ಪುಟ:ಓಷದಿ ಶಾಸ್ತ್ರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

154 ಓಷಧಿ ಶಾಸ್ತ್ರ ! [X ನೆಯ ಬೀಜವನ್ನು ಯಾವವಿಧವಾಗಿಟ್ಟ ರ, ಮೂಳೆಯ ಕೆಳಭಾಗವು ಭೂಮಿ ಕಡೆಗೆ ಅಧೋಮುಖವಾಗಿಯೇ ಬೆಳೆಯುತ್ತಾ ಹೋಗುವುವು, ಚಿತ ದಲ್ಲಿರುವ ಗಾಜಿನಕೊಳವೆಯಲ್ಲಿ ಕೆಳಗೆ ಕಾಣಿಸಿರುವ ಬೀಜವೂ, 132 ನೆಯ ಪಟದಲ್ಲಿ ಕಾಣಿಸಿರ ತಕ್ಕವುಗಳಲ್ಲಿ 1, 2 ನೆಯ ಚಿತದ ಬೀಜಗಳ, ಉದ್ದು ದವಾಗಿ ಇಡಲ್ಪಟ್ಟಿದ್ದರೂ, ಮೊಳೆಯ ಕೆಳಗಿನ ಕೆನೆಯು ಭೂಮಿಯ ಕಡೆ ಯನ್ನೇ ಹುಡುಕಿಕೊಂಡು ಕೆಳಮುಖವಾಗಿಯೇ ಬೆಳೆಯುವುದನ್ನು ನೋಡಿರಿ. ಕೊಳವೆಯ ಮೇಲುಭಾಗದಲ್ಲಿ ಕಾಣಿಸಿರುವ ಬೀಜವೂ, 132 ನೆಯ ಪಟದಲ್ಲಿ 3 ನೆಯ ಚಿತ್ರದ ಬೀಜವೂ, ಅಡ್ಡಡ್ಡಲಾಗಿ ಇಡಲ್ಪಟ್ಟಿದ್ದರೂ, ಮೊಳೆಗಳು ಅಧೋಮುಖವಾಗಿಯೇ ಬೆಳೆದು ಬರುವುದೆಂದು ಸ್ಪಷ್ಟವಾಗಿ ತಿಳಿಯುವುದು. ನಾಲ್ಕನೆಯ ಚಿತ್ರದಲ್ಲಿ ಕಾಣಿಸಿದ ಬೀಜದಲ್ಲಿ, ಮೊಳೆಯ ಕೆಳಭಾಗವು ಅಧೋ ಮುಖವಾಗಿ ಹೋಗುವದಕ್ಕಾಗಿಯೇ ಎರಡು ಮೂರುಸಾರಿ ಬಾಗಿರುವುದು, ಬೀಜವು ಎರಡು ಮೂರಾವೃತ್ತಿ ತಿರುಗಿಸಿಡಲ್ಪಟ್ಟು ದರಿಂದ, ಮೊಳೆಯ ಕೆಳತುದಿಯು ಅಧೋಮುಖವಾಗಿ ಹೋಗುವ ಪ್ರಯತ್ನದಿಂದ ಬಾಗುಗ ಳನ್ನು ಹೊಂದಿರುವುವು. ಎಷ್ಟೆಷ್ಟು ಸಲ ಹೇಗೆ ಹೇಗೆ ಬದಲಾಯಿಸಿ ತಿರುಗಿ ಸಿಟ್ಟರೂ, ಮೂಳೆಯ ಕೆಳಭಾಗವು ಭೂಮಿಯನ್ನೇ ಹುಡುಕಿಕೊಂಡು ಹೋಗುತ್ತಿರುವುದು. ಮೊಳೆಯ ಅಡಿಭಾಗದಲ್ಲಿರುವ ಕಚಾದ ತುದಿಯು ಒಡೆದುಹೋದರೆ, ಆ ಮೇಲೆ ಮೊಳೆಯು ಭೂ ಮುಖವಾಗಿ ಹೋಗುವ ಶಕ್ತಿಯನ್ನು ಹೋಗಲಾಡಿಸಿಕೊಳ್ಳುವುದು. ದೊಡ್ಡ ಮರಗಳು, ಗಿಡಗಳು ಇವುಗಳ ಬೇರುಗಳಲ್ಲಿರುವ ಎಳೇ ಬೇರುಗಳ ತುದಿಗಳ, ಭೂಮಿಯನ್ನು ನೋಡುತ್ತಲೇ ಬೆಳೆಯುವುವು, ಬೇರುಗಳಿಗೆ ಈ ಸ್ವಭಾವವು ಅತ್ಯವಶ್ಯ ವಾದ ಗುಣವಾಗಿರುವುದು. ಗಿಡಗಳ ಬೆಳೆವಳಿಕೆಗೆ ಸಹಾಯಕವಾಗಿರುವು ದಕ್ಕಾಗಿ, ಬೇರುಗಳಿಗೆ ಈ ಗುಣವು ಇದ್ದೇ ಇರಬೇಕಾಗಿದೆ. ಅಂಕುರದ ಕೆಳ ಗಿನ ದಂಟು ಉದ್ದವಾಗಿಬೆಳೆದು ದೊಡ್ಡದಾದ ಮೇಲೆ, ಅಂಕುರದಳಗಳ ಒಳ