ಪುಟ:ಓಷದಿ ಶಾಸ್ತ್ರ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಕಾಯಿಯ, ಬೀಜವೂ, 135 ಬೇಕಾಗಿದೆ. ಇಂತಹ ಕಾಯಿಗಳನ್ನು (ಪುಪ್ಪಸನಹ ಪರಿಣಾಮಫಲ?? ಗಳೆಂದು ಹೇಳಬಹುದು. ಅತ್ರಿ, ಆಲ ಈ ಮರಗಳ ಹಣ್ಣುಗಳ ಪುಪ್ಪಸನಹಗಳೇ, ಆದ ರೆ, ಇವುಗಳಲ್ಲಿ ಹೂಗಳು ಚಿಕ್ಕವಾಗಿಯ, ಬಹಳ ಬದಲಾವಣೆಯನ್ನು ಹೊಂದಿದುವುಗಳಾಗಿಯೂ ಇರುವುವು. ಪುಷ್ಪಗಳನ್ನು ಧರಿಸಿದ ವೃಂತವೂ ಇವುಗಳಲ್ಲಿ ವ್ಯತ್ಯಾಸಹೊಂದಿರುವುವು. ವೃಂತವು ಒಂದು ಬಟ್ಟಲಿನಹಾಗೆ ಬೆಳೆದು ಹೂಗಳನ್ನು ಒಳಗೆ ಅಡಗಿಸಿಕೊಂಡು ಇರುವುದು. ವಿಶೇಷವಾಗಿ ಹಳೆಗಾಥೆಗಳಲ್ಲಿ ಹೇಳಲ್ಪಟ್ಟಿರುವುದೆಲ್ಲ ನಿಜವಾದರೂ “ ಅತಿ ಹೂವನ್ನು ನೋಡಿದವರುಂಟೆ ?” “ನೀವು ಬಂದುದು ಅತಿಯಾಹೂ ಬಿಟ್ಟ ಹಾಗಾಯಿತು.” ಹೀಗೆ ಹೇಳಿರುವ ಗಾಧೆಗಳು ಮಾತ್ರ ಸುಳ್ಳೆಂದೇ ನೆನೆಸಬೇಕಾಗಿದೆ. ಹೂವು ಬಹು ಬೇಗ ಹೂತು ಕಾಯಾಗಿ ಬಿಡುವುದೆಂದು ಕೆಲವರ ಅಭಿಪಾಯವುಂಟು. ಇದೂ ತಪ್ಪೇ ! ಆಲದಮರದಲ್ಲಿ ಎಳೆ ಕಾಯಿಗಳನ್ನೂ ಬಲಿತ ಹಣ್ಣುಗಳನ್ನ ಕುಯು, ಒಳಗಿರುವ ಭಾಗಗಳನ್ನು ಚೆನ್ನಾಗಿ ನೋಡಿದರೆ, ಬೀಜದಂತಿರುವವುಗಳೆಲ್ಲಾ ಹೂಗಳೆ ಎಂಬುದು ಚೆನ್ನಾಗಿ ಸ್ಪಷ್ಮೆ ಪಡುವುದ.. 116 ನೆಯ ಪಟದಲ್ಲಿ ರುವ ಆಲದ ಕಾಯನೂ, ಹೋಳುಮಾಡಿದ ಅದರ ನೆತ್ತಿಯಭಾಗವನ್ನೂ ನೋ ಡುವುದರಿಂದ, ನಾವು ಅದರ ಅವಯವ ಸಂನಿವೇಶವನ್ನು ಚೆನ್ನಾಗಿ ತಿಳಿದುಕೊ ಳ್ಳಬಹುದು, ಹಣ್ಣಿನ ಮೇಲ್ಬಾಗದಲ್ಲಿ ಕಾಣುವ ದ್ವಾರವನ್ನು ಬಳಸಿರು ವುದೇ ವೃಂತದ ಬಟ್ಟಲಿನ ಮೇಲುಭಾಗದ ಏಣು, ಅಲ್ಲಿ ಕಾಣುವ ಸಣ್ಣ ಪುಚ್ಛ ಗಳೆ ವೃಂತಪುಚ್ಛಗಳು. ಇವುಗಳ ಪಕ್ಕದಲ್ಲಿ ಒಳಗೆ ಕಾಣುವನೇ ಗಂಡು ಹೂಗಳು, ಕಾಯಿಯ ನಡುವೆಯೂ ಅಡಿಭಾಗದಲ್ಲಿ ಹೆಣ್ಣು ಹೂಗ