ಆಗುವ ಅದಲುಬದಲಿಗೆ ನಾವು ಹೊಣೆಯೇ ? ಹಸ್ತಗತವಾದ ರಾಹೃನನ್ನ ದೇಶಾಂತರದವರಿಗೆ ಕೊಟ್ಟು. ಬಿಡುವುದಾಗಿ ಆಗದ ಕೆಲಸಕ್ಕೆ ವಾಗ್ದಾನ ಮಾಡೋಣವಾಯಿತು. ಈಗ ಬಾಳಿಬದುಕಬೇಕಾದ ಬಾಲೆಯನ್ನು ಸನ್ಮಾನಿಗಳಂತೇವಾಸಿನಿಯಾಗಿಡು ವಂತೆ ಹರಿಸಿಕೊಂಡಿರಿ, ವಾಗ್ದಾನವನ್ನು ಚೆನ್ನಾಗಿ ಯೋಚಿಸಿಕೆಡಬೇ ಕೆಂದು ಅರಿತವರು ಹೇಳುವರು ಯ ಚಿಸದೆ ಎಂತಹ ವಾಗ್ದಾನವನ್ನಾ ದರೂ ಮಾಡಬಾರದು, ತಾವು ಮಾಡಿದಂತಹ ಹರಿಕೆಯಿಂದ ದೇವರ ಪ್ರಸು ದವು ಎಂದಿಗೂ ಸಿಕ್ಕಲಾರದು. ಸು-ಈಗಿನವರಿಗೆ ಯಾವುದರಲ್ಲಿ ನಂಬಿಕೆಯಿಲ್ಲ, ಹಗಲು, ಇರಳು, ಹಸಿವು, ಬಾಯಾರಿಕೆ, ದೇಹಬಾಧೆ ಇವೇ ಮೊದಲಾದ ಪ್ರತ್ಯಕ್ಷ ನುಭವದಲ್ಲಿ ಮಾತ್ರವೇ ಅವರಿಗೆ ಪ್ರಮಾಣ, ಇವರಲ್ಲಿ ಏನು ಹೇಳಿದರೆತಾನೆ ಪ್ರಯೋಜನವೇನು ? ಆಗುವುದು ಆಗುತ್ತದೆ ಎಂದನು.