ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

— 2 —

ಪುರಾಣ ಕಾಲದಲ್ಲಿ ಇಲ್ಲದೆ ಇರುತ್ತಿದ್ದರೆ, ಅವುಗಳು ಇತಿಹಾಸಕಾಲದಲ್ಲಿ ಉಜ್ವಲವಾಗಿ ಪ್ರತಿಬಿಂಬಿಸುವುದಿಲ್ಲ, ಭಾರತಭೂಮಿಯು ಮುಸಲ್ಮಾನರ ಕಠೋರ ಶಾಸನದಿಂದ ತಲ್ಲಣಿಸುತ್ತಿದ್ದಾಗ, ಈ ಗುಣಗಳು ಇನ್ನೂ ಪ್ರಭಾಮಯವಾಗಿ ಬೆಳಗಿದುವು.

ಪ್ರತಾಪಶಾಲಿಯಾದ ಅಕ್ಷರು ದೆಹಲಿಯ ಸಿಂಹಾಸನರೂಢನಾಗಿದ್ದನು. ಮೊಗಲ್ ಸಾಮ್ರಾಜ್ಯದ ಅರ್ಧ ಚಂದ್ರಾಂಕಿತವಾದ ಧ್ವಜವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ, ಸಿಂಧೂ ನದಿಯಿಂದ ಬಂಗಾಳೆಯ ವರೆಗೂ ನೆರಳು ಹಾಕುತಿತ್ತು. ಪೂರ್ವದ ಅಫಘಾನ್ ರಾಜರು ಬದ್ಧಹಸ್ತರಾಗಿ ದಿಲೀಶ್ವರನಿಗೆ ಕೈ ಮುಗಿದರು. ರಾಜಪುತ್ರರಲ್ಲಿ ಅನೇಕರು ಅವನ ದೊರ್ದಂಡ ಪ್ರತಾಪವನ್ನು ಸಹಿಸಲಾರದೆ, ಅವನ ಗದ್ದುಗೆಯ ನೆರಳಲ್ಲಿ ಮರೆಹೊಕ್ಕರು. ಅವರ ಅನೇಕ ದುರ್ಗಗಳು ಮೊಗಲರ ವಿಹಾರಸ್ಥಾನಗಳಾದುವು. ಪರಂತು ಗಡಾಮಂಡಲದ ರಾಣಿಯು ತನ್ನ ಕೊರಳನ್ನು ಆಕ್ಷನ ಪಾಶಕ್ಕೆ ಒಡ್ಡಲಿಲ್ಲ. ಚತುರೋಪಾಯ ಸಂಪನ್ನನಾದ ಆರು ಗಡಾಮಂಡಲದ ರಾಣಿಯಾದ ದುಗಾ೯ವತಿಯು ತನ್ನ ಅನುಚರಿಯಾಗುವಂತೆ, ಹಲವು ಉಪಾಯಗಳನ್ನು ಮಾಡಿದನು, ತೇಜಸ್ವಿನಿಯಾದ ದ.ರ್ಗವತಿಯ ವಿರ ಸಹಿಸದಿಂದ ಅವೆಲ್ಲವೂ ಬಯಲಾಗಿ ಹೋದುವು.

ದುರ್ಗಾವತಿಯು ಮಧ್ಯ ಹಿಂದುಸ್ಥಾನದ ಮಹೊಬಾ ಸಂಸ್ಥಾನದ ರಾಜನಾದ ಚಂರ್ದನ ಮಗಳು. ದುರ್ಗದ ಅಧಿದೇವತೆಯ ಸಾಮಾಂಕಿತದಿಂದ ಆನಳಿಗೆ ದುರ್ಗಾವತಿ ಎಂದು ಹೆಸರನ್ನಿಟ್ಟರು. ಕನ್ನಿಕೆಯ ಬುದ್ದಿ ಸಂಪನ್ನತೆಯನ್ನೂ ಸೌಂದರ್ಯವನ್ನೂ ನೋಡಿ ಆನಂದಪಡುತ್ತಲಿದ್ದ ಚಂದೇಲನು, ತನ್ನ ವಂಶಕ್ಕೆ ಅನುರೂಪನಾದ ಕುಲೀನ ರಾಜ ಪುತ್ರ ರಾಜನಿಗೆ ಅವಳನ್ನು ಕೊಡಬೇಕೆಂದು ಮನಸ್ಸು ಮಾಡಿದ್ದನು. ದುರ್ಗಾವತಿಯು ಗಡಾಮಂಡಲದ ಗೌಡರಾಜನಾದ ದಳಪತಿ ಶಹನ ಸಾಹಸ ಪರಾಕ್ರಮ ಮುಗ್ಧಳಾಗಿ, ತನ್ನ ತಂದೆಗೆ ತಿಳಿಯದಂತೆ ಆ ವೀರನನ್ನು ಹೃದಯದಲ್ಲಿ ವರಿಸಿದ್ದಳು, ದಳಪತಿಶಹನು ಮಹಾ ಯೋಧನು;