ಪುಟ:ಓಷದಿ ಶಾಸ್ತ್ರ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಸ್ವಭಾವವೂ ಆಕಾರವೂ. ಮಿಗೆಮೇಲೆ ಹೊರಟುಬರುವ ಭಾಗಗಳಷಸೇರಿ ಪ) ಕಾಂಡವೆನಿಸುವುದ.. ತೆಂಗು, ಓಲೆ, ಅಡಿಕೆ ಮೊದಲಾದವುಗಳಲ್ಲಿ, ಈಪ)ಕಾಂಡವು ಕವಲುಗಳಾಗಿ ಹೊರಡದೆ, ಒಂದೇ ಶಾಖೆಯುಳ್ಳವಾಗಿದೆ. ಆಲ, ಹುಣಿಸೆ, ಸುರಹೊನ್ನೆ, ಅಗಸೆ, ಇವುಗಳಂತಿರುವ ವೃಕ್ಷವರ್ಗಗಳಲ್ಲಿ, ಸಕಾಂಡವು ಅನೇಕ ಕವಲು ಗಳುಳ್ಳವುಗಳಾಗಿವೆ. ಚಿತ್ರದಲ್ಲಿ ಕಾಣುವ ಸುರಹೊನ್ನೆ ಸನಿಯಲ್ಲಿ, ಸಕಾಂಡವು ಒಂದೇ ಕವಲುಳ್ಳುದಾಗಿದೆ. ಅದರ ಬೇರು ಅನೇಕ ಕವಲುಗಳುಳ್ಳದಾಗಿರು ವುದು. ಸಸಿಯು ಬಹಳ ಚಿಕ್ಕದಾಗಿರುವಾಗಲೇ, ತಾಯಿಬೇರಿನಲ್ಲಿ ಕವಲು ಗಳು ಉಂಟಾಗುವುವು. ತಾಯಿಬೇರು, ಅದರ ಕವಲುಗಳು ಇವಮ್ಮ, ಬೆಳಕು ತಗುಲದಂತೆ, ನೆಲದೊಳಕ್ಕೆ ವ್ಯಾಪಿಸುವುವು. ಸುರಹೊನ್ನೆಮರದ ಕವಲುಗಳ ಯ, ಇತರವೃಕ್ಷಗಳ ಕವಲುಗಳಲ್ಲಿಯೂ, ಎಲೆಗಳು ಬಹಳವಾಗಿ ಉಂ ಟಾಗುವುವು. ಈ ಎಲೆಗಳೆಲ್ಲವೂ, ಕೊಂಬೆಯಲ್ಲಿ ಹಲವು ಬಗೆಯಾಗಿಯ, ಹಲವು ಕಡೆಗಳಲ್ಲಿಯ, ಸೇರಿಕೊಂಡಿರುವುವು. ದಂತಿನಲ್ಲಿ ಎಲೆಗಳು ಸೇರಿರುವ ಸ್ಥಾನವು ಗಂಟು, ಅಥವಾ ಗಿಣ್ಣು (ಪರ್ವ) ಎನಿಸುವುದು. ಇಂಥ ಎರಡು ಗಿಣಗಳ ನಡುವೆ ಇರುವ ದಿಂಡಿಗೆ ಪರಮಧ್ಯವೆಂದು ಹೇಳಬಹುದು. ಒ೦ದೊ೦ದು ಗಿಣ್ಣಿನಲ್ಲಿಯ, ಎಲೆಗಳು ಸೇರಿಕೊಂಡಿರುವುದರಿಂದ, ಆ ದಿಂಡಿಗೂ ಎಲೆಗೂ ನಡುವೆ, ಒಂದು ಮೂಲೆ ಅಥವಾ ಕೊಣ ವುಂಟಾಗಿರುವುದು. ಇದಕ್ಕೆ ಗಿಣ್ಣುಮಲೆ ಎನಬಹುದು, ಸುರ ಹೊನ್ನೆ ಗಿಡದ ಕವಲುಗಳಲ್ಲಿ ಒಂದೊಂದು ಗಿಣ್ಣುಗಳಲ್ಲಿಯೂ, ಎರಡೆರ ಡೆಲೆಗಳಿರುವುವು. ಇವೆರಡೆಲೆಗಳೂ ಒಂದಕ್ಕೊಂದಕ್ಕೆ ಕೀಳು ಮೇಲಾಗಿರದೆ,.. ಸಮವಾಗಿಯೂ ಇದಿರಿದಿರಾಗಿಯೂ ಇರುವುವು. ಆದರೆ, ಒಂದು ಕೊಂಬೆಯಲ್ಲಿ ಒಂದು ಗಿಣ್ಣಿನಲ್ಲಿರುವ ಎರಡೆಲೆಗಳ ಯಾವಕಡೆಗೆ ತಿರುಗಿರುವುವೋ, ಹಾಗೆ