ಪುಟ:ಓಷದಿ ಶಾಸ್ತ್ರ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ? ಗಿಡಗಳ ಒಳಗಿನ ಸ್ವರೂಪ, 249' (1) ಹೊರಗೆ ದಂಟನ್ನು ಸುತ್ತಿ ಕಾಣುತ್ತಿರುವ, ಬಹುಸುಲಭ ವಾಗಿ ಸುಲಿದು ಬಿಡಬಹುದಾದ, ಹಸುರುಬಣ್ಣವುಳ್ಳ ಮೇಲಿನ ಪಟ್ಟಿ. (2) ದಂಟಿನ ನಡುವೆ ಬೆಂಡಿನಂತೆ ಬಿಳುಪಾಗಿರುವ ದಿಂಡು. (3) ಇವೆರಡಕ್ಷನಡುವೆ ವಲಯಾಕೃತಿಯಾದ ನಾಳ ಕರ್ಚ ಸವ ಹವೆಂಬ ಕಠಿನವಾದ ಭಾಗ. ಈ ಮರುಭಾಗಗಳಿರುವುವು. ಇಲ್ಲಿ 199 ನೆಯ ಪಟದಲ್ಲಿ, ಮೇಲೆ ಹೇಳಿದಂತೆ ಕತ್ತರಿಸಿದ ತುಂಡು ಗಳ ಸ್ವರೂಪಗಳು ದುಂಡಾಗಿಯ, ಸೀಳಿದ ತುಂಡುಗಳ ನೆತ್ತಿಯು ಉದ್ದವಾಗಿಯ, ಕಾಣಿಸಲ್ಪಟ್ಟಿರುವುವು. ಇವುಗಳೊಳಗೆ ಮೇಲಿನ ಪಟ್ಟೆಯು ಕರೀಗೆರೆಗಳಾಗಿ ಕಾಣಿಸಲ್ಪಟ್ಟ ರುವುವು. ನಡುವೆ ಬಿಳುಪಾಗಿ ಕಾಣಿಸಲ್ಪಟ್ಟಿರುವುದು ದಿಂಡು, ಇವೆರಡಕ್ಕೂ ನಡುವೆ ನಾಳಕರ್ಚಸಮೂಹವು ಒತ್ತಾದ ರೇಖೆಗಳಿಂದ ಕಾಣಿಸಲ್ಪ ರುವುವು. ಎಲ್ಲಾ ತುಂಡುಗಳಲ್ಲಿಯ ನಡುವೆ ಇರುವ ದಿಂಡು, ಹೆಚ್ಚು ಕಡಿಮೆಯಗಿ ಒಂದೇ ಪ್ರಮಾಣವುಳ್ಳದ್ದಾಗಿರುವುದು. ಹೊರಗಿನ ಪಟ್ಟೆ, ನಾಳ ಕೂರ್ಚಗಳು, ಇವೆರಡೂ ಪ್ರಮಾಣದಲ್ಲಿ ವ್ಯತ್ಯಾಸ ಹೊಂದಿರು ವುವು. ಪಟ್ಟಿಯು ಎಳೆದಂಟಿನಲ್ಲಿ ತೆಳ್ಳಗೂ,ಬಲಿತುದರಲ್ಲಿ ಮಂದವಾಗಿಯ ಇರುವುದು. ನಡುದಂಟಿನಲ್ಲಿ , ಅಡಿಯದಂಟಿನಲ್ಲಿಯ, ನಾಳ ಕರ್ಚ ಸಮೂಹಗಳೆಂದೊಂದೂ ವೃತ್ತಾಕಾರವಾಗಿರುವುವು. ತುದಿಯ ತುಂಡಿನಲ್ಲಿ ಮಾತು, ಈ ನಾಳಸೂತುಗಳು ಅಖಂಡವಾಗಿ ಸೇರಿರದೆ,ಬೇರೆಬೇರೆ ಚಿಕ್ಕ ಚಿಕ್ಕ ತುಂಡುಗಳಾಗಿ, ಅಲ್ಲಿ ಸೇರಿಕೊಂಡಿರುವುವು. ಮತ್ತು ಈ ಭಾಗವು, ದಂಟಿನ ಅಡಿಯ ತುಂಡಿನಲ್ಲಿರುವುದಕ್ಕಿಂತ, ದಂಟಿನ ಮಧ್ಯಭಾಗದ ತುಂಡಿನಲ್ಲಿ, ಹೆಚ್ಚು ಅಗಲವಾಗಿರುವುದನ್ನು ನೋಡಿರಿ,