ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 9 -

ಈ ಕಾಲದಲ್ಲಿ ಅವಳ ಹದಿನಾಲ್ಕು ವರ್ಷ ವಯಸ್ಸಿನ ಬಾಲಕನ್ನು ಆಯುಧ ಪಾಣೆಯಾಗಿ ರಣಸನ್ನದ್ಧನಾದನು. ಯುದ್ಧವು ಘೋರವಾಗಿ ನಡೆಯಿತು. ವೀರೇಂದ್ರನು ಉನ್ಮತ್ತನಂತೆ ಶತ್ರುಗಳ ಮೇಲೆ ಬಿದ್ದು ಕಾಳಗವಾಡಿದನು. ಕೊನೆಗೆ ಗಾಯಗೊಂಡು ಖಡ್ಗ ಹಸ್ತನಾಗಿ ರಣರಂಗದಲ್ಲಿ ಮಲಗಿದನು; ಮಲಗಿದವನ, ಮತ್ತೇಳಲಿಲ್ಲ. ಮರಿಯನ್ನು ಕಳೆದ ವ್ಯಾಘಿಯಂತೆ ದುರ್ಗಾವತಿ ಆವೇಶಗೊಂಡು ಶತ್ರುಗಳ ಮೇಲೆ ಬೀಳಲು ಹೊರಟಳು. “ಮರಣಕರವಾದ ಏಟನ್ನು ಹೊಂದಿದ ಬಾಲಕನನ್ನು ಕರೆದುಕೊಂಡು ಸ್ವಾಮಿನಿ ಶಿಬಿರಕ್ಕೆ ತೆರಳಬಾರದೆ? ನಮ್ಮಂತಹ ವೀರರಿರಲು ಯುದ್ಧದ ಗೊಡವೆ ತಮಗೇಕೆ?” ಎಂದು ರಣರಂಗದಲ್ಲಿ ಸ್ವಾಮಿಭಕ್ತನಾದ ರಾಜ ಪುತ್ರನೊಬ್ಬನು ಕೇಳಿದನು. ಅದಕ್ಕೆ ದುರ್ಗಾವತಿಯು ಗಂಭೀರಸ್ವರದಿಂದ “ನಾನು ಹಿಂತಿರುಗುವೆನೆಂಬ ಸುದ್ದಿ ತಿಳಿದರೆ, ಸೈನ್ಯವೆಲ್ಲವೂ ಹಿಮ್ಮೆಟ್ಟುವುದು, ವೀರಕುಮಾರನು ರಣರಂಗದಲ್ಲಿ ಮಡಿದು ಕ್ಷತ್ರಿಯ ಸ್ವರ್ಗವನ್ನು ಏರಿದನೆಂದರೆ ನನಗೆ ಸಂತೋಷವಲ್ಲವೇ? ಯುದ್ಧ ತೀರಿದೊಡನೆಯೇ ನನ್ನ ಪ್ರಿಯ ಪುತ್ರನನ್ನು ಪರಲೋಕದಲ್ಲಿ ನಾನು ಸೇರಬೇಕೆಂದಿರುವೆನು” ಎಂದು ಹೇಳಿದಳು. ದುರ್ಗಾವತಿ! ನೀನು ಧನೈ ! ನೀನು ಯುದ್ಧದಲ್ಲಿ ಸೋತರೂ ಇನ್ನು ಗೆದ್ದೆ! ಶತ್ರುಗಳ ಪರಂಪರೆಯ ಸಾಲುಗಳಿಂದ ದುರ್ಗಾವತಿಯ ಸೇನೆ ಪುಡಿಪುಡಿಯಾಯಿತು. ಒಂದು ಬಾಣವು ಅವಳ ಕಣ್ಣನ್ನು ಚುಚ್ಚಿತ; ಮತ್ತೊಂದು ಬಾಣವು ಅವಳ ಎದೆಯನ್ನು ನಾಟಿತು, ಬಾಣಗಳನ್ನು ಕಿತ್ತು ತೆಗೆದರೂ ಅವಳು ರಕ್ತಸ್ರಾವದಿಂದ ಮೂರ್ಛೆ ಹೋಗಿ, ವಾಹನದ ಮೇಲೆ ಒರಗಿದಳು. ಅವಳು ಕುಳಿತಿದ್ದ ಆನೆಯನ್ನು ಯೋಧನೊಬ್ಬನು ಶಿಬಿರಕ್ಕೆ ಹಿಂತಿರುಗಿಸಲಿಕ್ಕೆ ಪ್ರಯತ್ನಿಸಿದನು. ಕೂಡಲೇ ಧೀರ ಯುವತಿಯ ಮೂರ್ಛಿ ತಿಳಿದು ಎದ್ದು, ಮುಗುಳಗು ನಗಾಡಿದಳು. “ನನ್ನನ್ನು ಬದುಕಿಸಲು ಎಣಿಸುವೆಯಾ? ನನ್ನನ್ನು ಶಿಬಿರಕ್ಕೆ ಒಯ್ದರೆ ನನಗೆ ಮುಂದಿನ ಮರಣವನ್ನು ತಪ್ಪಿಸಬಹುದೇ? ಅದರ ಬದ ಲಾಗಿ ಕೈಯಲ್ಲಿದ್ದ ಶಸ್ತ್ರದಿಂದ ನನ್ನ ಪ್ರಾಣವನ್ನು ದೇಹದಿಂದ ಉಗಿದು ಬಿಡು ಎಂದು ಅಪ್ಪು ಟಸ್ವರದಿಂದ ಹೇಳಿದಳು. ಇಂತಹ ಜನನಿಯನ್ನು

ಕೊಲ್ಲಲು ಯಾರು ತಾನೆ ಕೈಮಾಡುವರು? ಸುತ್ತಲಿರುವವರೆಲ್ಲರೂ ಮರುಗಿದರು. ಕೂಡಲೇ ದುರ್ಗಾವತಿಯು ನಗಾಡುತ್ತ ತನ್ನ ಖಡ್ಗಕ್ಕೆ ತನ್ನ ಉದರವನ್ನು ಒರೆಯಾಗಿ ಮಾಡಿಬಿಟ್ಟಳು.

2