ಪುಟ:ಓಷದಿ ಶಾಸ್ತ್ರ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ: ಗಿಡಗಳ ಜಾತಿಯನ್ನು ವಿಭಾಗಿಸುವ ಕುಮ, 19) ಸೇರುವೆಗಳನ್ನೂ ನೋಡಬಹುದು, ಪರ ಪುಟ್ಟಗಳು ಏಕಾ೦ಕುರದಳ ಸಸ್ಯ ಗಳಲ್ಲಿ ಉಂಟಾಗುವುದಿಲ್ಲ, ಸಾಯಕವಾಗಿ ಇವುಗಳ ಎಲೆಯ ಕಾವುಗಳು. ಅಡಿಭಾಗದಲ್ಲಿ ಸ್ವಲ್ಪ ಅಗಲವಾಗಿರುವುದು ಸ್ವಾಭಾವಿಕವು. ಈ ಎರಡು ವಿಭಾಗಗಳನ್ನೂ ಹೂ, ಕಾಯಿ ಇವುಗಳ ಸ್ವರೂಪವನ್ನೇ ಆಧಾರ ಮಾಡಿಕೊಂಡು ಇನ್ನೂ ಒಳ ವಿಭಾಗಗಳಾಗಿ ಬೇರ್ಪಡಿಸುವುದುಂಟು. ದಳವೃತ್ತದ ಸ್ವರೂಪವನ್ನೇ ಆಧಾರವಾಗಿ ತೆಗೆದುಕೊಂಡು, ೧೦ ಕುರದಳ ಬೀಜಕಗಳನ್ನು ಮೂರಾಗಿ ವಿಭಾಗಿಸಬಹುದು. ದಳ ವೃತ್ತದ ದಳಗಳು ಹೂವರಳಿಯ ಹೂ, ಹೊನ್ನೆ ಯ ಹೂ, ಇವುಗಳಲ್ಲಿರುವಂತೆ, ಸತ್ಯೇಕ ಪ್ರತ್ಯೇಕವಾಗಿ ಸೇರಿ ನಿಲ್ಲುವುದರಿಂದ, 'ವಿಭಕ್ತ ದಳ, ಗಳೆಂದೂ,” ಬದನೆ, ಕುಂಬಳ ಇವುಗಳಲ್ಲಿರುವಂತೆ ಸೇರಿದ ದಳಗಳುಳ್ಳವುಗಳನ್ನು 'ಸಂಯುಕ್ತ ದಳ,ಗಳೆಂದೂ, ಕೀರೆ,ಉತ್ತರಣೆ ಈ ಹೂಗಳಲ್ಲಿರುವಂತೆ ದಳ ಗಳು ಕಾಣಿಸದೆಯಾಗಲಿ, ಕಡಿಮೆಯಾಗಿ ಯಾಗಲಿ ಇರತಕ್ಕವುಗಳನ್ನು ಅಪೂರ್ಣದಳ'ವುಳ್ಳವುಗಳೆಂದೂ ವಿಭಾಗಿಸುವುದು ನ್ಯಾಯವಾಗಿದೆ. ಪೃಥಗಳಗಳು, ಸಂಯುಕ್ತ ದಳಗಳು, ಅಪೂರ್ಣ ದಳಗಳು ಇವುಗಳನ್ನೂ ಕುಟುಂಬ, ಜಾತಿ, ಕಟ, ಮುಂತಾದ ಭೇದದಿಂದ ವಿಂಗ ಡಿಸಬಹುದು. ಹೀಗೆ ಮಾಡುವುದಕ್ಕೆ ಕಾಯಿ, ಹೂ, ಇವುಗಳ ಸ್ಪರ ಪವೇ ಆಧಾರವಾಗಿದೆ. ದಳಗಳ ಸ್ವರೂಪವನ್ನು ಮಾತು ಗಮನಿಸಿದರೆ, ಹೊನ್ನೆ, ಹೂವರಳಿ, ಬೆಂಡೆ ಇವನ್ನೂ ಸೃಥಗ್ಗಳಗಳುಳ್ಳವುಗಳಲ್ಲಿಯೇ ಸೇರಿಸಲ್ಪಡತಕ್ಕವುಗಳಾಗಿರುವುವು. ಈ ಗಿಡಗಳ ಹೂಗಳೆಲ್ಲವೂ ದಳಗಳ ಸ್ವರೂಪದಲ್ಲಿ ಮಾತ್ರ ಒಂದೇ ವಿಧವಾಗಿರುವುದೇ ಹೊರತು, ಇತರ ಭಾಗಗಳಲ್ಲಿ ಒಂದಕ್ಕೊಂದು ಭೇದಿಸಿರುವುವು. ಹೊನ್ನೆ ಯ ಹೂವಿನಲ್ಲಿ ಕೇಸರಗಳ ಹೊರದಳಗಳ, ಒಂದಕ್ಕೊಂದು ಪ್ರತ್ಯೇಕವಾಗಿರುವುದು. ಬೇರೆ ಎರಡು ಹಾಗಳಲ್ಲಿಯೂ ಈ ಭಾಗಗಳು ಪ್ರತ್ಯೇಕವಾಗಿರದೆ ಸೇರಿಯೇ ಇರುವುವು -