ಪುಟ:ಓಷದಿ ಶಾಸ್ತ್ರ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

172 ಓಷಧಿ ಶಾಸ್ತ್ರ ) [X] ನೆಯ ಬೆಂಡೆ, ಹೂವರಳಿ, ತುರುವೆ ಇವು “ ಮಾಲೈಸಿಯೇ ಅಥವಾ ಬೆಂ ಡೆಯ ಕುಟುಂಬಕ್ಕೆ ಸೇರಿದುವುಗಳು. ಆದರೂ ಈ ಹೂಗಳನ್ನು ಚೆನ್ನಾಗಿ ಗಮನಿಸಿ ನೋಡಿದರೆ, ಇವು ಕೆಲವು ವಿಷಯಗಳಲ್ಲಿ ಭೇದವುಳ್ಳವುಗಳಾ ದುವು ಗಳೆ೦ಬುದೂ ಚೆನ್ನಾಗಿ ಗೊತ್ತಾಗುವುದು, ಬೆಂಡೆಯ ಹೂವಿನಲ್ಲಿ ವ್ಯಂ ತಪುಗಳು ೧೦ ಉಂಟು. ಹೂವರಳಿಯ ಹೂವಿನಲ್ಲಿ ಇವು ನರೇ ಇರು ವುವು, ತುರುವೇ ಹೂವಿನಲ್ಲಿ ಈ ಪುಚ್ಛಗಳು ಉಂಟಾಗುವುದೇ ಇಲ್ಲ. ಪುಷ್ಕಕೋಶ, ಅಂಡಕೋಶ, ಇವೆರಡರಲ್ಲಿಯೂ ಕೂಡ, ವ್ಯತ್ಯಾಸಗಳುಂ ಟು. ಆದುದರಿಂದ ಇವು ಮರನೂ ಬೇರೆಬೇರೆ ಮರುಜಾತಿಗೆ ಸೇರಿದುವು ಗಳಾಗಿ ಭಾವಿಸಬೇಕು. ಗಿಡಗಳನ್ನು ಚೆನ್ನಾಗಿ ಪರಿಶೋಧಿಸಿ, ಪುಪ್ಪಗಳ ಮತ್ತು ಇತರ ಭಾಗ ಗಳ ಸ್ವರೂಪವನ್ನೂ ಆಧಾರವಾಗಿಟ್ಟುಕೊಂಡು, ಇವುಗಳನ್ನು ಕುಟುಂಬ, ಜಾತಿ, ಕೂಟಗಳಾಗಿ ವಿಭಾಗಿಸಿದರೆ, ಓಷಧಿಗಳನ್ನು ಕಪ್ಪವಿಲ್ಲದೆ ಸುಲಭ ವಾಗಿ ತಿಳಿದುಕೊಳ್ಳ ಬಹುದಲ್ಲವೆ ? ನಮ್ಮ ದೇಶದಲ್ಲಿರುವವರು ಹೀಗೆ ಮಾಡಿಲ್ಲದುದರಿಂದ, ವೈದ್ಯಶಾಸ್ತ್ರ) ಮುಂತಾದುವುಗಳಲ್ಲಿ ಪ್ರಸ್ತಾಪಿಸಲ್ಪಟ್ಟ ಗಿಡಗಳು ಇಂತವುಗಳೆ ಎಂದು ನಿಶ್ಚಯವಾಗಿ ತಿಳಿದುಕೊಳ್ಳುವುದು ಅಸಾ. ಧ್ಯವಾಗಿಯೇ ಇದೆ. ಇದರಿಂದ ನಮಗೆ ಉಂಟಾದ ನಮ್ಮವು ಇಂದು ಹೇಳುವುದಕ್ಕಾಗುವುದಿಲ್ಲ. ಆ೦ಗ್ಲೀಯರೂ, ಇತರ ಐರೋಪ್ಯರೂ, ಗಿಡಗ ಳನ್ನು ಕೂಟ, ಜಾತಿ, ಕುಟುಂಬಗಳಾಗಿ ವಿಭಾಗಿಸಿ ಹೆಸರಿಟ್ಟಿರುವರು.. ಕೂಟಕ್ಕೆ, ಸ್ಪೀಸು ” (Species) ಎಂದೂ, ಜಾತಿಗೆ (ಜೀನಸು? (Genus) ಎಂದೂ, ಕುಟುಂಬಕ್ಕೆ “ ಆರ್ಡರ್ ?” (Order) ಎಂದೂ, ಅವರು ಹೇಳುವುದು ವಾಡಿಕೆಯಾಗಿದೆ. ಲಕ್ಷಣಗಳನ್ನು ತಿಳಿದುಕೊಂಡ ಮೇಲೆ, ಒಂದೊಂದು ಗಿಡಕ್ಕೂ ಹೆಸರಿಡುವುದು ಅವರ ನಿಯವು. ಒಂದೊಂದು ಹೆಸರಿಗೂ ಎರಡು ಪದಗಳನ್ನು ಉಪಯೋಗಿಸುವರು. ಮೊದಲನೆಯ ಪದವು