ಪುಟ:ಓಷದಿ ಶಾಸ್ತ್ರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯ ಜೀವವುಳ್ಳವುಗಳ ಗುಣವೂ ಲಕ್ಷಣವೂ. ಗಳು ಒಳಗೆಸೇರಿ, ಮೊದಲೇ ಒಳಗಿರುವ ಪದಾರ್ಥಗಳ ಸಂಗಡ ಒಂದಾಗು ವುದರಿಂದ ವೃದ್ದಿ ಯುಂಟಾಗುವುದು ಹೇಗೆಂದರೆ, ಜಂತುಗಳು ಆಹಾರ ಪದಾ ರ್ಥಗಳನ್ನು ಗಹಿಸಿ, ಅವುಗಳನ್ನು ದೇಹದೊಳಗಿರ ಬೇಕಾದ ಪದಾರ್ಥಗಳ ನ್ನಾಗಿ ಬದಲಾಯಿಸಿ ಕೊಳ್ಳುತ್ತ, ಅವುಗಳನ್ನೂ ಮೊದಲೇ ದೇಹದಲ್ಲಿರತಕ್ಕ ಭಾಗಗಳಲ್ಲಿ ಒಳ ಹುಗಿಸಿಕೊಂಡು, ವೃದ್ಧಿ ಹೊಂದುವುದು, ಆಹಾರ ಪದಾರ್ಥ ಗಳ, ದೇಹದೊಳಗಿರುವ ಪದಾರ್ಥಗಳ, ಒಂದೇ ವಿಧವಾದುವುಗಳಲ್ಲ. ಬೆವಳಿಕೆಗೆ ಬೇಕಾದ ಪದಾರ್ಥಗಳು ಬದಲಾವಣೆಯನ್ನು ಹೊಂದ ಬೇಕಾ ದುದು ಅವಶ್ಯಕವು, ಪ್ರಾಣಿಗಳು ಆಹಾರ ಪದಾರ್ಥಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ, ಅವುಗಳನ್ನು ತನ್ನ ವಸ್ತುಗಳನ್ನಾಗಿ ಮಾಡಿಕೊಳ್ಳುವ ಶಕ್ತಿ ಯನ್ನೂ ಹೊಂದಿರುವುವು. ದೇವವುಳ್ಳವುಗಳು ತನ್ನ೦ತಿರುವವುಗಳನ್ನು ಉಂಟುಮಾಡುವುವು. ಜೀವವಿಲ್ಲದವುಗಳು ಹೀಗೆ ಮಾಡಲಾರವು. ಇದನ್ನು ಸಂಕ್ಷೇಪಿಸಿ ಹೇಳಬೇಕಾದರೆ : ಜೀವವುಳ್ಳವುಗಳು ಆಹಾರವನ್ನು ಒಳಗೊಳ್ಳುವುವು. ಯಾವಾಗಲೂ ದೇಹದ ಒಳಗೆ ಬದಲಾವಣೆಯನ್ನು ಹೊಂದುತ್ತಲೇ ಇರುವುವು. ತಮ್ಮ ಹಾಗೆ ಇರುವವುಗಳನ್ನು ಉಂಟುಮಾಡುವುವು. ಜೀವವಿಲ್ಲದವುಗಳಾದ ರೋ ಆಹಾರವನ್ನು ತೆಗೆದುಕೊಳ್ಳಲಾರವು. ಒಳಭಾಗದಲ್ಲಿ ಬದಲಾವಣೆ ಗಳನ್ನು ಹೊಂದುವುದಿಲ್ಲ. ತಮ್ಮಂತಿರುವವುಗಳನ್ನೂ ಉಂಟುಮಾಡ ಲಾರವು. ಗಿಡಗಳು, ಮಲಿಕೆಗಳು, ಹುಲ್ಲು, ಇವೆಲ್ಲವೂ ಚಲನವಿಲ್ಲದೆ ಒಂದೇ ಕಡೆಯಲ್ಲಿ ನೆಲಸಿದ್ದರೂ, ಆಹಾರವನೊಳಕೊಂಡು, ಆ ಆಹಾರ ಪದಾರ್ಥ ಗಳನ್ನು ತನ್ನ ದೇಹದ ಭಾಗಗಳನ್ನಾಗಿ ಬದಲಾಯಿಸಿಕೊಂಡು, ಬೆಳೆಯುತ್ತಿ, ರುವುವಲ್ಲದೆ, ತನ್ನ ಹಾಗಿರುವವುಗಳನ್ನು ಉಂಟುಮಾಡುವ ಶಕ್ತಿಯನ್ನೂ