ಪುಟ:ಓಷದಿ ಶಾಸ್ತ್ರ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಒಳಗಿನ ಸ್ವರೂಪ, C61 ಗಳಂತೆ ಕಾಣುವುದು. ಈಗಿಣ್ಣಿನಂತಿರುವ ಭಾಗದ ನಡುವೆ, ಗೂಡುಗಳ ಅಡ್ಡ ಗೋಡೆಗಳು ಇರುವುವು. - ಕಣದಲ್ಲಿ ಪ್ರಧಾನವಾದ ಈ ನಾಳಗಳಲ್ಲಿ, ಅಡ್ಡಲಾಗಿ ಕತ್ತರಿಸಿದ ತುಂಡು ಗಳಲ್ಲಿ, ಅಡ್ಡ ಗೋಡೆಗಳು ಕಾಣುವುವು. ಈ ಗೋಡೆಗಳಲ್ಲಿ ದ್ವಾರಗಳು ಹೆಚ್ಚಾಗಿರುವುದರಿಂದ, ನೋಡಿದರೆ ಇವು ಒ೦ದರಿಯ ಹಾಗೆ ಕಾಣುವುವು - ಆದುದರಿಂದ ಈ ನಾಳಗಳಿಗೆ ಒಂದರಿಗೊಳವೆಗಳೆಂದು ಹೇಳಬಹುದು. ಸೂರ್ಯಕಾಂತಿಯ ದಂಟಿನಲ್ಲಿ ಈ ಒಂದರಿಯ ಕೆಳ ವೆಗಳು ಹೆಚ್ಚಾ ಗಿಲ್ಲವಾದುದರಿಂದ, ಕೆಲವು ತುಂಡುಗಳಲ್ಲಿ ಮಾತ್ರ ಈ ಕೊಳವೆಗಳು ಕಾಣು ವುವು, ಕುಂಬಳದ ದಂಟನ ಶಣದ ಪ್ರದೇಶದಲ್ಲಿ, ಈ ಒಂದರಿಯ ಕೊಳವೆಗಳು ದೊಡ್ಡದಾಗಿಯೂ ಹೇರಳವಾಗಿಯ, ಇರುವುದರಿಂದ, ಇವುಗಳನ್ನು ಈ ದಂಟಿನ ತುಂಡುಗಳಲ್ಲಿ ಸುಲಭವಾಗಿ ಕಂಡುಕೊಳ್ಳ ಬಹುದು. ಒ೦ದರಿಯ ಕೊಳವೆಗಳ ಸ್ವರೂಪವು 205 ನೆಯ ಪಟದಲ್ಲಿ ಚೆನ್ನಾಗಿ ಕಾಣುವುವು. ಉದ್ದ ಕ್ಕೆ ಸೀಳಿದ ಸೂರ್ಯಕಾಂತಿಯ ದಂಟಿನ ತುಂಡಿನಲ್ಲಿ, ಒಂದ ರಿಯ ಕೆಳ ವೆಗಳಿಗೂ ದಾರುವಿಗೂ ನಡುವೆ ತಿಳಿಯುವ ವೃದ್ಧಿ ಜನಕಗಳ ಗೂಡುಗಳು ಬಹಳ ಚಿಕ್ಕವುಈ ಗೂಡುಗಳಲ್ಲಿ ಜೀವಾಣುವು ಯಾವಾ ಗಲ ತುಂಬಿಯೇ ಇರುವುದು, ಇವು ವಿಭಾಗ ಹೊಂದುತ್ತಲೇ ಇರುವ ಶಕ್ತಿಯುಳ್ಳವು. ದಾರುವೆಂಬುದು ಹಲವು ಬಗೆಯ ನಾಳಗಳ ಮೊತ್ತವೇ. ಈ ನಾಳಗಳ ಗೋಡೆಯು ಬಹಳ ಮಂದವಾದುವು. ಈ ಮಂದ ದಲ್ಲಿಯೂ, ಒಂದರಂತೆ ಮತ್ತೊಂದು ಸಮವಾಗಿರುವುದಿಲ್ಲ. ಹಲವು ಬಗೆಯಾಗಿರುವುವು, ವೃದ್ಧಿ ದನಕಗಳ ಪಕ್ಕದಲ್ಲಿರುವ ಕೊಳವೆಯ ಗೋಡೆಗಳಲ್ಲಿ ತಿಳಿಯುವ ಹಳ್ಳಗಳಹೊರತು, ಉಳಿದ ಭಾಗಗಳು ಮುಂ ದವಾಗಿರತಕ್ಕ ಭಾಗಗಳೇ, ಇ೦ತಹ ನಾಳಗಳಿಗೆ ತಗ್ಗು (ಹಳ್ಳ) ಗೋಳ ವೆ ಗಳೆಂದು ಹೆಸರು. ಇದಕ್ಕೆ ಪಕ್ಕದಲ್ಲಿರುವ ಸಾಧಾರಣವಾದ ಗೂಡು