ಪುಟ:ಉಲ್ಲಾಸಿನಿ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೧ • • • • • ,,, - » → ಉಲ್ಲಾಸಿನಿ. ಪತ್ನಿಯುಂಠ ಏಕಾಂತದಲ್ಲಿ ತಿಳಿಸಿದರು, ಸುಶೀಲನ ಅನುಜಾತೆಯನ್ನು ವುದಂತ ತನಗೆ ತಿಳಿದೇ ಇರಬಹುದು. ರ- ಬಾಣದಿಂದ ಹೊಡೆಯಲ್ಪಟ್ಟು ನೆಲದಲ್ಲಿ ಬಿದ್ದ ಮೃಗವು ಬೇಗ ಸಾಯುವಂತ ಭರ್ಜಿಯಿಂದ ತಿವಿದುವಹಾಗಿರುವ ಈ ಮಾತನ್ನು ಕೇಳಿ) ಅಹಾ ! ದೈವವೆ ! ಪತಿಯನ್ನು ಸೆಳಕೊಂಡು ಇಂತಹ ಅಪವಾದವುನ್ನ ನನ್ನ ಕಿವಿಯಲ್ಲಿ ಬೀಳುವಂತೆ ಮಾಡಿದಿಯಾ ? ಇನ್ನು ನಾನು ಬದುಕಿ ಫಲ ವೇನು ? ನನ್ನ ಬೆರಳಿನಲ್ಲಿ ಉಂಗುಗವಿಲ್ಲದುದರಿಂದ ಈ ಅನುಮಾನಕ್ಕೆ ಕಾರಣವಾಯಿತು ಎಂದು ಹೊಟ್ಟೆಯನ್ನು ಬಡಿದು ಧರೆಗುರುಳಿದಳು. ಉಗ್ರನು ಇದೆಂದೂ ಕಿವಿಗೆ ಹಾಕಿಕೊಳ್ಳದೆ ಸೇನಾನಾಯಕನೊಡನೆ ಮುಂ ದಕ್ಕೆ ಸರಿದು ತನ್ನ ಬಿಡಾರವನ್ನು ಸೇರಿದನು. ಸ ಹದಿಮೂರನೆಯ ಅಧ್ಯಾಯ. ಕಥಾಸಮಾಪ್ತಿ. ಈ ಪ್ರಕಾರ ಸತ್ಯವ್ರತನೆಂಬ ಜೀವಿಯ ಮಾನುಪಾವಸ್ಥೆಯು ಮುಗಿ ದಂತೆ ತೋರಿತು, ಆದರೆ ಕಥೆಯು ಮುಗಿಯಲಿಲ್ಲ, ಪ್ರಾಣಮಾತ್ರಕ್ಕೆ ಅನಿವಾ ಗ್ಯವಾದ ಜೀವಿ ದೇಹಗಳ ನಿಯೋಗವು ಸತ್ಯವ್ರತನಿಗೂ ರಮನೆಗೂ ಏಾ ಪ್ಯವಾಗಿರಲಿಲ್ಲವಾದಕಾರಣ ಕಥೆಯು ಕೊಂಚ ಉಳಿದಿರುವುದು, ಎಲೈ ಪಾಠ ಕರಿರಾ ! ಮೇಲಿನ ಹನ್ನೆರಡು ಅಧ್ಯಾಯಗಳನ್ನು ಓದಿ ಅಥವಾ ಕೇಳಿ ನಿಮ್ಮ ಮನಸ್ಸಿಗೆ ಆಯಾಸವಾಗಿರ ಬಹುದು. ಪರಂತು ಈ ಕಾದಂಬರಿಯಲ್ಲಿ ಪ್ರತಿ ಪದ್ಭರದ ಸವ್ರತ, ರಮಣಿ, ಅಲ್ಪಮತಿ, ಉಗ್ರ, ಇವರ ಗತಿ ಏನಾಯಿ ತೆಂಬುದನ್ನೂ ತಿಳಿದು ಕೊಳ್ಳಬೇಕೆಂಬ ಲವಲವಿಕೆಯು ನಿಮ್ಮಲ್ಲಿ ಕೆಲವರಿಗಾ ದರೂ ಸುರಿಸದೆ ಇರದು. ಆದಕಾರಣ ಉತ್ತರಕಥಾ ಸ್ವಾರಸ್ಯವನ್ನು ಈ ಅಧ್ಯಾಯದಲ್ಲಿ ಸಂಗ್ರಹಿಸಿರುವೆನು.