ಪುಟ:ಓಷದಿ ಶಾಸ್ತ್ರ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಜಾತಿಯನ್ನು ವಿಭಾಗಿಸುವ ಕುವ. 173 ಆಜಾತಿ ಅಥವಾ ಜೀನಸ್ಸಿನ ಹೆಸರಾಗಿರುವುದು. ಒಂದುಗಿಡದ ಸ್ವರೂಪ ವನ್ನು ಪರಿಶೋಧಿಸಿ,ಅದರ ಲಕ್ಷಣಗಳನ್ನು ತಿಳಿದುಕೊಂಡ ಕೂಡಲೆ,ಈ ಲಕ್ಷ ಗಳು, ತನಗೆ ಮೊದಲೇ ತಿಳಿದ ಜಾತಿಯ ಲಕ್ಷಣಗಳನ್ನು ಹೋಲುತ್ತಿದ್ದರೆ ಈ ಗಿಡಕ ಆ ತಿಳಿದ ಜಾತಿಯ ಗಿಡದ ಹೆಸರನ್ನೇ ಇಡುವುದು ವಾಡಿಕೆ.ಕಟ ಕ ಹೀಗಯೇ, ಜಾತಿ, ಕೂಟ, ಇವುಗಳಿಗೂ ಲಕ್ಷಣಗಳನ್ನೇ ಆಧಾರವಾಡಿ ಕೊಂಡು ಹೆಸರಿಡುವುದರಿಂದ, ಇವುಗಳ ಹೆಸರನ್ನು ಕೇಳಿದಕೂಡಲೆ ನನಗೆ ಗಿಡಗಳ ಸ್ವರೂಪವೂ ಗುಣವೂ ತಿಳಿಯುವುದಲ್ಲವೆ ? ನಾವು ಉದಾಹರಣವಾಗಿ ತೆಗೆದುಕೊಂಡ ಬೆಂಡೇ ಗಿಡದ ಜಾತಿಗೆ C ಹೈಬಿಸ್ಕಸ್ ” (Hibiscus) ಎಂದು ಹೆಸರು. ಈ ಜಾತಿಯ ಲಕ್ಷಣಗ ಛಾವುವೆಂದರೆ:- ಹೂಗಳಲ್ಲಿ ಕೇಸರಗಳು ನಾಳವಾಗಿಯ, ದಳಗಳು ಬೇರೆ ಬೇರೆಯಾಗಿಯ, ಕೀಲವು ತುದಿಯಲ್ಲಿ ಐದು ಕವಲುಗಳಾಗಿ ಒಡೆದೂ, ವೃಂತ ಪುಟ್ಟಿಗಳು ಇರುವುದೂ ಈ ಜಾತಿಯ ಲಕ್ಷಣಗಳಾಗಿವೆ. ಈ ಲಕ್ಷ ಣಗಳಿದ್ದ ಹೊರತು “ ಹೈಬಿಸ್ಕಸ್ ” ಎಂಬ ಹೆಸರನ್ನು ಇಡಬಾರದು. ಯಾವ ಹೂಗಳಲ್ಲಿಯಾದರೂ ಈ ಲಕ್ಷಣಗಳಿದ್ದರೆ ಅವುಗಳನ್ನು ಹೈಬಿಸ್ಕಸ್ ಎಂದೇ ಕರೆಯಬೇಕು. ದಾಸವಾಳದ ಹೂಗಳಲ್ಲಿಯ, ಈ ಲಕ್ಷಣಗಳಿರು ವುದರಿಂದ ಇವುಗಳನ ಅದೇ ಹೆಸರಿನಿಂದ ಕರೆಯಬೇಕು. ಈ ಮೇಲಿನ ಎರಡು ಗಿಡಗಳ ಹೈಬಿಸ್ಕಸ್ ಜಾತಿಯವುಗಳಾಗಿದ್ದರೂ, ಇವು ಬೇರೆಬೇರೆ ಕೂಟಕ್ಕೆ ಸೇರಿದುವ್ರಗಳಾಗಿರುವುವು, ಬೆಂಡೆಯ ಹೂವಿನ ಪುಷ್ಪಕೋಶವು ದಾಸವಾಳದ ಹೂಗಳಲ್ಲಿರುವಂತೆ ನಾಳ ವಾಗಿದ್ದರೂ ಇದು ಒಂದುಕಡೆಯಲ್ಲಿ ಭಿನ್ನವಾಗಿ ದಳಗಳು ಹೊರಗೆ ಬಂದು ಅರಳುವುವು. ಎಲೆಗಳಲ್ಲಿಯ ಕಾಯಿ ಗಳಲ್ಲಿಯ ಕಡ, ಇವು ಒಂದಕ್ಕೊಂದು ವ್ಯತ್ಯಾಸ ಹೊಂದಿರುವುದರಿಂದ, ಇವುಗಳನ್ನು ಬೇರೆ ಬೇರೆ ಕಟಕ್ಕೆ ಸೇರಿದುವುಗಳಂತೆ ಎಣಿಸಬೇಕು. ಇವರ ಡೂ ಒಂದೇ ಜಾತಿಯವಾದ ದರಿಂದ ಅವುಗಳ ಹೆಸರಿನಲ್ಲಿ ( ಹೈಬಿಸ್ಕಸ್ ೨೨