ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 16 -

ನಿರ್ಬಂಧದಿಂದ ಅವನು ಸಮ್ಮತಿ ಕೊಟ್ಟನು. ಆದರೆ ಪ್ರಕೃತದ ಅವನ ಆಕಾಲಿಕ ಮರಣದಿಂದ ವೀರಮತಿಯ ಲಗ್ನಕ್ಕೆ ವಿಘ್ನ ಬಂದಿತು. ಈಗ ವೀರಮತಿಯು ತಂದೆಯ ಮರಣಕ್ಕೆ ಪ್ರತಿಕಾರವನ್ನು ಮಾಡಿದ ಹೊರತು, ಲಗ್ನ ಮಂಟಪವನ್ನು ಸೇರುವುದಿಲ್ಲ ಎಂದು ನಿಶ್ಚಯ ಮಾಡಿದಳು. ಅದಕ್ಕೋಸ್ಕರವೇ ಅವಳು ಅರಸನ ಮಗಳಾದ ಗೌರಿಯೊಡನೆ ಕಾಳಿಕಾಪೂಜೆಗೆ ಹೋಗಿದ್ದಳೆಂದು ಪಾಠಕ ಮಹಾಶಯರು ಈಗ ತಾನೇ ತಿಳಿಯಬಹುದು.

“ಭಾರತಭೂಮಿಯ ಸೌಭಾಗ್ಯ ಭಂಡಾರವನ್ನು ಸೂರೆಗೊಂಡು, ತಮ್ಮ ವಂಶಸ್ಥರ ನಾಮವನ್ನೂ ತಮ್ಮ ಹೆಸರನ್ನೂ ಇತಿಹಾಸಪುಟದಲ್ಲಿ ಕಂಳಂಕಿತವಾಗಿ ಮಾಡಿದ ಮುಸಲ್ಮಾನರಲ್ಲಿ ಘಜಿಮಹಮ್ಮದ್, ಅಲ್ಲಾವುದ್ದೀನ್ ಖಿಲ್ಜಿ, ತೇಮೂರಲೇನ್ ಈ ಮೂವರಿಗಿಂತಲೂ ಅಧಮರು ಯಾರೂ ಇಲ್ಲ” ಎಂದು ಒಬ್ಬ ಬಂಗಾಳೆಯ ಚರಿತ್ರಕಾರನು ಹೇಳುವನು. ಈ ಮೂವರು ತಾವು ಕಾಲಿಟ್ಟ ಭೂಮಿಯಲ್ಲಿ ಆರ್ಯಧರ್ಮಾವಲಂಬಿಗಳಾದ ಆಬಾಲ ವೃದ್ಧರನ್ನು ಕೊಂದು, ಪವಿತ್ರವಾದ ದೇವಸ್ಥಾನಗಳ ಮು೦ದುಗಡೆಯಲ್ಲಿ ಪಶುರಕ್ತವನ್ನು ಬಸಿದು, ಆರಾಧಿತವಾದ ವಿಗ್ರಹಗಳನ್ನು ಮಸೀದಿಯ ಸೋಪಾನಗಳಿಗಾಗಿ ಹಾಸಿ, ನಂದನವನದಂತೆ ಇದ್ದ ಪ್ರದೇಶಗಳನ್ನು ಶ್ಮಶಾನದಂತೆ ಮಾಡಿ, ಹೊಟ್ಟೆಯೊಳಗಿದ್ದ ಹಾಲನ್ನು “ಒಂದೇ ಬಾರಿ ಸುರಿಗೊಂಬ” ತವಕದಿಂದ ಭಾರತಧೇನುವಿನ ಉದರವನ್ನು ಸೀಳಿಬಿಟ್ಟರು. ಇವರು ನಡೆದ ಮಾರ್ಗಗಳೆಲ್ಲಾ ಸಿಡಿಲು ಬಡಿದ ಬೆಟ್ಟ ದಾರಿಗಳಂತೆ ಆದುವು; ನುಗ್ಗಿದ ನಗರಗಳೆಲ್ಲಾ ಅಡವಿಯ ಗುಣಿಗಳಂತೆ ಆದುವು. ಇವರ “ದೀನ್! ದೀನ್ !” ಎಂಬ ರಣ ಕೋಲಾಹಲವನ್ನು ಕೇಳುತ್ತಲೇ ಹಳ್ಳಿ ಹಳ್ಳಿಗರು ತಾವು ತಿ೦ದುಳಿದ ಕೊಂಚ ಹಣವನ್ನು ಉಡಿಯಲ್ಲಿ ಕಟ್ಟಿಕೊಂಡು, ಹುಲಿ ಹಾವುಗಳಿದ್ದ ಅಡವಿಗಾದರೂ ಒಕ್ಕಲು ಹೋಗುತ್ತಿದ್ದರು. ರಾಜಯುವತಿಯರು ತಮ್ಮ ವೀರಪತಿಗಳನ್ನು ಇವರೊಡನೆ ಯುದ್ಧಕ್ಕೆ ಸಶಸ್ತ್ರರಾಗಿ ಕಳುಹಿಸಿ, ತಮ್ಮ ಪಾತಿವ್ರತ್ಯವನ್ನು ರಕ್ಷಿಸುವುದಕ್ಕೆ ನಗುನಗುತ್ತ ಚಿತಿಯನ್ನು ಏರುತ್ತಿದ್ದರು. ಇವರು ಮಾಡಿದ ಹಾಳು ಹಾವಳಿ ಎಷ್ಟೆಂದು “ತುರುಕರು ತುಳಿದಲ್ಲಿ ತರಕಾರಿ ಬೆಳೆಯದು” ಎಂಬ ಗಾದೆಯೇ ತೋರಿಸುವುದು. ಅದರೂ ಧರ್ಮಾಂಧರಾದ ಈ ಮೂವರಲ್ಲಿ ಇಷ್ಟೊಂದು ಪ್ರಭೇದವಿತ್ತು; ಅವರ ಕಾರ್ಯಗಳಲ್ಲಿ