ಪುಟ:ಓಷದಿ ಶಾಸ್ತ್ರ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಗಿಡಗಳ ಒಳಗಿನ ಸ್ವರೂಪ, 265 ತೊಂದು ಸುತ್ತಾಡಿಯ ಇರುವುವು. ನಡುವೆ ಪೊಳ್ಳಾಗಿರುವುದೇ ದಿಂ ಡಿರತಕ್ಕೆ ಸ್ಥಾನವು, ಇದರಲ್ಲಿ ದಿಂಡು ಕೆಟ್ಟು ಹೋಗಿರುವುದರಿಂದ ಪೊಳ್ಳಾಗಿ ರುವುದು. ಒಳಗಡೆಯ ಸುತ್ತಾದ ನಾಲ್ಕೂರ್ಚಗಳಿಗೆ ನಡುವೆಯ ಒಂದೆರಡು ಕಡೆಗಳಲ್ಲಿ ಪೊಳ್ಳುಗಳಿರುವುವು. ನಾಳಕರ್ಚಗಳಿಗೆ ಒಳ ಗಡೆಗಾಗಿ ಇರುವ ಗೂಡುಗಳನ್ನೂ ದಿಂಡಿನ ಭಾಗವೇ, ಎಳಿಯದಂಟಿನಲ್ಲಿ see \ ಪಟ 208.-ಕುಂಬಳ ದದಂಟನ್ನು ಕತ್ತರಿಸಿದ ತುಂಡಿನ ನೆತ್ತಿಯ ಸ್ವರೂಪ, ಸುಮಾರು 100 ಮುಡಿ ದೊಡ್ಡದು, ದಿಂಡನ್ನೂ ಸೇರಿಯೇ ಇರುವುದು, ದಂಟು ಬೆಳೆದಹಾಗೆಲ್ಲಾ ದಿಂಡಿನ ನಡುವೆ ಇರುವ ಗೂಡುಗಳು ವಿಭಾಗಹೊಂದಿ, ದಂಟಿನ ನಡುವೆ ಪೊಳ್ಳುಂಟಾಗಿ, ಇವು ನಾಳಕರ್ಚಗಳಿಗೆ ಇದಿರಿನಲ್ಲಿ ಮಾತ್ರವೇ ಸೇರಿ ನಿಲ್ಲುವುವು. ನಾಳ ಕೂರ್ಚಗಳ ವಲಯಗಳನ್ನು ಸುತ್ತಿಕೊಂಡು ಹೊರಗಡೆಗಾಗಿರುವ ಗೂಡುಗಳ ಸಮೂಹವೇ ವಲ್ಕಲವು.