ಪುಟ:ಓಷದಿ ಶಾಸ್ತ್ರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಾಗಿ ಒಂದೇ ವಿಧವಾಗಿರುವುವು. ಈ ಓಷಧಿಶಾಸ್ತ್ರ ವು ಆ ರೀತಿಯದು ದಲ್ಲ. ಒಂದು ದೇಶದಲ್ಲಿ ವಿಶೇಷವಾಗಿ ಬೆಳೆಯುವ ಗಿಡಗಳು ಮತ್ತೊಂದು ದೇಶದಲ್ಲಿ ಬೆಳೆಯವು. ಆದುದರಿಂದ ಇಂಗ್ಲೀಷ ಭಾಷೆಯಲ್ಲಿ ಓಷಧಿಶಾಸ್ತ್ರ ) ಸಂಬಂಧವಾದ ಪುಸ್ತಕಗಳು ಅಪರಿಮಿತವಾಗಿದ್ದರೂ, ಅವೆಲ್ಲವೂ ಆದೇಶದ ಗಿಡಗಳ ಸ್ವರೂಪವನ್ನೇ ವಿಶೇಷ್ಮವಾಗಿ ವಿಮರ್ಶಿಸುತ್ತಿರುವುವು. ನಮಗೆ ವಿಶೇಷವಾಗಿ ಬಳಕೆಯಲ್ಲಿರುವ ಗಿಡಗಳನ್ನು ಪರೀಕ್ಷಿಸಿ ತಿಳಿ ಯುವುದರಿಂದ ಶಾಸ್ತ್ರ ಜ್ಞಾನವನ್ನು ಪಡೆಯುವುದು ಸುಲಭವಾದುದರಿಂದ, ಇ೦ಗ್ಲೀಮು ಭಾಷೆಯಲ್ಲಿರುವ ಪುಸ್ತಕಗಳು ಇದ್ದ ಹಾಗೆಯೇ ಪರಿವರ್ತಿ ಸಲ್ಪಡದೆ, ನಮ್ಮ ದೇಶದಲ್ಲಿ ಪ್ರಚಾರದಲ್ಲಿರುವ ಗಿಡಗಳೇ ಇದರಲ್ಲಿ ಸಚಿತು ವಾಗಿ ನಿರೂಪಿಸಲ್ಪಟ್ಟಿವೆ, ಈ ಪುಸ್ತಕವು ಮೊದಲು ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟು ವಿಶೇ ಪ್ರವಾಗಿ ದನಗಳಿಗೆ ಆದರ ರ್ಹವಾದುದನ್ನು ನೋಡಿ, ಇತರ ದೇಶಭಾಪ್ರೆರ. ಇಲ್ಲಿಯ ಇಂತಹ ಪುಸ್ತಕವು ಇರಬೇಕೆಂಬ ಅಭಿಪ್ರಾಯ ಹುಟ್ಟಿದುದರ ಮೇಲೆ, ಇದು ಕನ್ನಡದಲ್ಲಿ ಬರೆಯಲ್ಪಟ್ಟಿತು. ನಮ್ಮ ಕನ್ನಡ ಭಾಷೆಯಲ್ಲಿ ಈ ಶಾಸ್ತ್ರ ವು ತಲೆದೋರುವುದಕ್ಕೆ ಇದೇ ಆರಂಭವಲ್ಲದಿದ್ದರೂ, ಇದರಲ್ಲಿ ನಿರೂಪಿಸಲ್ಪಟ್ಟಿರುವ ವಿವರಣ ಕಮಗಳ, ವಿಶೇಷ ವಿಷಯಗಳ ಸಹ, ಈಗಿನ ಹೊಸ ನಿಯಮಗಳ ಪ) ಕಾರ ಏರ್ಪಡಿಸಲ್ಪಟ್ಟಿರುವ ಸಿ ಫೈನಲ್ ಮತ್ತು ಯನಿವರೀತಿ ಪರೀ ಕೈಗಳಿಗಾಗಿ ಓದತಕ್ಕವರಿಗೆ ವಿಶೇಷ ಸಹಾಯಕವಾಗದಿರಲಾರದೆಂದು ನಂಬು ತೇನೆ. ಎನ್. ಡಿ ಅಳಸಿಂಗರಾಚಾರ.