ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 17 -

ಸಾಮ್ಯವಿದ್ದರೂ ಅವರ ಉದ್ದೇಶಗಳಲ್ಲಿ ಇಷ್ಟೊಂದು ತಾರತಮ್ಯವಿತ್ತು. ತೇಮೂರಲೇನನು ಅತ್ಯಂತ ಧನಾಪೇಕ್ಷೆಯುಳ್ಳವನು. ಆ ಆಸೆಯು ತೀರುವ ತನಕ ಅವನು ಹಸಿದ ಸಿಂಹ; ಹಸಿವು ಅಣಗುವುದಕ್ಕೆ ಕೈಗೆ ಸಿಕ್ಕಿದ ಕೊಳ್ಳೆಯನ್ನು ಹೊಡೆದುಬಿಡುತ್ತಲೇ ತೃಪ್ತಿಗೊಂಡು, ದೂರದ ಗವಿಗೆ ಹಿಂತಿರುಗಿದನು. ಘಜ್ನಿ ಮಹಮ್ಮದನು ಧನಾಪೇಕ್ಷೆಯೊಡನೆ ಧರ್ಮಾಂಧತೆಯನ್ನು ಬೆರಸಿದ್ದನು. ಹಿಂದೂ ಜನರ ಬೊಕ್ಕಸವನ್ನು ಬಿಚ್ಚಿ, ಅವರ ದ್ರವ್ಯಾಪಹಾರವನ್ನು ಮಾಡುವುದು ಮಾತ್ರವಲ್ಲ, ಅವರ ಆರ್ಯಧರ್ಮವನ್ನು ನಿರ್ಮೂಲಿಸಿ, ತನ್ನ ಮತವನ್ನು ಖಡ್ಡ ಮುಖದಿಂದ ಸ್ಥಾಪಿಸಬೇಕೆಂದು ಬದ್ಧ ಕಂಕಣನಾದನು. ಇದಕ್ಕೋಸ್ಕರವೇ ಈತನು ಹನ್ನೊಂದು ಸಲ ಹಿಂದುಸ್ಥಾನಕ್ಕೆ ದಂಡೆತ್ತಿ ಬಂದುದು ಸಾಲದೆ, ಕೊನೆಗೆ ಕ್ರಿ. ಶ. ೧೦೨೪ರಲ್ಲಿ ಗುಜರಾತಿನಲ್ಲಿದ್ದ ಸೋಮನಾಥ ದೇವಸ್ಥಾನವನ್ನು ಒಳನುಗ್ಗಿ, ವಿಗ್ರಹಗಳನ್ನು ಪುಡಿ ಪುಡಿಗೈದನು. ಆದರೂ 'ಪರದ್ರವ್ಯಾಪಹಾರಿ” “ಅನ್ಯಮತಭಂಜಕ' ಎಂಬ (ಮಹಾ+ಅಯೋಗ್ಯ?) ಬಿರುದುಗಳನ್ನು ತಾಳಿದಬಳಿಕ ತನ್ನ ದೇಶಕ್ಕೆನೇ ಹಿಂತೆರಳಿದನು. ಅಲ್ಲಾವುದ್ದೀನನಾದರೊ, ತನ್ನ ಹಾಳು ಜೀವಕಾಲದಲ್ಲಿ ಮೂರು ಉದ್ದೇಶಗಳನ್ನು ಕೊನೆಗಾಣಿಸುವುದಕ್ಕೆ ಯತ್ನಿಸಿದನು. ತೇಮೂರಲೇನನ ಧನಾಪೇಕ್ಷೆಯೂ, ಮಹಮ್ಮದನ ಮತಾಭಿಮಾನವೂ, ಮಾತ್ರವಲ್ಲ, ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ ರಾಜದಂಡವನ್ನು ಬೀಸಬೇಕೆಂಬ ರಾಜ್ಯಾಕಾಂಕ್ಷೆಯೂ ಈತನ ಹೃದಯದಲ್ಲಿ ಬೇರೂರಿದ್ದುವು. ಈ ಅಭಿಲಾಷೆಯು ಹುಟ್ಟು ಬಂಜೆಗೆ ಮಕ್ಕಳಾಗಬೇಕೆಂಬ ಆಸೆಯಾಗಿರಲಿಲ್ಲ. ಅಲ್ಲಾವುದ್ದೀನನು ಮಹಾವೀರನಾಗಿದ್ದನು ಎಂಬುದೇನೋ ನಿಜ; ಆದರೆ ಬಾಲ್ಯದಿಂದಲೂ ನ್ಯಾಯನೀತಿಗಳ ಚಿಂತೆಯನ್ನು ಇವನು ಕಟ್ಟಿಕೊಳ್ಳದೆ ಇದ್ದುದರಿಂದ, ಕೆಲವು ಕಾಲ ಮಾತ್ರವೇ ಬಳೆಯುತ್ತ ಹೋದನು. ಹೊಕ್ಕುಳಿನ ಪ್ರಯೋಜನವನ್ನು ಅರಿತ ಈ ಕೃತಘ್ನನು ಯಾವ ಸೋಪಾನಗಳನ್ನು ಹತ್ತಿ ಶಿಖರಕ್ಕೆ ಏರಿದನೋ, ಅವುಗಳನ್ನೇ ಧಿಕ್ಕಾರದೃಷ್ಟಿಯಿಂದ ಮೇಲೆ ನಿಂತು ನೋಡುತ್ತಿದ್ದನು. ಯಾವ ಮರದ ಕೊಂಬೆಯ ಮೇಲೆ ತನ್ನ ಕೈ ಕೊಡಲಿಯನ್ನು ತಿಕ್ಕಿ ಹರಿತವಾಗಿ ಮಾಡಿದನೊ, ಆ ವೃದ್ಧವೃಕ್ಷವನ್ನೇ ಕಡಿದುಹಾಲಿಕ್ಕೆ ಇವನು ಹೇಳಿಲ್ಲ. ತನ್ನನ್ನು ಉನ್ನತ ಪದವಿಯಲ್ಲಿಟ್ಟ ತನ್ನ