ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

— 7 —

ಮುಸಲ್ಮಾನರು ಪೀಡಿಸುವುದೆಂದರೆ ನಮ್ಮಲ್ಲಿ ಸಹನಾಶಕ್ತಿಯಿಲ್ಲದೆ ಪೌರುಷವೇ ಇಲ್ಲದಂತಾಯಿತಲ್ಲಾ! ನನ್ನ ಪ್ರಜೆಗಳಿರ! ನನ್ನ ಬಂಧುಗಳಿದ! ನಾವು ಹೆಣ್ಣು ಕುರಿಗಳಂತೆ ಸುಮ್ಮನಿದ್ದರೆ ಪಲಾಯನಮಾಡುವ ಕತ್ತೆಕಿರುಬನು ಮೇಲೆ ಬೀಳಲು ಮುಂದೆ ಹೆಜ್ಜೆಯನ್ನಿಡುವುದು. ದೇಶವು ಶತ್ರುಗಳ ಪಾಲಾಗುವುದು. ನಿಮ್ಮ ಮಕ್ಕಳುವರಿಗಳು ಅವರ ದಾಸರಾಗುವರು; ನಿಮ್ಮ ಹೆಂಡತಿಯರು ತಂಗಿಯರು ಅವರ ಮನೆಯ ತೊತ್ತುಗಳಾಗುವರು. ಇದಕ್ಕಿಂತಲೂ ಹೀನವಾದ ಅಧೋಗತಿಯುಂಟೆ? ಯಾರು ನಮ್ಮ ಸನಾತನ ಧರ್ಮದ ವಿಗ್ರಹಗಳನ್ನು ಪದಹತಿಯಿಂದ ಚೂರ್ಣ ಮಾಡುವರೋ, ಯಾರು ನನ್ನ ಬೆನ್ನ ಮೇಲೆ ಕುಳಿತುಕೊಂಡು ನಿರಂಕುಶಂಗಿ ಇಲ್ಲಿ ಆಳುವರೋ, ಯಾರು ನಮ್ಮ ಕಳತ್ರಪುತ್ರಿಯರ ಪಾತಿವ್ರತ್ಯವನ್ನು ಸೂರೆಗೊಳ್ಳುವರೋ ಆ ಮುಸಲ್ಮಾನರು, ಆ ಮಲಿನ ಮ್ಲೇಚ್ಛರು, ಆ ಮತಾಂಧ ತುರಷ್ಕರು ನಮ್ಮ ಪುರದ್ವಾರದ ಬಳಿಯಲ್ಲಿ ಉಳಿದಿರುವರಂತೆ. ಭಾರತ ಭೂಮಿಯಲ್ಲಿ ಇನ್ನೂ ವೀರತ್ವವು ಇದ್ದರೆ ಅದು ಈಗ ಚಿಗುರಲಿ? ಬಾಪ್ಪಾರಾಯನ ಪವಿತ್ರ ರಕ್ತವು ನಿಮ್ಮ ಧಮನಿಯಲ್ಲಿ ಹರಿಯುವುದು ನಿಜವಾದರೆ ಅದರ ದೃಷ್ಟಾಂತವು ಈಗ ತೋರಲಿ! ನೀವು ವೀರಶಿರೋಮಣಿಗಳಾದ ರಾಜ ಪುತ್ರರ ಸಂತತಿಯವರಾಗಿದ್ದರೆ ಕತ್ತೆ ಕಿರುಬಗಳು ತಡೆಗಟ್ಟಿದ್ದ ಈ ಅನಾಥ ಗೋವನ್ನು ರಕ್ಷಿಸಿರಿ! ಗೋಹತ್ಯಕ್ಕೆ ಅವರು ಹೇಸುವವರಲ್ಲ. ಆದರೆ ಅವರು ನನ್ನ ಯರ್ಥಾದ ಸ್ಥಿತಿಯನ್ನು ಕಂಡು ಹಿಡಿಯಲಿಲ್ಲ. ಈ ಗೋವೇ ಅವರಿಗೆ ವ್ಯಾಪ್ತಿಯಾಗಿ ಪರಿಣಮಿಸುವುದೆಂದು ತಿಳಿದುಕೊಳ್ಳಿರಿ! ದುರ್ಗಾ ನಮ್ಮೆಲ್ಲರಿಗೆ ಸಹಾಯಕಳಾಗು! ದುರ್ಗಾ! ನಮ್ಮ ಶತ್ರುಗಳನ್ನು ಹಾರಿಸಿಬಿಡುವುದಕ್ಕೆ ನಮ್ಮ ಹೃದಯದಲ್ಲಿ ಉತ್ಕಟಶಕ್ತಿಯನ್ನು ತುಂಬಿಸು!' ದುರ್ಗಾವತಿಯು ಈ ಉತ್ತೇಜಿತ ವಾಕ್ಕುಗಳನ್ನು ಕೇಳಿ ನಗರದ ರಾಜಪುತ್ರರೆಲ್ಲರು ರಕ್ತವರ್ಣ ವಸನವನ್ನು ಉಟ್ಟುಕೊಂಡು ಯುದ್ಧಕ್ಕೆ ಸಿದ್ಧರಾಗಿ ಬಂದರು. ಎಂಟು ಸಾವಿರ ಸವಾರರೂ ಎಂಟು ಸಾವಿರ ಸೈನಿಕರೂ ಸ್ವದೇಶವನ್ನು ರಕ್ಷಿಸುವುದಕ್ಕೆ ಮುಂದಾದರು. ಈ ಸೈನ್ಯಕ್ಕೆ ದುರ್ಗಾವತಿ ತಾನೇ ಅಗ್ರೇಸರಳಾದಳು, ಲೋಹಕವಚವನ್ನು ತೊಟ್ಟು ಕೊಂಡು ಶಸ್ತ್ರಧಾರಿಣಿಯಾಗಿ, ದುರ್ಗಾವತಿಯು ಕುದುರೆಯನ್ನು ಹತ್ತಿ ಸೈನ್ಯವನ್ನು ನಡೆಯಿಸಿದಳು. ಯುದ್ಧವು ಪ್ರಾರಂಭ