ಪುಟ:ಓಷದಿ ಶಾಸ್ತ್ರ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ. 247 ಬತ್ತ,ರಾಗಿ, ಸಾವೆ, ನವಣೆ, ಗೋದುವೆ, ಕಬ್ಬು, ಜೋಳ, ಬಿದಿರು, ಲಾವಂ ಚ, ಮುಸುಕಿನ ಜೋಳ, ಇವುಗಳನ್ನೆಲ್ಲ ಉದಾಹರಣವಾಗಿ ನೋಡಿರಿ. ೧೩ ನೆಯ ಅಧ್ಯಾಯ ಗಿಡಗಳ ಒಳಗಿನ ಸ್ವರೂಪ. ಓಷಧಿಗಳ ಆಕೃತಿಗಳಲ್ಲಿ, ಅವುಗಳ ಒಳಗಿನ ಸ್ವರೂಪವು ತಿಳಿದ ಹೊರತು, ಅವುಗಳ ಕೃತ್ಯ, ಬಾಕೆ, ಇವು ಮುಂತಾದುವನ್ನು ಸ್ಪಷ್ಟ ವಾಗಿ ತಿಳಿದುಕೊಳ್ಳುವುದು ಕಸ್ಮ, ಇದುವರೆಗೆ ನಾವು ಹೊರಗಿನಸ್ಸ ರೂಪ ಗಳನ್ನು ಪರಿಶೋಧಿಸುವುದಕ್ಕಾಗಿ ತೆಗೆದುಕೊಂಡ ಗಿಡಗಳೇ ಒಳಗಿನ ಸ್ವರೂಪವನ್ನು ತಿಳಿದುಕೊಳ್ಳುವುದಕ, ಸಾಕಾಗಿರುವುವು. ಹೊರಗಿನ ವಿಷಯಗಳನ್ನು ತಿಳಿದುಕೊಳ್ಳುವುದಕ್ಕಾಗಿ ಬೇರೆ ಸಹಾಯ ಸಾವು ಗಿಗಳ ಯಂತಗಳ ಬೇಕಾಗಿಲ್ಲ. ಚೆನ್ನಾಗಿ ಗಮನಿಸಿ ಕಣ್ಣಿನಿಂದ ನೋಡಿದನಾತ ಕ್ಕೆ, ಸ್ವಲ್ಪ ಹೆಚ್ಚು ಕಡಿಮೆಯಾಗಿ ಹೊರಗಣ ಎಲ್ಲಾ ಭಾಗದ ಸ್ವರೂಪವೂ ಗೋಚರಿಸುವುದು. ಒಳಗಿನಸ್ಸ ರೂಪವನ್ನು ತಿಳಿಸುವುದಕ್ಕೆ ಭೂತಕನ್ನಡಿಯು ಸಹಾಯವು ಬೇಕಾಗಿರುವುದು. ಮೊದಲೇ ತಿಳಿಸಲ್ಪಟ್ಟರು ವಂತೆ ಈ ಸಾಧನಸಾಮಾಗಿ)ಯು ಅತಿಸೂಕ್ಷ್ಮವಾದ ವಸ್ತುಗಳನ್ನೂ ದೊಡ್ಡ ದಾಗಿ ಕಾಣಿಸುವುದು. ಇದರಿಂದ ನಾವು ನಿಜಸ್ಥಿತಿಯನ್ನು ಸ್ಪಷ್ಟವಾಗಿ ಕಂಡುಕೊಳ್ಳಬಹುದು. ಸೂರ್ಯಕಾಂತಿಯ ಗಿಡವು ಸುಲಭವಾಗಿ ಬೆಳೆ ಮಾಡುವುದಕ್ಕೆ ಅನು ಕಲವಾದುದಾಗಿರುವುದರಿಂದಲೂ, ಒಳಗಿನ ಸ್ವರೂಪವೂ ಬಹಳ ತೊ ಡತಿ