ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

V

ಶ್ರೀ! ಮಂಗೇಶರಾಯರು ಮಹಾಕಾವ್ಯಗಳನ್ನು ಬರೆಯುವ ಹವ್ಯಾಸಕ್ಕೆ ಹೋಗಲಿಲ್ಲ. ಅದಕ್ಕೆ ಬೇಕಾದ ಪ್ರತಿಭೆಯು ಅವರಿಗಿದ್ದಿಲ್ಲವೆಂತಲ್ಲ. 'ಅದು ನಿಷ್ಕಾರಣವಾಗಿ ದುರ್ವಯ ಮಾಡುವ ಕಾಲ, ಅದನ್ನು ಸದುಪಯೋಗಪಡಿಸ ಬೇಕೆಂದು ಅವರ ಅಂಬೋಣ, ಕುಮಾರವ್ಯಾಸ ಭಾರತದಿಂದ ಅವರು ಹೆಕ್ಕಿದ ಕರ್ಣ ಚರಿತ', ಜೈಮಿನಿ ಭಾರತದಿಂದ ತೆಗೆದ ಚಂದ್ರಹಾಸನ ಕಥೆ' ಇವು ಈ ಎರಡು ಉದ್ಭಂಧಗಳ ಸವಿಯನ್ನು ಮಕ್ಕಳಿಗೆ ಹತ್ತಿಸಲಿಕ್ಕೆ ಅನುಕೂಲವಾಗಿವೆ. ಚಿಕ್ಕ ಮಕ್ಕಳಲ್ಲಿ ಯಾವ ಕಾವ್ಯವು ಮನೋರಂಜಕವಾಗುತ್ತದೆಂದು ಚೆನ್ನಾಗಿ ಶೋಧಿಸಿ ಸಾಹಸಮಾಡಿದವರಲ್ಲಿ ಅವರು ಅಗ್ರಗಣ್ಯರೆಂದು ಕಂಟಕವಾಗಿ ಹೇಳಿದರೆ ಯಾರೂ ಅಸೂಯೆಪಡಲು ಕಾರಣವಿಲ್ಲ. ಇಡೀ ಕರ್ಣಾಟಕದಲ್ಲಿ ಇವರು ಈ ವಿಷಯದಲ್ಲಿ ಅಪ್ರತಿಮರು, ಕನ್ನಡವು ಮಾತ್ರ ಭಾಷೆಯಲ್ಲದ ಈ ಜಿಲ್ಲೆಯಲ್ಲಿ ಕನ್ನಡದ ಮೇಲೆ ಅಭಿಮಾನ ಹುಟ್ಟಿಸಿ, ಹಳ್ಳಿ ಹಳ್ಳಿಗಳಲ್ಲಿ ಸರ್ಕೀಟು ಬೆಳೆಯಿಸುವಾಗ ಅಲ್ಲಲ್ಲಿ ಕನ್ನಡ ಓದಿದವರ ಪರಿಚಯ ಮಾಡಿಕೊಂಡು, ಅವರೊಡನೆ ಹಳೇ ಕಾವ್ಯಗಳ ನಿಜವಾದ ವೈಶಿಷ್ಟ್ಯವೇನು, ಈ ಕಾಲಕ್ಕೆ ತಕ್ಕ ಸಾಹಿತ್ಯವು ಹೇಗಿರಬೇಕು, ಸಾಯಬಾರದ ಸಾಹಿತ್ಯವೆಂದರೆ ಅದರ ಲಕ್ಷಣಗಳೇನಿರಬೇಕು ಎಂದು ನಿರ್ದಾಕ್ಷಿಣ್ಯದಿಂದ ಚರ್ಚಿಸುವ ಸಾಹಸ ಮಾಡಿದವರಲ್ಲಿ ಇವರೇ ಮೊದಲಿಗರೆಂದು ದಕ್ಷಿಣ ಕನ್ನಡದವರು ಇವರ ಉಪಕಾರ ಸ್ಮರಣೆ ಮಾಡಬೇಕಾಗಿದೆ. ಇವರು ಈ ಆಧುನಿಕ ಸಾಹಿತ್ಯವನ್ನು ಸಾಧ್ಯವಿದ್ದ ಮಟ್ಟಿಗೆ ಎತ್ತಿಹಿಡಿಯಬೇಕು ಎಂದು ಯತ್ನಿಸುವಾಗ, ಸಂಪ್ರದಾಯವಾದಿಗಳೂ ಪೂರ್ವ ಕವಿಗಳ ಮೇಲೆ ಆಂಧಭಕ್ತಿಯುಳ್ಳವರೂ ಇವರ ವಿಕಾಸವಾದವನ್ನು ಖಂಡಿಸಿ, ಇವರು ಅಧುನಿಕ ಗ್ರಂಥಗಳ ಆಂಧಭಕ್ತರು ಎಂದು ಭಾವಿಸುತ್ತಾರೆ. ಆದರೆ ಇವರಿಗೆ ಪ್ರಾಚೀನ ಕವಿಗಳ ಮೇಲೆ ಅಭಿಮಾನವೇನೂ ಕಡಿಮೆಯಿಲ್ಲ. ಎಲ್ಲಾ ಪ್ರಾಚೀನ ಕವಿಗಳು ವಂದ್ಯರು, ಎಲ್ಲಾ ಆಧುನಿಕ ಕವಿಗಳು ನಿಂದರು ಎಂಬ ಈ ತೀರ್ಮಾನಕ್ಕೆ ಮಾತ್ರ ಇವರು ಬಗ್ಗುವುದಿಲ್ಲ. ಸಾಹಿತ್ಯವು ಉಳಿಯಬೇಕಾದರೆ ಅದು ಬೆಳೆಯಬೇಕು; ಇದಕ್ಕೆ ತೀರಾ ಸಂಸ್ಕೃತದ ಬೆಂಬಲವೇ ಸಾಲದು, ಆಧುನಿಕ ಸಂಸ್ಕೃತಿಯ ಭಾಷೆಗಳ ವರ್ಚಸ್ಸು ಕನ್ನಡದ ಮೇಲೆ ಬಿಳಬೇಕು; ಇದು ಭಾವಿ ಬೆಳವಣಿಗೆಗೆ ನೈಸರ್ಗಿಕವಾದ ಮಾರ್ಗ ಎಂಬುದು ಇವರ ಪ್ರತಿಪಾದನೆ.

ಇವರ ಅಪ್ರತಿಮವಾದ ಶಿಕ್ಷಣ ಪರಿಚಯದ ಪರಿಣಾಮವಾಗಿ ಹುಟ್ಟಿದ ಮಕ್ಕಳ ಕಥೆಗಳು' ಮಾತೃಭಾಷೆ ಕನ್ನಡವಲ್ಲದ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದಕ್ಕೆ ಸುಗಮವಾದ ದಾರಿಯೆಂಬುದು ಸ್ವಯಂ ಸಿದ್ಧವಾಗಿದೆ.

ಹೀಗಾಗಿ ಉದ್ಮಂಥಗಳನ್ನು ಬರೆಯುವವರ, ಬರೆದವರ, ಸಾಲಿನಲ್ಲಿ ನಿಲ್ಲಲು ಯೋಗ್ಯತೆಯುಳ್ಳವರೆಂದು ಭಾವಿಸಲು ಇವರು ಎಡೆ ಕೊಡದಿದ್ದರೂ ನ್ಯಾಯವಾದ ಮತ್ತು ಸಕಾರಣವಾದ ಟೀಕೆ ಎಂದರೇನು, ಉತ್ತಮ ಕಾವ್ಯವೆಂದು ಯಾವುದನ್ನು ಎನ್ನಬೇಕು ಎಂಬುದನ್ನು ಸರಿಯಾಗಿ ಮಂದಟ್ಟು ಮಾಡಿಸಿ, ಉತ್ತಮ ಗ್ರಂಥಗಳು