ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 25 -

ಕೃಷ್ಣ! ಕೃಷ್ಣ!” ಎಂದು ಉಚ್ಚರಿಸುತ್ತ, ಕಠಾರಿಯ ಹತಿಯಿಂದ ಆಹತಳಾಗಿ ಕೃಷ್ಣರಾಜನ ದೇಹದ ಮೇಲೆ ಬಿದ್ದು ಪ್ರಾಣವನ್ನು ತೊರೆದಳು.

*****

ಇಲ್ಲಿ ಇನ್ನೂ ಹೇಳುವುದೇನೂ ಉಳಿಯಲಿಲ್ಲ. ಅಲ್ಲಾವುದ್ದೀನನು ಮಾಲಿಕ್ ಕಾಫರನ ಮುಖಾಂತರವಾಗಿ ಮಾಡಿದ ಭೇದೋಪಾಯವು ಫಲಿಸಿತು. ದೇವಗಿರಿಯ ದುರ್ಗವು ಅಲ್ಲಾವುದ್ದೀನನ ವಶವಾಯಿತು. ಮಿಕ್ಕ ಅಂಶವೆಲ್ಲಾ ಹಿಂದೂಸ್ಥಾನದ ಇತಿಹಾಸದಲ್ಲಿ ವಿಸ್ತರಿತವಾಗಿದೆ.


ಶೈಲಿನಿ.

ಚಂದ್ರನು ಗಗನಾಂಗಣದಲ್ಲಿ ಮೆಲ್ಲಮೆಲ್ಲನೆ ಸಂಚರಿಸುತ್ತಿದ್ದನು; ಒಮ್ಮೆ ಸಾಂದ್ರವಾಗಿದ್ದ ಮೋಡಗಳ ಮರೆಯಲ್ಲಿ ಹುದುಗಿ, ಒಮ್ಮೆ ಮುಗಿಲ್ದೆರೆಯನ್ನು ತೆರೆದು, ತನ್ನ ಮುಖವನ್ನು ತೋರಿಸುತ್ತ ಸಂಚರಿಸುತ್ತಿದ್ದನು. ಸ್ನಿಗ್ಧವಾದ ಚಂದ್ರಿಕೆಯು ಡಿಲ್ಲಿಯ ಪುರಾತನ ಕೋಟೆಯ ಹಾಳುಕೊಂಪೆಯ ಮೇಲೆ ಬಿದ್ದು ನಗುತ್ತಲಿತ್ತು; ನವೀನ ದುರ್ಗದ ಪ್ರಾಕಾರಗಳು ಶ್ವೇತಶಿಲೆಯಿಂದ ನಿರ್ಮಿತವಾದಂತೆ ಕಂಗೊಳಿಸುತ್ತಲಿದ್ದುವು. ನಗರೋಪ ಕಂಠದಲ್ಲಿದ್ದ ರಾಜಪುತ್ರರ ಮಂದಿರಗಳೂ ಮನಸಬ್ದಾರರ ಮಹಲುಗಳೂ ಇನ್ನು ಶುಭ್ರವಾಗಿ ರಂಜಿಸುತ್ತಲಿದ್ದುವು. ಸಮೀಪದಲ್ಲಿ ಯಮುನಾನದಿಯು ಮಂಜುಘೋಷಿಣಿಯಾಗಿ ಪ್ರವಹಿಸುತಲಿತ್ತು. ತರಂಗಹಿಲ್ಲೋಲದಿಂದ ನದಿಯಲ್ಲಿ ಚಂದ್ರನು ಸಹಸ್ರಬಿಂಬವಾಗಿ ಬೆಳಗುತ್ತಿದ್ದನು. ಒಂದೆರಡು ದೋಣಿಗಳು ನದಿಯ ಮೇಲೆ ಕ್ರೀಡಿಸುತ್ತಲಿದ್ದುವು. ನದಿಯ ದಡದಲ್ಲಿ ಮನುಷ್ಯ ಸಂಚಾರವಿರಲಿಲ್ಲ. ತರುಣನೊಬ್ಬನು ನದಿಯ ತೀರವನ್ನು ಬಿಟ್ಟು ರಾಜಮಾರ್ಗವಾಗಿ ಹೋಗುತ್ತಿದ್ದನು. ತರುಣನು ಒಮ್ಮೆ ಮೆಲ್ಲಮೆಲ್ಲನೆ

ಕಾಲಿಡುತ್ತ, ಒಮ್ಮೆ ಬೇಗಬೇಗನೆ ನಡೆಯುತ್ತಿದ್ದನು. ಮಂದವಾದ ಯಮುನಾಜಲದಲ್ಲಿ ಪ್ರತಿಬಿಂಬಿತವಾದ ಚಂದ್ರನ ಸೌಂದರ್ಯವನ್ನು ವಿನಂದಿಸುವುದಕ್ಕೆ ನಿಲ್ಲದೆ, ಯುವಕನು ರಾಜಮಾರ್ಗವಾಗಿ ಹೋಗುತ್ತಿದ್ದನು. ಅಲ್ಲಲ್ಲಿ ಮನೆಗಳ ಮಹಡಿಗಳನ್ನು ನೋಡುತ್ತ ಮುಂದರಿಸುತ್ತಿದ್ದನು. ತರುಣನು ಯಾರೆಂದು ಸ್ಪಷ್ಟವಾಗಿ ತೋರುತ್ತಿರಲಿಲ್ಲ. ಆಕಾರದಲ್ಲಿ

3