ಪುಟ:ಓಷದಿ ಶಾಸ್ತ್ರ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-236 ಓವಧಿ ಶಾಸ್ತ್ರ ) [XII ನೆಯ ದಲ್ಲದೆ, ಒಂದರೊಳಗೆ ಮತ್ತೊಂದು ಅಡಗಿರುವುದು, ಬೆಳೆ ಪಟ್ಟಿಯೆಂದು ಹೇಳಲ್ಪಡುವ 'ಭಾಗವು ಆ ಎಲೆಯ ಕಾವಿನ ಕೆಳಭಾಗವೇ. ನಾವು ಬೇಯಿಸಿ ತಿನ್ನುವ ಬಾಳೆದಿಂಡೇ ಶಾಖೆಯ ನಡುದಂಟು. ಗಮನಿಸಿ ನೋಡಿದರೆ ಪಟ್ಟಿ ಗಳು ದಿಂಡಿನಸಂಗಡ ಸೇರಿರುವ ಕಡೆಗಳ ಕಾಣುವುವು. ಈಭಾಗಗಳೆ ಗಿಣ್ಣುಗಳು, ಬಾಳೆ ಹೂವೆಂದು ನಾವು ಹೇಳುವ ಭಾಗವೇ, ಅದರ ಹೂವಿನ ತೆನೆ, ಇದರಲ್ಲಿ ಕೆಂಪಾಗಿರುವ ಪಟ್ಟಿಗಳೆಳ ಭಾಗದಲ್ಲಿ ಹೂಗಳು ಎರಡು ವರಿಸೆಗಳಾಗಿರುವುವು. ಹೂವಿನ ತೆನೆ ಯು ದಂಟಿನ ತುದಿಯಲ್ಲಿ ಉಂಟಾಗು ವುದರಿಂದ ಗೊನೆ ಯು ಬಿಟ್ಟ ಮೇಲೆ ಮರವು ಕೆಟ್ಟು ಹೋಗುವುದು, ಹೂಗಳಲ್ಲಿ ಪುಷ್ಪ ಕೋಶವು ಒಂದು ಅಂಚಿನಲ್ಲಿ ವಿಭಾಗ ಹೊಂದಿರುವುದು, ಇದರೊಳಗಡೆಯಲ್ಲಿ ಒಂದು ದಳವೂ, ಇದು ಕೇಸರಗಳ ಇರುವುದನ್ನು ನೋಡಿರಿ, ಅಂಡಾ ಶಯವು ನೀಚ, ಕಾಯಿಯು ತಿರುಳು ಗಾಯಿ, ಬೀಜಗ ಳುಂಟಾಗುವುದೇ ಇಲ್ಲ. ಬಾಳೆಯ ಕಂದು ಗಳಿಂದಲೇ ನಾವು ಬಾಳೆಗಿಡ ಗಳನ್ನು ವೃದ್ಧಿ ಪಡಿಸ ಬೇಕು. ಪಟ 189. - ಈ ಕುಟುಂಬಕ್ಕೆ ಸೇರಿದ ಬೇರೇ ಗಿಡಗಳಾವು ಬಾಳೆ ಹೂ,

  • : ವೆಂದರೆ:-ಹಸಿಶುಂಠಿ(Zingiber officinalis); ಅರಿಸಿನ (Curcuma longa), ಸುಗಂಧರಾಜ (Canna indica), ಏಲಕ್ಕಿಗಿಡ (Eletta'ia Cardamomum), ಇವುಗಳೇ. ಈ ಗಿಡ ಗಳಲ್ಲೆಲ್ಲ ಮಲವಹಗಳುಂಟು. ಹೂವೊಂದಕ್ಕೆ ಕೇಸರವೊಂದೇ ಇರುವುದು.