ಪುಟ:ಓಷದಿ ಶಾಸ್ತ್ರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

116 ಓಷಧಿ ಶಾಸ್ತ್ರ ) [VIII ನೆಯ ಜೇನು ಮುಂತಾದ ನೀ ಪದಾರ್ಥಗಳ ಈ ಹೂಗಳಿರುವುವು. ಹೂಗಳು ಒಳ್ಳೆ ಅಂದವನ್ನು ಹೊಂದಿರುವುದೂ, ಸುವಾಸನೆಯುಳ್ಳುದಾಗಿರುವುದೂ, ಇವೆಲ್ಲವೂ ಕೀಟಗಳನ್ನು ತನ್ನ ಕಡೆಗೆ ಆಕರ್ಷಿಸುವುದಕ್ಕಾಗಿ ಏರ್ಪಡಿಸಿ ಲ್ಪಟ್ಟ ಉಪಾಯಗಳೇ ಹೊರತು ಬೇರೆ ಅಲ್ಲ. ಈ ಕೀಟಗಳು ಹೂಗಳನ್ನು ಆಕ್ರಮಿಸಿದ ಕಡಲಿ, ಅಲ್ಲಿ ಜೇನಿರುವ ಸ್ಥಳವನ್ನು ಹುಡುಕುವುದಕ್ಕೆ ಆರಂ ಭಿಸುವುವು. ಹೀಗೆ ಸುತ್ತುತ್ತಿರುವಾಗಾಗಲಿ, ಜೇನನ್ನು ಕುಡಿಯುತ್ತಿರುವಾಗಾ ಗಲಿ, ಈ ಕೀಟಗಳ ಮೈಮೇಲೆ, ಮಕರಂದದ ಚೀಲವು ತಗುಲುವುದರಿಂದ ಅವು ಗಳೊಳಗಣ ರೇಣುವು ಅಂಟಿಕೊಳ್ಳುವುವು. ಹೂಗಳ ಕೇಸರಗಳ, ಕೀಲಾಗ)ಗಳ, ಹುಳಗಳು ಜೇನನ್ನು ಹುಡುಕುತ್ತಿರುವಾಗಲಾಗಲಿ, ಕುಡಿ ಯುತ್ತಿರುವಾಗಾಗಲಿ, ಅವುಗಳ ಮೈ ಮೇಲೆ ತಗುಲುವಂತೆಯೇ ಸೇರಿಕೊಂ ಡಿರುವುವು. ಇವುಗಳು ಮೈಗೆ ತಗುಲದಂತೆಯೇ ಹೋಗಿ ಜೇನನ್ನು ಕುಡಿದು ಬರುವುದು ಕೀಟಗಳಿಗೆ ಅಸಾಧ್ಯವಾಗಿರುವುದು. ಇದೂ ಅಲ್ಲದೆ, ಈ ಒಂ ದೊಂದು ಹೂವಿನೆಡೆಗೂ, ಯಾವುದೋ ಒಂದು ವಿಧವಾದ ಹುಳ ವೇಬರುವುದು. ಜೇನನ್ನು ಕುಡಿಯುವುದಕ್ಕಾಗಿ ಬೇರೆಹುಳಗಳು ಬಂದು ಕುಳಿತರೂ, ಅವು ಜೇನನ್ನು ಕುಡಿಯುವುದು ಅಸಾಧ್ಯವಾಗುವುದು, ಕೀಟಗಳು ಹೂವಿನಲ್ಲಿ ಜೇನನ್ನು ಕುಡಿಯುವಾಗ, ವಕರಂದರೇಣುವು ಅವುಗಳ ಮೆಯ್ಯ ತಗುಲಿ ಕೊಳ್ಳುವುವು. ಈ ಹುಳಗಳು ಒಂದು ಹೂವನ್ನು ಬಿಟ್ಟು ಮತ್ತೊಂದಕ್ಕೆ ಹೋಗಿ ಅಲ್ಲಿಯ ಜೇನನ್ನು ಹುಡುಕುತ್ತಾ ತಿರುಗುವುವು. ಹೀಗೆ ಸುತ್ತು ವಾಗ ಇವುಗಳ ದೇಹವು ಕೀಲಾಗುವನ್ನು ಮುಟ್ಟುವುದರಿಂದ, ಮೈ ಮೇಲಿನ ಮಕರಂದರೇಣುವು ಕೀಲಾಗ ದೊಡನೆ ಸೇರುವುದು. ಕೆಲವು ಮಿಥುನ ವೃಕ್ಷಗಳಲ್ಲಿ ಈ ಎರಡು ಬಗೆಯ ಅಂಗಗಳ ಒಂದೇ ಹೂವಿನಲ್ಲಿರುತ್ತಿದ್ದ ರ, ಅದೇ ಹೂವಿನ ಮಕರಂದರೇಣುವು ಅದೇ ಹೂವಿ