ಪುಟ:ಓಷದಿ ಶಾಸ್ತ್ರ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಒಳಗಿನ ಸ್ವರೂಪ, 263 ಇರುವುದರಿಂದ, ಇನ್ನೂ ಒಂದೆರಡು ಗಿಡಗಳ ದಂಟನ್ನೂ ಪರೀಕ್ಷಿಸುವು ದುತ್ತಮ. ಪಟ 206-ಆಡುಮುಟ್ಟದ ಸೊಪ್ಪಿನ ಜಾತಿಯ ಗಿಡದ ದಂಟನ್ನು ಕತ್ತರಿಸಿದ ತುಂಡಿನ ನೆತ್ತಿಯ ಸ್ವರೂಪ, 70 ಮಡಿ ಹೆಚ್ಚಿಸಿ ತೋರಿಸಿದೆ. ಆಡುಮುಟ್ಟದ ಸೊಪ್ಪಿನಜಾತಿಗೆ ಸೇರಿದ ಒಂದುಗಿಡದ ದಂಟನ್ನೂ ಕುಂಬಳದ ಗಿಡದ ದಂಟನ್ನೂ ಪರಿಶೋಧಿಸಿರಿ, ಆಡುಮುಟ್ಟದ ಸೊಪ್ಪಿನ ಜಾತಿಯ ಗಿಡದ ದಂಟಿನಲ್ಲಿ, ಕತ್ತರಿಸಿದ ತುಂಡಿನ ಸ್ವರೂಪವು 206 ನೆಯ ಪಟದಲ್ಲಿ ಕಾಣಿಸಲ್ಪಟ್ಟಿರುವುದು. ಈ ದಂಟಿನಲ್ಲಿ ವಲ್ಕಲವು ಅಗಲವಾಗಿಯ ಹಲವು ಗೂಡುಗಳ ಅಡಕುಗಳುಳ್ಳದಾಗಿಯ, ಇರುವುದಲ್ಲದೆ, ಕೆಲವು ಗೂಡುಗಳ ಗೋಡೆಗಳು ಮುಂದವಾಗಿರುವುವು. ಹೀಗೆ ಮುಂದವಾದ ಗೋಡೆ ಯುಳ್ಳ ಗೂಡುಗಳಿಂದಾದ ಸಾಲುಗಳು, ಈ ದಂಟಿನ ನಲದ ಪ) ದೇಶ ದಲ್ಲಿ ಬಳೆಯಂತೆ ಸುತ್ತಿಕೊಂಡಿರುವುವು. ನಾಳ ಕೂರ್ಚಗಳು ಮೂರು ಕಾ ಇಣುವುವು. ಇವು ಅಗಲವಿಲ್ಲದ ಒತ್ತಾದ ಎರಡು ದಿಂಡಿನ ರೇಖೆಗಳಿಂದ ವಿಭಾಗಿ ಸಲ್ಪಟೂ ಇರುವುವು. ನಾಳಕರ್ಚಗಳಲ್ಲಿ ಶಣಕ ದಾರುವಿಗೂ ನಡುವೆ