ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 14 -

ವೀರಮತಿ:- “ಏಕೆಂದು ಇನ್ನೂ ತಿಳಿಯಲಿಲ್ಲವೇ?. ಮುಂದಿನ ಆಪತ್ತನ್ನು ಪರಿಹರಿಸುವಂತೆ ದೇವಿಯನ್ನು ಬೇಡುವುದಕ್ಕೆ -

ಯುವಕ:- “ ಅದಕ್ಕೋಸ್ಕರ ನೀವು ಇಷ್ಟು ದೂರ ಬರಬೇಕಿತ್ತೇ? ಶತ್ರುವಿನ ಪಾಳಯದವರು ನಿಮ್ಮನ್ನು ಇಲ್ಲಿ ಎಲ್ಲಾದರೂ ನೋಡಿದರೆ ನಿಮ್ಮ ಗತಿ ಏನಾಗುವುದು?”

ಈ ಮಾತನ್ನು ಕೇಳುತ್ತಲೇ ವೀರಮತಿಯ ಮುಖದಲ್ಲಿ ಒಂದು ಪ್ರಕಾರವಾದ ತೇಜಸ್ಸು ಹೊಳೆಯಿತು. ಕೂಡಲೇ ತನ್ನ ಕಟಭಾಗದಲ್ಲಿ ಅಡಗಿಸಿಟ್ಟ ಭರ್ಚಿಯನ್ನು ಇಚೆಗೆ ಸೆಳೆದುಕೊಂಡು, ನೋಡಿದೆಯೇ ಇದನ್ನು? ಇದರ ಸಹಾಯದಿಂದಲೇ ನಾನು ದಾರಿಯನ್ನು ಬಿಡಿಸಿಕೊಂಡು, ಅರಮನೆಗೆ ಹಿಂದೆರಳುತ್ತಿದ್ದೆನು” ಎಂದು ವೀರಮತಿಯು ಉತ್ತರ ಕೊಟ್ಟಳು.

ಯುವಕ:- “ನೀನು ಕ್ಷತ್ರಿಯ ಕುಮಾರಿ ಎಂದು ಬಲ್ಲೆ. ನೀವೆಲ್ಲರು ನಮ್ಮ ಭುಜಗಳ ನೆರಳಿನಲ್ಲಿರುವಾಗ ಇಷ್ಟು ಆಯಾಸವೇಕೆ?”

ವೀರಮತಿ:- “ಯುದ್ಧ ಕಾಲದಲ್ಲಿ ಶೌರ್ಯವನ್ನು ತೋರಿಸುವುದು ಪುರುಷಕರ್ತವ್ಯ. ದೇವಪ್ರಾರ್ಥನೆಯನ್ನು ಮಾಡುವುದು ಸ್ತ್ರೀಕೃತ್ಯ. ಇಬ್ಬರ ಕಾರ್ಯಗಳೂ ಒಂದೇ ಫಲವನ್ನು ಕೊಡುವುವು.”

ಯುವಕನು ಮತ್ತೆ ಮಾತನಾಡಲಿಲ್ಲ. ಗೌರಿಯು ಈ ಸಂಭಾಷಣೆಯ ಕಾಲದಲ್ಲಿ ಸುಮ್ಮನಿದ್ದು ಕೊನೆಗೆ “ಸಖಿಯೆ! ವೀರಮತಿ! ನಾವು ಇನ್ನೂ ಇಲ್ಲಿ ತಳುವಿದರೆ, ತಂದೆಯು ನಮ್ಮ ಮೇಲೆ ಕೋಸಿಸದೆ ಇರಲಾರದು” ಎಂದಳು.

ಇಬ್ಬರೂ ಪಲ್ಲಕ್ಕಿಯನ್ನು ಹತ್ತಿ, ಯುವಕನನ್ನು ಕರೆದರು. ಯುವಕನು “ನಾನು ಇದೇ ಸಂದರ್ಭದಲ್ಲಿ ಶತ್ರುವಿನ ಸೇನೆಯ ಏಸ್ತಾರವನ್ನೂ ರಚನೆಯನ್ನೂ ಹೊಂಚ ನೋಡಿ ಬರುವೆನು, ನೀವು ಬೇಗನೆ ಮುಂದು ಹೋಗಿರಿ” ಎಂದು ಹೇಳಿ ಕೋಟೆಯ ವರೆಗೆ ಅವರಿಬ್ಬರ ಮೈಗಾವಲಾಗಿ ಬಂದು, ಅಲ್ಲಿಯೇ ಹಿಂದುಳಿದನು.

ಕಥಾಸೂತ್ರವನ್ನು ಪಾಠಕಮಹಾಶಯರು ಸರಿಯಾಗಿ ಹಿಡಿಯುವಂತೆ ಇಲ್ಲಿ ಕೆಲವು ಪ್ರಸ್ತಾಪಗಳನ್ನು ಹೇಳಬೇಕಾಗುವುದು. ಕ್ರಿ. ಶಕೆಯ ೧೩ನೆಯ ಶತಮಾನದ ಆದಿಯ ವರೆಗೆ ದಕ್ಷಿಣ ಹಿಂದುಸ್ಥಾನದ ಮೇಲೆ ಮುಸಲ್ಮಾನರ ದೃಷ್ಟಿಯು ಬಿದ್ದಿರಲಿಲ್ಲ. ಪಠಾನ ಸುಲ್ತಾನರು ಉತ್ತರ ಹಿಂದುಸ್ಥಾನದಲ್ಲೇ ಸರ್ವಶಕ್ತರಾಗಿದ್ದರಲ್ಲದೆ, ದಕ್ಖಣದಲ್ಲಿನ ಚಿಕ್ಕ ದೊಡ್ಡ