ಪುಟ:ಉಲ್ಲಾಸಿನಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಲ್ಲಾ ಸಿನಿ. ಒ །ལ་ཁའ། ಪುಪ್ಪಗಳ ಸುಗಂಧವನ್ನು ತಂದು ಮಗಿನಭ್ರಮೆಯನ್ನು ತೀರಿಸುವ ಹಾಗೂ ತರುವುದು, ಚಿಂತಾಕ್ರಾಂತನಿಗೆ ಅದೇ ಗಾಳಿಯು ರಭಸವಾಗಿ ಬೀಸಿ ಕಣ್ಣಿಗೆ ಮಳಲನ್ನು ತುಂಬಿಸುತ್ತದೆಂತಲೂ ದುರ್ವಾಸನೆಯನ್ನು ತಂದು ಬಡಿಸುತ್ತದೆಂತಲೂ ತೋರುವುದು, ನೋಡು, ಗಾಳಿಯು ಸಮು ರಾಂಗಣದ ಕಡೆಯಿಂದ ಬೀಸುತ್ತಿದೆ. ಎಂತಹ ಭಯಂಕರವಾದ ಶಬ್ದವು ಕೇಳಿಬರುವುದು ; ಲಾಲಿಸು, ಇಂದು ಯಮನಿಗೆ ಎಷ್ಟು ಬಾಣಗಳು ಆಹು ತಿಯಾಗುವುವೋ: ಕಾಣೆನು ಇಲ್ಲಾ ಅನಾಹುತಕ್ಕೆ ಆಸ್ಪದ ಕೊಡು ವುತಕ್ಕಿಂತು ಉಗನ ಮಾತಿನಂತೆ ನಡೆದುಕೊಂಡಿದ್ದರೆ ಚೆನ್ನಾಗಿತ್ತಲ್ಲವೆ ? ರ-ಲೋಕವ್ಯವಹಾರವು ನನಗೇನೆ ತಿಳಿಯದೆಂದು ಅರಿತಿದ್ದೆನು, ನನ ಗಿಂತಲೂ ನೀನು ಒನಕೆಯು ತುದಿಯಂತಹ ಬುದ್ಧಿಯುಳ್ಳವಳಾಗಿರುವಿ. ಜನರಲ್ಲಿ ಹುಟ್ಟುವ ನಾನಾತರದ ವಿವಾದಗಳನ್ನು ತೀರ್ಪಮಾಡಲು ದೊರತ ನದವರು ನ್ಯಾಯಸ್ಥಾನಗಳನ್ನು ಸ್ಥಾಪಿಸಿ ಸಾವಿರಾರು ವರಹಗಳ ವಾಸ ವೇತನವುಳ್ಳ ನ್ಯಾಯಾಧ್ಯಕ್ಷರನ್ನು ನೇಮಿಸಿರುವರೆಂದು ನೀನು ಕೇಳರ ಬಹುದು, ವ್ಯಾದ್ಯಗಳಲ್ಲಿ ವಾದಿ ಪ್ರತಿವಾದಿಗಳ ಪಕ್ಷವನ್ನು ಹಿಡಿದು ವಾದಿ ಸುವುದಕ್ಕೆ ನ್ಯಾಯಶಾಸ್ತ್ರ ಕೋವಿದರು ಅನೇಕವಾಗಿಯೆ ದೊರೆಯುವರು. ಇವರ ವಾಕ್ಷ ಟುತ್ವದ ಬಲದಿಂದ ನ್ಯಾಯವು ಅನ್ಯಾಯವಾಗಿಯ, ಅನ್ಸಾ ಯವು ನ್ಯಾಯವಾಗಿಯ ಕೆಲವುವೇಳ ಪರಿಣಮಿಸುವುದುಂಟು. ಕಕ್ಷಿಗಾ ರರು ಅಂತರಂಗದಲ್ಲಿ ವಿವಾದವನ್ನು ವ್ಯವಹರಿಸಿಕೊಳ್ಳಬಹುದಾದರೂ ನ್ಯಾಯಸ್ಥಾನಕ್ಕೆ ಹೋದರೆ ಅನುಕೂಲವಾದೀತೆಂದು ಕೆಲವರು ಪಂಚಾಯಿ ತರ ತೀರ್ಪಿಗೆ ಒಪ್ಪುವುದಿಲ್ಲ, ಒಂದುವೇಳೆ ತೀರ್ಪಮಾಡಿಕೊಳ್ಳುವೆವೆಂ ದರೂ “ ಅಯ್ಯೋ ನೀವೇಕೆ ಒದ್ದಾಡುವಿರಿ, ಹಿಂದೆ ಇಂತಹ ವಿವಾದಗ ಳಪೆ ನ್ಯಾಯಾಧಿಪತಿಗಳಿಂದ ಅನುಕೂಲವಾಗಿದೆ ವ್ಯವಹರಿಸಲ್ಪಟ್ಟಿವೆ. ಕೊನೆಯವರೆಗೂ ನೋಡಿಯಬಿಡೋಣ” ಎಂದು ವಕೀಲರು ದ್ರವ್ಯಲೋಳ 10 |