ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 8 -

ವಾಯಿತು. ದುರ್ಗಾವತಿಯು ಪ್ರಾಣದ ಮೇಲೆ ಆಕೆಯನ್ನಿಡದೆ, ಶತ್ರು ಸೈನ್ಯವನ್ನು ಭೇದಿಸಿಕೊಂಡು ಹೋದಳು. ಅವಳ ಭಲ್ಲೆಯ ಪೆಟ್ಟಿಗೆ ಶತ್ರುಗಳು ಚೂರ್ಣವಾಗಿ ಹೋದರು. ಹಿಂದಿರುಗುವಾಗ ದುರ್ಗಾವತಿಯು ಶತ್ರುವಿನ ವ್ಯೂಹದಲ್ಲಿ ಸಿಕ್ಕಿ ಬಿದ್ದಳು. ಅವಳ ಭುಜದಿಂದ ರಕ್ತಪ್ರವಾಹವು ಹರಿಯುತ್ತಿತ್ತು, ಅವಳನ್ನು ರಕ್ಷಿಸುವುದಕ್ಕೆ ರಾಜಪುತ್ರರು ತಂಡತಂಡವಾಗಿ ಹೋಗಿ ರಣರಂಗದಲ್ಲಿ ಮಲಗಿದರು. ಕೊನೆಗೆ ರಣಮತ್ತೆಯಾದ ಸಾಕ್ಷಾತ್ “ದುರ್ಗಾವತಿ”ಯನ್ನು ರಾಜಪುತ್ರರ ಪಾಳೆಯಕ್ಕೆ ಸುರಕ್ಷಿತವಾಗಿ ತಂದರು. ದೂರದಿಂದ ಇದನ್ನೆಲ್ಲಾ ನೋಡುತ್ತಿದ್ದ ಅಸೋಫ್ ಖಾನನು ಆಶ್ಚರ್ಯದಿಂದ ಭ್ರಾಂತಿಗೊಂಡನು. ಈ ಭ್ರಾಂತಿಯ ಪಲಾಯನವಾಗಿ ಪರಿಣಮಿಸಿತು. ಹತಾಶನಾದ ಅಸೋಫ್ ಖಾನನು ಅಳಿದುಳಿದ ಸೇನೆಯನ್ನು ಕೂಡಿಸಿ ಅಪಮಾನವನ್ನೂ ಜೀವವನ್ನೂ ಕಟ್ಟಿ ಕೊಂಡು, ಮಾಳವ ದೇಶಕ್ಕೆ ಜಾರಿಬಿಟ್ಟನು.

ನೀಚನಾದ ಅಸೋಫಖಾನನು ಈ ಅಪಜಯದಿಂದಲೂ ಅಪಮಾನದಿಂದಲೂ ಇನ್ನೂ ಕೆರಳಿದಂತಾದನು. ಗಢಾಮಂಡಲವನ್ನು ಭೂಸನಮಾಡಬೇಕೆಂದು ಅವನು 18 ತಿಂಗಳುಗಳ ಮೇಲೆ ಮಹಾ ಸೈನ್ಯವನ್ನು ಜೋಡಿಸಿ ಕೊಂಡು ಬಂದನು. ಆದರೂ ಗಡಾಮಂಡಲಕ್ಕೆ ರಕ್ಷಕರು ಇಲ್ಲದೆ ಇರಲಿಲ್ಲ. ಈ ಸಲವೂ ಆಸೀಫ್ ಖಾನನು ಅಪಜಯವನ್ನು ತಾಳಲಾರದೆ ಓಡಿ ಹೋದನು. ಯುದ್ದದ ಮುಖಾಂತರವಾಗಿ ತನ್ನ ಮನೋರಥವು ಸಿದ್ಧಿಸದೆ ಇದ್ದುದರಿಂದ, ಆಧಮಾಧವನಾದ ಆಸೀಫ್ ಖಾನನು ಕಸಟೋಪಾಯಗಳನ್ನು ಮಾಡುವುದಕ್ಕೆ ಕೈ ಚಾಚಿದನು. ದುರ್ಗಾವತಿಯ ರಾಜ್ಯಾಧಿಕಾರದಲ್ಲಿ ಪ್ರಮುಖರಾದ ಸರದಾರಲ್ಲಿ ಭೇದವುಂಟಾಗುವಂತೆ ಅವಳ ಆಪ್ತರು ಅವಳಿಂದ ಸಡಿಲಿಹೋಗುವಂತೆಯೂ ಗೂಢಚಾರದಿಂದ ಒಳಸಂಚು ನಡೆಯಿಸಿದನು. ಈ ಕುಹಕದಿಂದ ರಾಜ್ಯದಲ್ಲಿ ಅನೇಕ ಅನಿಷ್ಟಗಳು ಮೊಳೆತುವು. ದುರ್ಗಾವತಿಯು ಈಗ ಯಥಾರ್ಥವಾಗಿ ಅಬಲೆಯಾದಳು. ಆದರೂ ತನ್ನ ದೇಹದಲ್ಲಿ ಪ್ರಾಣವಾಯುವು ಸಂಚರಿಸುವ ವೆರೆಗೆ ಮೊಗಲರು ತನ್ನ ರಾಜ್ಯದಲ್ಲಿ ಕಾಲಿಡದ ಹಾಗೆ ಮಾಡುವೆನೆಂದು ವೀರರಾಜ್ಞಿಯು ಶಪಥ ಕಟ್ಟಿದಳು. ಅಷ್ಟರಲ್ಲಿ ಅಸೋಫ್‌ಖಾನನು ಮೂರನೆಯ ಸಲ ದಂಡಿನೊಡನೆ ಬಂದನು. ದುರ್ಗಾವತಿ ಇದ್ದಷ್ಟು ಸೇನೆಯನ್ನು ಒತ್ತರಿಸಿಕೊಂಡು ಮುಂದರಿಸಿದಳು.