ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

iv

ಇವರು ೧೯೦೨ರಲ್ಲಿ ಬಿ. ಎ. ಪಾಸು ಸಂಪೂರ್ಣವಾಗಿ ಮಾಡಿ ಸೈದಾಪೇಟೆಯ ಟ್ರೈನಿಂಗ ಕೊಲೇಜಿನಲ್ಲಿ ಆರೇ ತಿಂಗಳು ವ್ಯಾಸಂಗ ಮಾಡಿ ಎಲ್. ಟಿ. ಪರೀಕ್ಷೆ ಯನ್ನು ೧೯೦೫ರಲ್ಲಿ ಮುಗಿಸಿದರು. ಗವರ್ನಮೆಂಟ ಕೊಲೇಜಿನಲ್ಲಿ ಕೆಲವು ತಿಂಗಳು ಅಧ್ಯಾಪಕರಿದ್ದಾಗಿಲೇ ಇವರಿಗೆ ಹೊಸತಾಗಿ ಏರ್ಪಟ್ಟ, ಮಂಗಳೂರು ರೇಂಜಿನ ಡೆಪ್ಯುಟಿ ಇನ್ಸ್ಪೆಕ್ಟರರಾಗಿ (ಆಗ ಸಬ್ ಅಸಿಸ್ಟಾಂಟ ಇನ್ಸ್ ಪೆಕ್ಟರರು) ನೇಮಕ ವಾಯಿತು. ಅವರ ಭಾಷಾನುಭವ, ಕ್ಷಣಜ್ಞಾನಗಳನ್ನು ಪರಿಶೀಲಿಸಿ ಮನಗಂಡ ಮಿ. ಪಿ. ಪಿ. ಬ್ರೆತ್‌ವೈಟ್ (ಶಾಲಾ ಇನ್ಸ್ ಪೆಕ್ಟರ)ರ ಸಹಾಯದಿಂದ ಇವರಿಗೆ, ಇ. ಮಾರ್ಸಡೆನರ ಪರಿಚಯವಾಯಿತು. ಇವರು ಬಾಸೆಲ್ ಮಿಶನಿಗೋಸ್ಕರ ಒಂದೆರಡು ರೀಡರುಗಳನ್ನು ತಯಾರಿಸಿದ್ದನ್ನು ಕಂಡು ನಾಡೆನರು ಇವರನ್ನು ತಮ್ಮ ಕೈ ಕೆಳಗೆ ಮೆಕಮಿಲ್ಲನ್ ಕಂಪೆನಿಯ ರೀಡರುಗಳನ್ನು ಬರೆಯುವುದಕ್ಕೆ ಪ್ರೋತ್ಸಾಹಿಸಿ ಆಗ ಇವರಿಗೆ ಹಳೆ ರೀಡರು, ಹಳೆ ಕಾವ್ಯ ಪುಂಜ ಇತ್ಯಾದಿಗಳಲ್ಲಿ ಇರುವ ಪದ್ಯಗಳು ಎಷ್ಟರ ಮಟ್ಟಿಗೆ ಚಿಕ್ಕ ಮಕ್ಕಳಿಗೆ ಉಕ್ಕಿನ ಕಡಲೆಗಳು ಆಗಿವೆ ಎಂಬ ಭಾವನೆಯು ಮೂಡಿತ್ತು. ಮೈಸೂರಿನ ಪದ್ಯಸಾರವೂ ಅವರಿಗೆ ರುಚಿಸಲಿಲ್ಲ; ಆಗ ಇವರೇ ಚಿಕ್ಕ ಕಾವ್ಯಗಳನ್ನು ಬರೆದು ಹಾಡುತಿದ್ದರು. ಅದಕ್ಕಿಂತ ಮೊದಲೇ 'ಸುವಾಸಿನಿ'ಯ ಪ್ರಮುಖ ಲೇಖಕರಾಗಿದ್ದ ಇವರ ಚಿಕ್ಕ ಹಾಡುಗಳೂ ಹಾಸ್ಯಮಯವಾದ ಚಿಕ್ಕ ಕಥೆ ಗಳೂ ( ನನ್ನ ಚಿಕ್ಕ ತಾಯಿ, ಚಿಕ್ಕಪ್ಪ, ಭಾರತ ಶ್ರವಣ ಇತ್ಯಾದಿ ಭಾರತ ಸ್ತ್ರೀರತ್ನಗಳನ್ನು ಕುರಿತು ಚಿಕ್ಕ ಕಾದಂಬರಿಗಳೂ ಹೊರಬಿದ್ದಿದ್ದುವು, (ದುರ್ಗಾವತಿ, ಶೈಲಿನಿ ಇತ್ಯಾದಿ). 'ಸುವಾಸಿಸಿ' ಬಿದ್ದು ಹೋದ ಅನಂತರ ಇವರ ಅನುಕರಣದಿಂದಲೇ ದಕ್ಷಿಣ ಮಹಾರಾಷ್ಟ್ರದಲ್ಲಿ ಚಿಕ್ಕದೊಂದು ಮಾಸಿಕ ವಹಿಯು ಹೊರಟಿತು. ಆದರೆ ಸಾಕಷ್ಟು ಪ್ರೋತ್ಸಾಹ ಸಿಗದೆ ಅದೂ ಬಿದ್ದು ಹೋಯಿತು. (ಶ್ರೀನಿವಾಸ'ರು ಇನ್ನೂ ವಿದ್ಯಾರ್ಥಿಗಳಾಗಿರುವಾಗಲೇ ಈ ಚಿಕ್ಕ ಕಥೆಗಳು ಹೊರಬಿದ್ದುದರಿಂದ ಶ್ರೀ ಮಂಗೇಶರಾಯರೇ ಇಂಥ ಸಾಹಿತ್ಯದ ಪಿತಾಮಹರೆಂದು ಹೇಳಬಹುದಾಗಿದೆ. ಆನಂತರ ಅವರು ಬರೆದ ಚಿಕ್ಕ ಕಾವ್ಯಗಳು 'ಕವಿಶಿಷ್ಯ' ಎಂಬ ಹೆಸರಿನಿಂದ ಬಾಸೆಲ ಮಿಷಿನರಿನವರ ಒಂದನೆ, ಎರಡನೆ, ಮೂರನೆ ಪದ್ಯ ಪುಸ್ತಕಗಳಲ್ಲಿ ಪ್ರಕಟವಾಗಿವೆ. ತಮ್ಮ ಕಾವ್ಯವನ್ನು ತಾವೇ ಶಾಲೆಗಳಲ್ಲಿ ಪ್ರಚಾರಮಾಡುವುದು ಶ್ರೀ ಮಂಗೇಶರಾಯರಿಗೆ ಅನುಚಿತವಾಗಿ ಕಂಡಿತು. ಹೀಗಾಗಿ ವ್ಯಾಪಾರದೃಷ್ಟಿಯಿಂದ ನೋಡಿದರೆ, ಅದರ ಅನಂತರ ಹೊರಟ ನೂರಾರು ಪದ್ಯಪುಸ್ತಕಗಳು ಪಠ್ಯಪುಸ್ತಕವಾಗಿ ಸಾವಿರಗಟ್ಟಳೆ ಯಿಂದ ಮಾರಾಟವಾಗಿದ್ದರೂ ಈ ಮೂರು ಪುಸ್ತಕಗಳ ಸ್ಥಾನದಲ್ಲಿ ಇದುವರೆಗೆ ನಿಲ್ಲಲಿಲ್ಲವಂಬುದು ಖಂಡಿತ. ಆ ಪದ್ಯಗಳ ಹುರುಳೇನೆಂದು ತಿಳಿಯದೆ “ಹಾವೊಳು ಹೂವೆ ಹೂವೊಳು ಹಾವೇ? ಏನು ಪದ್ಯಗಳಿವು” ಎಂದು ಹೊಟ್ಟೆ ಉರಿಯಿಂದ ಮೊಗೆ ಸುರುಳಿಮಾಡಿ ನಕ್ಕವರುಂಟು. ಅಂಥವರಿಗೆ ಮಕ್ಕಳ ಹೃದಯದ ಪರಿಚಯವೇ ಇಲ್ಲವೆಂಬುದೊಂದು ವಿಷಾದ.