ಪುಟ:ಓಷದಿ ಶಾಸ್ತ್ರ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ, 269 ಈ ಸುತ್ತುಗಳು ಹೆಚ್ಚು ಕಡಿಮೆಯಾಗಿ ವರ್ಷವೊಂದಕ್ಕೆ ಒಂದರಂತೆ ಕೆಲಕೆಲವು ಮರಗಳಲ್ಲಿ ಹೆಚ್ಚುತ್ತಾ ಬರುವುದರಿಂದ, ಈ ಸುತ್ತುಗಳಿಗೆ ವರ್ಷ ವಲಯಗಳೆಂದು ಹೆಸರಿಟ್ಟಿರುವರು. ವರ್ಷವಲಯಗಳು ಕರತಪ್ಪದೆ ಬೆಳೆದು ಬರುವ ಗಿಡಗಳು ನಮ್ಮ ದೇ ಶೆದಲ್ಲಿ ಸ್ವಲ್ಪ ವೇ, ಇದೂ ಅಲ್ಲದೆ ಕೆಲವು ಮರಗಳಲ್ಲಿ ದಿಂಡಿನ ರೇಖೆಯು ದಾರುವಿನ ಒಳಹೊಕ್ಕು, ಕೆಲವು ಉದ್ದವಾಗಿಯ, ಕೆಲವು ಗಿಡ್ಡನಾಗಿಯ, ಇರುವುದನ್ನೂ ನೋಡಬಹುದು. ದಾರುವು ಬೆಳೆದು ಹೆಚ್ಚುತ್ತಿರುವುದು ವೃದ್ಧಿಜನಕಗಳ ಬೆಳೆವಳಿಕೆ ಯಿಂದಲೇ, ವೃದ್ಧಿಜನಕಗಳಲ್ಲಿರುವ ಗೂಡುಗಳು ಬೇರೆಬೇರೆಯಾಗಿ ಗೂಡು ಗಳ ಸಂಖ್ಯೆಯನ್ನು ಹೆಚ್ಚಿಸುವುವು. ಹೀಗೆ ಉಂಟಾಗುವ ಗೂಡುಗಳಲ್ಲಿ ಕೆಲವು ದಾರುವಿಗೆ ಸಮಾನವಾಗಿರುವುವು. ಇವಪ್ನ ದಾರುವಿನ ಗೂಡುಗಳಾಗಿ ಯ ನಾಳಗಳಾಗಿ ಬದಲಾಯಿಸುವುವು. ಹೀಗೆ ವೃದ್ಧಿ ದನಕವು ಬೆಳೆ ಯುತ್ತಲೇ ಬಂದರೆ, ದಾರುವೂ ಹೆಚ್ಚುತ್ತಲೇ ಬರುವುದು, ಕಣದ ಕಡೆಗಾಗಿ ಇರುವವು ಶಣದ ಭಾಗಗಳಾಗಿಯೇ ಬದಲಾಯಿಸುವುವು. ಆದರೆ ಶಣದ ಗೂಡಿನ ಪರೆಗಳು ಸಣ್ಣನಾಗಿರುವುದರಿಂದ, ದಾರುವಿನಿಂದ ಒತರಿಸಲ್ಪಟ್ಟು, ಹಳೆಯ ಶಣಗಳು ನಶಿಸುವುವು. ಹೊಸದಾದುವು ಮಾತ) ನಿಂತಿರುವುವು. ಹಳೆಯವು ಹೋಗಿ ಬಿಡುವುದರಿಂದ ಗಿಡಕ್ಕೆ ಕೇಡೇನೂ ಆಗುವುದಿಲ್ಲ, ನಿಂತಿರುವ ಹೊಸ ಕಣಗಳು ಮಾತ್ರವೇ ಗಿಡಗಳ ಬಾಳಿಕೆಗೆ ಸಾಕಾದುವುಗಳಾಗಿರುವುವು. ಮೊದಲೇ ಸೂಚಿಸಲ್ಪಟ್ಟಿರುವಂತೆ ದಾರುವಿನ ಬೆಳೆವಳಿಕೆಯು ಗಿಡ ಗಳ ಬಾಳಿಕೆಗೆ ಮುಖ್ಯ ಕಾರಣವಾಗಿದೆ. ಗಿಡಗಳಲ್ಲಿ ನೀರು ಏರಿ ಸೇರುವು ದು ದಾರುವಿನ ಮಾರ್ಗದಿಂದಲೇ, ಎಲೆಗಳ ಕವಲುಗಳ ಹೆಚಾ ದಪ್ಪ ದಾರುವು ಹೆಚ್ಚಿರಬೇಕಾದುದು ಅವಶ್ಯವು .