ಪುಟ:ಓಷದಿ ಶಾಸ್ತ್ರ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ, 257 25 ಹೊಕ್ಕು, ಎಲೆಯೊಳಗೆ ಸೇರಿ, ಅಲ್ಲಿ ಎಲೆಯ ಆಕೃತಿಯಿಂದ ಬಿಚ್ಚಿ ಹರಡಿ ಕೊಳವುವು. ದಂಟು ಬೆಳೆದ ಹಾಗೆ, ನಾಳಕರ್ಚಗಳು ಅಗಲವಾಗುತ್ತಾ ಬರು ವುವು, ದಿಂಡಿನರೇಖೆಯ ಕಡೆಗಳಲ್ಲಿ ಹೊಸಕೋರ್ಚಗಳ ಉಂಟಾಗುವುವು - ಇದರಿಂದ ನಾಳ ಕೂರ್ಚಗಳು ಸೇರಿ, ವಲಯಾಕೃತಿ ಹೊಂದುವುವು. ಈ ವಲಯವು ದಿನದಿನಕ್ಕೆ ಅಗಲದಲ್ಲಿ ಹೆಚ್ಚುತ್ತಲೇ ಹೋಗುವುವು. ಇದೇ ದಂಟು ದೊಡ್ಡ (ದಪ್ಪ) ದಾಗುವುದಕ್ಕೆ ಕಾರಣವು. 203 ನೆಯ ಪಟದಲ್ಲಿ ಎರಡು ನಾಳಕೂರ್ಚಗಳಿಗೂ ನಡುವೆ ಇರುವ ದಿಂಡಿನ ರೇಖೆಯಲ್ಲಿ, ಕೆಲವು ಗೂಡುಗಳು ಬೇರ್ಪಟ್ಟು ಬಹಳ ಚಿಕ್ಕದಾಗಿ ಕಾಣುವುವು. ಈ ಗೂ ಡುಗಳ ಸಮುದಾಯವು ಹೆಚ್ಚು ಕಡಿಮೆಯಾಗಿ ವೃದ್ಧಿಜನಕಗಳಿಗೆ ನೇರ ವಾಗಿಯೇ ಇರುವುವು. ಇ೦ತಹ ಗೂಡುಗಳ ಸಮೂಹವು ಎಲ್ಲಾ ದಿಂಡಿನ ರೇಖೆಗಳಲ್ಲಿ ಉಂಟಾಗುವುವು. ಇದರಿಂದ ನಾಳಕೊರ್ಚಗಳ ವೃದ್ಧಿ ಜನಕಗಳೆಲ್ಲಾ ಒಂದಾಗಿ ಸೇರಿಸಲ್ಪಟ್ಟು, ಒಂದು ವರ್ತುಲವಾಗಿ ಬಿಡುವುದು. ದಿಂಡಿನ ರೇಖೆಗಳಲ್ಲಿ ಉಂಟಾಗತಕ್ಕ ಚಿಕ್ಕ ಗೂಡುಗಳ ಸಮೂಹವೂ ವೃದ್ಧಿ ದನಕಗಳ ಸ್ವಭಾವ ವುಳ್ಳವುಗಳೇ. ವರ್ತುಲವಾದ ಮೇಲ ವೃದ್ಧಿಜನಕಗಳು ಮೇಲೆ ಮೇಲೆ ಹೆಚ್ಚಿ ಬೆಳೆಯುವುದಕ್ಕಾರಂಭಿಸುವುವು. ಹೀಗೆ ಹೊಸದಾಗಿ ಉಂಟಾಗತಕ್ಕ ಗೂಡುಗಳಲ್ಲಿ, ಕೆಲವು ವಲ್ಕಲದ ಕಡೆಗಾಗಿಯ, ಕೆಲವು ದಿಂಡಿನಕಡೆಗಾಗಿಯೂ ಇರುವುವು, ದಿಂಡಿನ ಕಡೆಗೆ ಉಂಟಾಗತಕ್ಕವು ದಾರುವಾಗಿ ಬದಲಾವಣೆ ಹೊಂದುವುವು, ನಲ್ಕ ಲದ ಕಡೆಯಲ್ಲಿರುವವು ಶಣವಾಗುವುವು. ಈ ಬದಲಾವಣೆಯು ಮೊದಲೇ ಇರುವ ನಾಲ್ಕೂರ್ಚಗಳ ವೃದ್ಧಿಜನಕಗಳಲ್ಲಿ ಉಂಟಾದರೆ, ಮೊದಲಿದ್ದ ದಾರುವೇ ಹೆಚ್ಚುವುದು. ದಿಂಡಿನ ರೇಖೆಯ ಪ್ರದೇಶದಲ್ಲಿ ಉಂಟಾದರೆ, 17