ಪುಟ:ಓಷದಿ ಶಾಸ್ತ್ರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

113 ಓಷಧಿ ಶಾಸ್ತ್ರ [IX ನೆಯ ಪರಕೀಯ ಗರ್ಭವು ನಡೆಯುವುದೆಂಬುದನ್ನೂ ಇದು ಹೀಗೆ ಸಾಧ್ಯ ವೆಂಬುದನ್ನೂ ಸ್ಪಷ್ಟವಾಗಿ ತೋರಿಸಬಹುದು, ಒಂದು ಗಿಡದಲ್ಲಿ ಅರ ಳುವ ಎರಡು ಹೂಗಳನ್ನು ಗುರುತಿಟ್ಟು ಕೊಂಡು, ಅವುಗಳಿಂದ ಕೇಸರಗ ಳನ್ನು ಕಿತ್ತು ಬಿಟ್ಟು, ಒಂದನ್ನು ಒಂದು ಜಾಡರಹುಳದ ಬಲೆಯಗೂಡಿನಲ್ಲಿ ಮರೆಸಿಟ್ಟು, ಕೆಲವು ದಿವಸಗಳ ಮೇಲೆ ಇದನ್ನು ನೋಡಿದರೆ, ಹೀಚು ಬಲಿಯದೆ ಕೆಟ್ಟು ಬಿದ್ದಿರುವುದು, ಇದರ ಸಂಗಡಲೇ ಮತ್ತೊಂದರ ಕೀಲಾಗದಮೇಲೆ ಬೇರೆಪುಪ್ಪದ ಮಕರಂದ ಧೂಳನ್ನು ಸ್ವಲ್ಪವಾಗಿ ಸವರಿ,ಜೇಡರಹುಳದ ಬಲೆಯ ಏು, ಕೆಲವು ದಿವಸದಮೇಲೆ ಎತ್ತಿ ನೋಡಿದರೆ, ಹೀಚು ಕಾಯಾಗಿ ಬೆಳೆದಿರು ವುದು. ಹೀಗೆ ಸ್ವಲ್ಪ ಮಟ್ಟಿಗೆ ಶೋಧಿಸುವುದರಿಂದಲೇ ಗರ್ಭವುಂಟಾಗುವು ದಕ್ಕೆ ಮಕರಂದ ಧೂಳಿನ ಸ್ಪರ್ಶವೇ ಮುಖ್ಯಾವಶ್ಯವೆಂದೂ, ಬೇರೆ ಹೂವಿನ ಮಕರಂದ ರೇಣುವೂ ಗರ್ಭೋತ್ಪತ್ತಿಯನ್ನು ಮಾಡುವುದೆಂದೂ, ನಾವು ಊಹಿಸಬಹುದಲ್ಲವೆ ? ಏಕಲಿಂಗ ಸಸ್ಯಗಳಲ್ಲಿಯೂ, ದ್ವಿಲಿಂಗ ಸಸ್ಯಗಳಲ್ಲಿಯ, ಪರಕೀಯ ಗರ್ಭವೇ ನಡೆಯಬೇಕೆಂದು ಹೇಳಬೇಕಾದ ಅವಶ್ಯವೇ ಇಲ್ಲ. ೯ ನೆಯ ಅಧ್ಯಾಯ. ಕಾಯಿಯ ಬೀಜವೂ. ಗರ್ಭಾಧಾನವಾದಮೇಲೆ, ಅಂಡಾಶಯವು ಕಾಯಾಗುವುದೇ ಹೂಗಳಲ್ಲಿ ಉಂಟಾಗುವ ಬದಲಾವಣೆಗಳಲ್ಲಿ ಮೊದಲನೆಯದು. ಇದುವರೆಗೆ ನಾವು ಉದಾ