ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 10 -

ಯುದ್ಧವು ಸಮಾಪ್ತವಾಯಿತು. ಯುದ್ಧದ ನಾಯಕಿಯೇ ರಣತಲದಲ್ಲಿ ಒರಗಿದ ಬಳಿಕ ಯುದ್ಧವನ್ನು ನಡೆಯಿಸುವವರು ಯಾರು? ರಾಜ್ಯವು ಅಸೋಫ್‌ಖಾನನ ವಶವಾಯಿತು. ಆದರೆ ಕ್ಷಾತ್ರಧರ್ಮಪರಾಯಣೆಯಾದ ಆ ವೀರಶಿರೋಮಣಿಯ ಪವಿತ್ರ ದೇಹವು ಶತ್ರುಗಳ ಅಪವಿತ್ರ ಹಸ್ತದಿಂದ ಮಲಿನವಾಗಲಿಲ್ಲ. ಅನುಚರರಲ್ಲಿ ಕೆಲವರು ಕೂಡಲೇ ಅಗ್ನಿ ಕುಂಡವನ್ನು ಬೆಳಗಿಸಿ, ಶಾಸ್ಪೋಕ್ತ ವಿಧಿಯಿಂದ ದುರ್ಗಾವತಿಯ ಸಂಸ್ಕಾರಗಳನ್ನು ನಡೆಯಿಸಿದರು,

ದುರ್ಗಾವತಿಯು ಈ ನಶ್ವರ ಶರೀರವನ್ನು ಬಿಟ್ಟು ಅವಿನಶ್ವರ ಕೀರ್ತಿಯನ್ನು ಪಡೆದಳು. ಈ ನೀರಯುವತಿಯನ್ನು ಕುರಿತು ಕರ್ನಲ್‌ಸ್ಲಿಮೆನ್ ಸಾಹೇಬರು ಹೀಗೆ ಬರೆದಿರುವರು:- “ರಣಶೂರ ರಾಣಿಯಾದ ದುರ್ಗಾವತಿಯ ಸ್ಮಾರಕವು ಅದೇ ಪರ್ವತ ಪ್ರದೇಶಮಧ್ಯದಲ್ಲಿ ಕಟ್ಟಲ್ಪಟ್ವಿದೆ. ಅಲ್ಲಿ ಎರಡು ಪಾಷಾಣಸ್ತಂಭಗಳು ನೆಟ್ಟಗೆ ನಿಲ್ಲಿಸಿದ್ದು, ಅವುಗಳು ಆ ಯುದ್ಧಭೂಮಿಯ ಪ್ರೇಕ್ಷಕರ ಮನಸ್ಸಿನಲ್ಲಿ ಮೂರ್ತಿವಂತವಾದ ದೃಶ್ಯವನ್ನು ಉತ್ಪನ್ನ ಮಾಡುವುವು. ಈ ಗಿರಿಶಿಖರದಲ್ಲಿ ರಾತ್ರಿ ಸಮಯದಲ್ಲಿ ಅತಿ ಭಯಂಕರವಾದ ರಣಘೋಷವು ಆಗುತ್ತದೆಂದು ಹೇಳುವರು. ಈ ನಿರ್ಜನವಾದ ಮತ್ತು ರಮಣೀಯವಾದ ಪ್ರದೇಶ ಮಧ್ಯದಲ್ಲಿ ಹೋಗುವ ಪ್ರವಾಸಿಜನರು ಅತ್ಯಾನಂದದಿಂದ ಈ ಸ್ಥಳದಲ್ಲಿ ನಡೆಯುವರು. ರಾಣಿಯ ಸಮಾಧಿಯ ದರ್ಶನವನ್ನು ಪ್ರೇಮಪೂರ್ವಕವಾಗಿ ಸ್ವೀಕರಿಸುವರು; ಅವಳ ಪರಾಕ್ರಮ ಗುಣಗಳಿಂದ ಬೆರಗಾಗಿ ಸ್ವಾನಂದಚಿತ್ತದಿಂದ ಅವಳನ್ನು ಪೂಜಿಸುವರು. ಈ ಪ್ರದೇಶಮಧ್ಯದಲ್ಲಿ ಹೊಳೆಹೊಳೆವ ಕಂಚಿನ ತುಂಡುಗಳು ಹೇರಳವಾಗಿ ಸಿಕ್ಕುತ್ತವೆ. ಅವನ್ನು ತೆಗೆದುಕೊಂಡು ಆ ಜನರು ಅಲ್ಲಿ ಸಮರ್ಪಿಸುವರು. ತಮ್ಮ ಪ್ರಜಾಭಕ್ತಿಗನುಸಾರವಾಗಿ ನಾನು ಅದನ್ನು ನೋಡುತ್ತಲೇ ಮಹಾರಾಣಿ ದುರ್ಗಾವತಿಯ ದಿವ್ಯಗುಣದ ಅಭಿನಂದನಾರ್ಥವಾಗಿ ಒ೦ದು ತುಂಡನ್ನು ಅರ್ಸಣ ಮಾಡಿದನು." ಆಲೌಕಿಕ ಸೌಂದರ್ಯವನ್ನು ಯಾರು ತಾನೇ ಪೂಜಿಸದೇ ಇರುವರು?