ನಾನು ಖಂಡಿತವಾಗಿ ಹೇಳಲಾರೆನು, ಆದರೆ ದಿನೇ ದಿನೇ ನನ್ನ ದ್ರೋಹವು ನನ್ನನ್ನೇ ಚುಚ್ಚತೊಡಗಿತು, ಅಂದಿನಿಂದ ನಿನ್ನನ್ನು ಏಕೆ ಪ್ರೀತಿಸಿದೆ ಎಂದು ವಿಷಾದಗೊಂಡನು. ನೀನು ಆ ರಾತ್ರಿ ಗುಪ್ತವೇಷದಿಂದ ಶಿಬಿರಕ್ಕೆ ಬಂದಾಗ ನಿನ್ನ ಮೇಲೆ ಉದಾಸೀನಗೊಳ್ಳಲಿಕ್ಕೆ ಅದೇ ಕಾರಣ.
ಶೈಲಿನಿ! ನಾನು ಇನ್ನೂ ಹೇಳುವುದಕ್ಕಿಂತ ನನ್ನ ಶ್ವಾಸವು ನಿಂತು ಹೋದರೆ ಚೆನ್ನಾಗಿತ್ತಲ್ಲವೆ? ನಾನು ಇನ್ನೂ ಬರೆಯುವುದಕ್ಕಿಂತ ನನಗೆ ಕೈಗೆಟ್ಟರೆ ಒಳ್ಳೆಯ ದಾಗಿತ್ತಲ್ಲವೇ? ನಾನು ನಿನ್ನ ಪಾಣಿಗ್ರಹಣ ಮಾಡಿದ್ದು ಹೊರತು ನಿನ್ನ ಕುದ್ಧ ದೇಹವನ್ನು ನನ್ನ ಆಶುದ್ಧತಿಯಿಂದ ಹಾಳು ಮಾಡಲಿಲ್ಲ. ನಾನು ಸ್ವಾಮಿದ್ರೋಹಿ ಎನ್ನಿಸಿಕೊಳ್ಳುವು ದಕ್ಕಿಂತಲೂ ಕಪಟಪ್ರೇಮಿಯೆಂದಾದರೂ ಜನಗಳಿಂದ ಹೇಳಿಸಿಕೊಳ್ಳುವೆನು, ನೀನು ನನ್ನನ್ನು ಕ್ಷಮಿಸು ನನ್ನನ್ನು ಶುದ್ಧವಾಗಿ ಮಾಡಿಬಿಡು! ನೀನು ಯಾರನ್ನು ನೋಡಿ - ಶಿವಾಜಿಯಂದು ಬ್ಯಾಂಕಿಗೆಂಡೆಯೋ ಆ ಹಿರೋಜಿ ಘರ್ಜಂದ ಎಂಬ ಈ ಪಾಪಿ ಮರಾಟನನ್ನು ಇನ್ನು ಸಂಪೂರ್ಣವಾಗಿ ಮರೆತುಬಿಡು. ಬಿಡುವುದೆ ನನಗೆ ಕ್ಷಮಾಪಣೆಯೆಂದು ಭಾವಿಸುವೆನು,
ಅವರಂಗಜೇಬ್ ಬಾದಶಹನು ಈ ಕಾಗದವನ್ನು ಕೇಳುತ್ತಲೇ ಕೋಪಗೊಂಡನು; ದುಃಖಗೊಂಡನು. ಶಿವಾಜೆ ತಪ್ಪಿಸಿಕೋcಡನು ಎಂದು ಕೊಪ; ರಾಜಸಿಂಹನು ಮಗಳೊಡನೆ ಸತ್ತನೆಂದು ದುಃಖ, ಬೆನ್ನ ಹಿಂದೆ ಜನಗಳನ್ನು ಕಳುಹಿಸಿದನು. ಶಿವಾಜಿಯ ಹೆಜ್ಜೆ ಹಿಡಿಯಲಿಕ್ಕೆ ಆಗದೆ ಹೋಯಿತು. ಬಾದಶಹನು ಮೂರು ಶವಗಳಿಗೂ ಹಿಂದೂ ದಹನ ಸಂಸ್ಕಾರಗಳನ್ನು ಮಾಡಿಸಿದನು, ಆದರೆ, ೧೫ ದಿನಗಳ ವರೆಗೆ ಅವನು “ಆವತ್ ಖಾಸ್ ಜಾನೆ”ಯಲ್ಲಿ ಕಾಲಿಡಲಿಲ್ಲವಂತೆ.