ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

— 3 —

ರಾಜಕಾರ್ಯಧುರಂಧರನು; ರಾಜಪುತ್ರ ರಮಣಿಯರ ಮಾನ ರಕ್ಷಕನು, ದುರ್ಗಾವತಿಯು ಅಂತರಂಗದಲ್ಲಿ ತನ್ನ ಪ್ರಣಯಚಿಹ್ನ ನಾದ ಹೊನ್ನಿನ ತೆಂಗಾಯಿಯನ್ನು ದಳಪತಿ ಶಹನಿಗೆ ಕಳುಸಿದಳು, ದಳಪತಿಶಹನು ಕನ್ನಿಕೆಯ ಪ್ರೇಮಪುರಸ್ಕಾರವನ್ನು ಅತ್ಯಂತ ಶ್ರದ್ದೆಯಿಂದ ಸ್ವೀಕರಿಸಿದನು. ಕ್ರಮೇಣ ದುರ್ಗಾವತಿಯ ಆಶೆಯು ಹೊರಬಿದ್ದಿತು. ದುರ್ಗಾವತಿಯ ತಂದೆಯು ಈ ಸಂಬಂಧವನ್ನು ಒಪ್ಪಲಿಲ್ಲ. ದಳಪತಿ ಶಹನು ಸಾಮಾನ್ಯ ರಾಜ ಪುತ್ರನೆಂದೂ, ಅವನ ರಾಜ್ಯವು ಬಲು ಚಿಕ್ಕದೆಂದೂ, ಅವನು ಅಳಿಯನಾದರೆ ತನ್ನ ಕುಲಗೌರವವು ಕಳಂಕಿತವಾಗುವುದೆಂದೂ ಭಾವಿಸಿ, ಒಂದು ಉಪಾಯವನ್ನು ಮಾಡಿದನು, ದಳಪತಿ ಶಹನು ಅರ್ಧ ಲಕ್ಷ ಸೈನ್ಯದೊಡನೆ ಸ್ವಯಂವರಕ್ಕೆ ಬರಬೇಕೆಂದು ಚಂದೇನು ಹೇಳಿ ಕಳುಹಿಸಿದನು. ಅಷ್ಟು ಸೈನ್ಯವನ್ನು ತನ್ನ ಚಿಕ್ಕ ಮಂಡಲದಲ್ಲಿ ಸಾಮಾನ್ಯ ರಾಜನಾದ ದಳ ಸತಿಶಕನು ಜತೆಗೊಳಿಸಲಾರನೆಂದು ಚಂದೇಲನು ಬಗೆದನು. ವೀರಭೂಮಿಯು ತುರುಕರ ಪಾಲಿಸಿದರೂ, ವೀರತ್ವವು ಈ ಭರತಭೂಮಿಯಿಂದ ಇನ್ನೂ ನಿರ್ನಾಮವಾಗಿರಲಿಲ್ಲ ಎಂದು ಚಂದೇಲನು ತಿಳಿದಿರಲಿಲ್ಲ, ಪ್ರಸಿದ್ಧ ವೀರಸಿದ್ದ ರಾಜಪುತ್ರರು ಉತ್ಸಾಹಿತರಾಗಿ ಅವನ ಪತಾಕೆಯ ಕೆಳಗೆ ಇನ್ನೂ ಒಟ್ಟು ಕೊಡುತ್ತಿದ್ದರೆಂದು ಚಂದೇಲನ ಮನಸ್ಸಿಗೆ ಹತ್ತಲಿಲ್ಲ. ಲಕ್ಷಾರ್ದ ಸೈನ್ಯವನ್ನು ಮೋಹರಿಸಲಾರದೆ ದಳಪತಿಶಹನು ತಾನೆ ಹಿಂದೆಗೆವನೆಂದು ಚಂದೇಲನು ನಂಬಿದನು.

ಸ್ವಯಂವರದ ಪ್ರಾಪ್ತವಾಯಿತು. ದುರ್ಗಾವತಿಯ ಸೌಂದರ್ಯ ಕೀರ್ತಿಯನ್ನು ಕೇಳಿ ಮೋಹಿತರಾದ ರಾಜಪುತ್ರರೆಲ್ಲರೂ ಮಂಟಪದಲ್ಲಿ ಬಂದು ನೆರೆದರು. ಆ ರಾಜಪುತ್ರರ ಮಂಡಲದಲ್ಲಿ ಗಢಾಮಂಡಲದ ನಾಯಕನು ಮಾತ್ರ ಇರಲಿಲ್ಲ. ಕನ್ನಿಕೆಯಾದ ದುರ್ಗಾವತಿಯು ಕೈಯಲ್ಲಿ ಪುಷ್ಪ ಮಾಲಿಕೆಯನ್ನು ಹಿಡಿದುಕೊಂಡು, ಸ್ವಯಂವರ ಮಂಟಪದಲ್ಲಿ ಮೆಲ್ಲನೆ ಕಾಲಿಟ್ಟಳು; ಮುಹೂರ್ತ ಮಾತ್ರ ನಿಂತುಕೊಂಡು, ತನ್ನ ಕಣ್ಣಿನ ಮಿಂಚನ್ನು ಸಭಾಮಂಡಲದಲ್ಲಿ ಬೀರಿದಳು. ಕೂಡಲೇ ಅವನತಮಸ್ತಕಳಾಗಿ ಪ್ರತಿಮೆಯಂತೆ ನಿಂತುಬಿಟ್ಟಳು. ದಳಪತಿ ಶಹನ ಉಜ್ವಲಮುಖವು ಅಲ್ಲಿ ತೋರಲಿಲ್ಲ. ಆಶಿಸುವಂತಹನನ್ನು