ಪುಟ:ಓಷದಿ ಶಾಸ್ತ್ರ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

176 ಓಷಧಿ ಶಾಸ್ತ್ರ ) [XI ನೆಯ ಹೆಸರುಗಳನ್ನೇ ಉಪಯೋಗಿಸುವುದು ಒಳ್ಳೆಯದು. ಹೀಗೆ ಮಾಡಿದರೆ ಹೆಸರುಗಳು ಬದಲಾಯಿಸುವುದಕ್ಕೆ ಅವಕಾಶ ನಿಲ್ಲದಿರುವುದು ಗಿಡಗಳ ತಿಳುವಳಿಕೆಯ ಸುಲಭವಾಗುವುದು. ನಮ್ಮ ದೇಶದವರು ಯಾವುದೊಂದು ಆಧಾರವೂ ಇಲ್ಲದೆ ಹೆಸರಿಡುವುದರಿಂದ, ಒಂದೇ ಗಿಡಕ್ಕೆ ನಾನಾವಿಧವಾದ ಹೆಸ ರಗಳುಂಟಾಗುವುದಕ್ಕೆ ಕಾರಣವಾಗಿರುವುದು. ಇದಕ್ಕೆ ಉದಾಹರಣವಾಗಿ ಹೂವರಳ ಗಿಡವನ್ನು ತೆಗೆದು ಕೊಳ್ಳಬಹುದು. ಕೆಲವು ಊರುಗಳಲ್ಲಿ ಈ ಗಿಡಕ್ಕೆಬೂರಗ ವೆಂಬ ಹೆಸರೂ, ಬೇರೆ ಕೆಲವು ಊರುಗಳಲ್ಲಿ ಹೂವರಳಿ ಎಂಬಹೆಸರೂ ಪ್ರಸಿದ್ದವಾಗಿರುವುದು. ಒಂದೇ ಹೆಸರು ಅನೇಕ ಗಿಡಗಳಿಗೆ ಉಪಯೋಗಿಸಲ್ಪಡುವುದೂ ಉಂಟು. ನಮ್ಮ ದೇಶದಲ್ಲಿ ಚಂಪಕ ವೆಂದು ಹೇಳಲ್ಪಡುವ ಗಿಡವೂ, ಮಲೆಯಾಳದಲ್ಲಿ ಇದೇ ಹೆಸರಿನಿಂದ ಕರೆಯಲ್ಪಡುವ ಗಿಡವೂ ಒಂದೇ ಅಲ್ಲ, ಇವು ಬೇರೆ ಬೇರೆ ಗಿಡಗಳಾಗಿರುವುವು. ಮರಗಣಿ ಗಿತಿಹೂವನ್ನು ಮಲೆಯಾಳದಲ್ಲಿ ಚಂಪಕನೆಂದು ಕರೆಯುವರು. ನಮ್ಮ ಆಹಾ ರಕ ಔಷಧಿಗಳಿಗೂ ಒದಗುವ ಗಿಡಗಳ ಹೆಸರುಗಳು ಹೊರತು, ಇತರಗಿಡ ಗಳ ಹೆಸರು ಹಲವು ಬಗೆಯಾಗಿರುವುದು. ಅನೇಕ ಗಿಡಗಳಿಗೆ ಹೆಸರೇ ಇಲ್ಲ. ಗಿಡಗಳಿಗೆ ಸೃಭಾಷೆಯ ಹೆಸರನ್ನೇ ಇಡಬೇಕೆಂಬುದು ಅನವಶ್ಯವು, ಸಾಧಾ ರಣವಾಗಿ ನಮ್ಮಲ್ಲಿ ಅನೇಕರು ಆಂಗ್ಲಭಾಷೆಯನ್ನು ತಿಳಿಯದಿದ್ದರೂ, ನನ್ನ ಕನ್ನಡ ಪದವನ್ನೇ ಉಪಯೋಗಿಸಬಹುದಾದ ಕಡೆಗಳಲ್ಲಿಯ, ಇಂ ಗ್ಲೀಷ ಪದಗಳನ್ನೇ ಉಪಯೋಗಿಸುವ ವಾಡಿಕೆ ಯುಂಟಲ್ಲವೆ? ಉದಾಹರಣ ವಾಗಿ, ಲೈಟು, ಸರ್ಮ್ಮ, ನೋಟೀಸು, ಮುಂತಾದ ಪದಗಳನ್ನು ನೋಡಿರಿ. ಬಹಳವಾಗಿ ಗಿಡಗಳಿಗೆ ಸಂಕೇತಪದಗಳನ್ನೇ ಇಡಬೇಕಾಗಿ ಬರುವುದಲ್ಲ ವೆ ? ಆದುದರಿಂದ ಸಸ್ಯ ಶಾಸ್ತ್ರವನ್ನು ತಿಳಿದವರು ಇಟ್ಟ ಹೆಸರನ್ನೆ ನಾವೂ ಬಳಕೆಯಲ್ಲಿ ತರುವುದುಚಿತವಾಗಿದೆ,